ಕನ್ನಡ ಸುದ್ದಿ  /  ಜೀವನಶೈಲಿ  /  Business News: ನೀವು ಪೇಟಿಎಂ ಫಾಸ್ಟ್‌ ಟ್ಯಾಗ್‌ ಖಾತೆದಾರರೇ? ಮಾರ್ಚ್‌ 15ಕ್ಕೂ ಮುನ್ನ ಏನು ಮಾಡಬೇಕು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ

Business News: ನೀವು ಪೇಟಿಎಂ ಫಾಸ್ಟ್‌ ಟ್ಯಾಗ್‌ ಖಾತೆದಾರರೇ? ಮಾರ್ಚ್‌ 15ಕ್ಕೂ ಮುನ್ನ ಏನು ಮಾಡಬೇಕು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ

Paytm Fast Tag: ಖಾತೆಗಳ ದುರ್ಬಳಕೆ ಆಗುವುದನ್ನು ತಪ್ಪಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ನಿರ್ಬಂಧ ವಿಧಿಸಿದೆ. ಫೆ 29 ರಂದು ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸಿ ಮಾರ್ಚ್‌ 15ವರೆಗೂ ಮುಂದೂಡಿದೆ. ಈ ಮೂಲಕ ಬಳಕೆದಾರರಿಗೆ ರಿಲೀಫ್‌ ಸಿಕ್ಕಂತೆ ಆಗಿದೆ.

ಪೇಟಿಎಂ ಫಾಸ್ಟ್‌ ಟ್ಯಾಗ್‌ ವಿಚಾರಕ್ಕೆ ಸಂಬಂಧಿಸಿದ ಗೊಂದಲಕ್ಕೆ ಉತ್ತರ
ಪೇಟಿಎಂ ಫಾಸ್ಟ್‌ ಟ್ಯಾಗ್‌ ವಿಚಾರಕ್ಕೆ ಸಂಬಂಧಿಸಿದ ಗೊಂದಲಕ್ಕೆ ಉತ್ತರ

Paytm Fast Tag: ಒಂದೇ ಕಾರ್ಡ್‌ ಬಳಸಿ ಹಲವು ಖಾತೆಗಳನ್ನು ತೆಗೆಯುವುದು, ಕೆಲ ಖಾತೆಗಳಲ್ಲಿ ನಿಗದಿತ ಮಿತಿ ಮೀರಿ ಭಾರೀ ಮೊತ್ತದ ವಹಿವಾಟು ನಡೆದಿರುವುದು, ಆರ್‌ಬಿಐ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇರುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ಫೆ. 29ರಂದೇ ನಿರ್ಬಂಧ ವಿಧಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿರ್ಬಂಧದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಿದೆ. ಗ್ರಾಹಕರಿಗೆ ಹೆಚ್ಚುವರಿ 15 ದಿನಗಳ ಕಾಲ ಗಡುವು ನೀಡಲಾಗಿದ್ದು ಬಳಕೆದಾರರಿಗೆ ರಿಲೀಫ್‌ ದೊರೆತಂತೆ ಆಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆ ಹೊಂದಿರುವ ಗ್ರಾಹಕರು, ವ್ಯಾಪಾರಿಗಳು, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC) ಬಳಕೆದಾರರು, ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ ಬಳಸಿ ಪೇಮೆಂಟ್‌ ನಡೆಸುವವರು ಕೂಡಾ ತುಸು ನಿರಾಳರಾಗಬಹುದು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆ ಹೊಂದಿರುವ ಬಳಕೆದಾರರಿಗೆ, ನಿಷೇಧದ ಬಗ್ಗೆ ಕೆಲವು ಗೊಂದಲಗಳಿವೆ. ಬಳಕೆದಾರರು ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗಿದ್ದು ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಮಾರ್ಚ್‌ 15ರ ನಂತರ ಪೇಟಿಎಂ ಫಾಸ್ಟ್‌ಟ್ಯಾಗನ್ನು ಟೋಲ್‌ ಪಾವತಿಗೆ ಬಳಸಬಹುದೇ?

ಸದ್ಯಕ್ಕೆ ಲಭ್ಯವಿರುವ ಮೊತ್ತದ ಮುಖಾಂತರ ನೀವು ಮಾರ್ಚ್‌ 15ರ ನಂತರವೂ ಪೇಟಿಎಂ ಫಾಸ್ಟ್‌ಟ್ಯಾಗನ್ನು ಟೋಲ್‌ ಪಾವತಿಗೆ ಬಳಸಬಹುದು. ಆದರೆ ನೀವು ಮತ್ತೆ ಅದನ್ನು ರೀಚಾರ್ಜ್‌ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಕಡಿಮೆ ಮೊತ್ತ ಅಥವಾ 0 ಬ್ಯಾಲೆನ್ಸ್‌ ಇದ್ದರೆ ಫಾಸ್ಟ್‌ ಟ್ಯಾಗ್‌ ಬಳಸುವುದು ಸಾಧ್ಯವಿಲ್ಲ.

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಫಾಸ್ಟ್‌ ಟ್ಯಾಗ್‌ ಪೋರ್ಟ್‌ ಮಾಡಿಕೊಳ್ಳಬಹುದೇ?

ಇದನ್ನೂ ಓದಿ: ಪೇಟಿಎಂನಲ್ಲಿ ನಮ್ಮ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳುವುದು ಹೇಗೆ; ಈ ವಿಧಾನ ಅನುಸರಿಸಿ -Namma Metro Card Recharge

ಫಾಸ್ಟ್‌ ಟ್ಯಾಗ್‌ಗೆ ಇದುವರೆಗೂ ಪೋರ್ಟ್‌ ಮಾಡಿಕೊಳ್ಳುವ ಸೌಲಭ್ಯವಿಲ್ಲ. ಆದ್ದರಿಂದ ಒಂದು ಬ್ಯಾಂಕಿನಿಂದ ಮತ್ತೊಂದು ಬ್ಯಾಂಕಿಗೆ ವರ್ಗಾಯಿಸಿಕೊಳ್ಳಲು ಸಾಧ್ಯವಿಲ್ಲ.

ಸದ್ಯದ ಪೇಟಿಎಂ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತವನ್ನು ಮತ್ತೊಂದು ಬ್ಯಾಂಕ್‌ನಿಂದ ನೀಡಲಾಗಿರುವ ಪೇಟಿಎಂ ಫಾಸ್ಟ್‌ ಟ್ಯಾಗ್‌ಗೆ ವರ್ಗಾಯಿಸಿಕೊಳ್ಳಲು ಸಾಧ್ಯವೇ?

ಫಾಸ್ಟ್‌ ಟ್ಯಾಗ್‌ನಲ್ಲಿ ಕ್ರೆಡಿಟ್ ಬ್ಯಾಲೆನ್ಸ್ ವರ್ಗಾವಣೆಯ ಸೌಲಭ್ಯ ಕೂಡಾ ಲಭ್ಯವಿರುವುದಿಲ್ಲ. ಆ ಬ್ಯಾಲೆನ್ಸ್ ಬಳಸಿಕೊಳ್ಳುವುದು ನಿಮಗೆ ಇರುವ ಏಕೈಕ ಆಯ್ಕೆ. ಅಥವಾ ನಿಮ್ಮ ಫಾಸ್ಟ್‌ ಟ್ಯಾಗ್‌ ಖಾತೆ ಮುಚ್ಚಿ, ಮರು ಪಾವತಿಗಾಗಿ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ ವಿನಂತಿಸಬಹುದು.

ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನಿಂದ ನೀಡಲಾದ ಫಾಸ್ಟ್‌ ಟ್ಯಾಗ್‌ ಖಾತೆ ಕ್ಲೋಸ್‌ ಮಾಡುವುದು ಹೇಗೆ?

ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಪೇಟಿಎಂ ಅಪ್ಲಿಕೇಶನ್ ಮೂಲಕ ನೀವು ಖಾತೆಯನ್ನು ಮುಚ್ಚಬಹುದು. ಪೇಟಿಎಂ ಫಾಸ್ಟ್‌ ಟ್ಯಾಗ್‌ ಟೋಲ್ ಫ್ರೀ ಸಂಖ್ಯೆ 1800-120-4210. ನೀವು ಕರೆ ಮಾಡಿ ಫಾಸ್ಟ್‌ ಟ್ಯಾಗ್‌ ಮತ್ತು ವಾಹನ ನೋಂದಣಿ ಸಂಖ್ಯೆ ಅಥವಾ ಟ್ಯಾಗ್ ಐಡಿಯೊಂದಿಗೆ ನೋಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀವು ಒದಗಿಸಬೇಕಾಗುತ್ತದೆ.

ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ಖಾತೆಯನ್ನು ಮುಚ್ಚಲು ಮನವಿ ಮಾಡಬಹುದು. ವಿನಂತಿಯನ್ನು ಸಹ ಮಾಡಬಹುದು. ಪೇಟಿಎಂ ಅಪ್ಲಿಕೇಶನ್‌ ಸೇವೆಗಳ ವಿಭಾಗ ದಲ್ಲಿ 'ಫಾಸ್ಟ್‌ಟ್ಯಾಗ್ ನಿರ್ವಹಿಸಿ' ಎಂಬ ಆಯ್ಕೆ ಇರುತ್ತದೆ. ಅದರಲ್ಲಿ ನೀವು 'ಕ್ಲೋಸ್ ಫಾಸ್ಟ್‌ ಟ್ಯಾಗ್' ಆಯ್ಕೆಯನ್ನು ಒತ್ತಿ. ನಂತರ ನಿಮ್ಮ ಫಾಸ್ಟ್‌ಟ್ಯಾಗ್ ಮುಚ್ಚಲು ಕಾರಣವನ್ನು ಆಯ್ಕೆ ಮಾಡಲು ಕೇಳುತ್ತದೆ. ಸಂಬಂಧಿತ ಆಯ್ಕೆಯನ್ನು ಕ್ಲಿಕ್‌ ಮಾಡಿ.

ಖಾತೆ ಮುಚ್ಚಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಒಮ್ಮೆ ನೀವು ಮನವಿ ಮಾಡಿದ ನಂತರ ನಿಮ್ಮ ಫಾಸ್ಟ್‌ಟ್ಯಾಗ್ ಮುಚ್ಚಲು ಕನಿಷ್ಠ 5-7 ಕೆಲಸದ ದಿನಗಳನ್ನು ಬೇಕಾಗುತ್ತದೆ. ನಿಮ್ಮ ಪೇಟಿಎಂ ಅಪ್ಲಿಕೇಶನ್ ಮೂಲಕ ನೀವು ಖಾತೆ ಮುಚ್ಚಿದಾಗ ನಿಮ್ಮ FASTag ಅನ್ನು 5-7 ಕೆಲಸದ ದಿನಗಳಲ್ಲಿ ಮುಚ್ಚಲಾಗುತ್ತದೆ. ಭದ್ರತಾ ಠೇವಣಿ ಮತ್ತು ನಿರ್ವಹಿಸಿದ ಕನಿಷ್ಠ ಬ್ಯಾಲೆನ್ಸ್ ಅನ್ನು ನಿಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯಾಲೆಟ್‌ಗೆ ಮರುಪಾವತಿಸಲಾಗುತ್ತದೆ ಎಂಬ ಸಂದೇಶವನ್ನು ತೋರಿಸಲಿದೆ.

ವಾಹನಕ್ಕೆ ಲಗತ್ತಿಸಲಾದ ಪೇಟಿಎಂ ಫಾಸ್ಟ್‌ಟ್ಯಾಗನ್ನು ಏನು ಮಾಡುವುದು?

ಒಮ್ಮೆ ನೀವು ಪೇಟಿಎಂ ಫಾಸ್ಟ್‌ ಟ್ಯಾಗ್‌ ಮುಚ್ಚಲು ಮನವಿ ಮಾಡಿದ ನಂತರ ಅದು ನಿಷ್ಕ್ರಿಯಗೊಳ್ಳುತ್ತದೆ. ಆದ್ದರಿಂದ ವಾಹನಗಳ ಮೇಲೆ ಅಂಟಿಸಿರುವ ಫಾಸ್ಟ್‌ ಟ್ಯಾಗನ್ನು ತೆಗೆದುಹಾಕಿ. ಈ ರೀತಿ ನಾಶ ಮಾಡಲಾದ ಫಾಸ್ಟ್‌ ಟ್ಯಾಗನ್ನು ಫೋಟೋ ತೆಗೆದು ಅಪ್‌ಲೋಡ್‌ ಮಾಡಿದ ನಂತರ ಮನವಿಯನ್ನು ಸಬ್‌ಮಿಟ್‌ ಮಾಡಿ.

ಹೊಸ ಫಾಸ್ಟ್‌ ಟ್ಯಾಗನ್ನು ಎಲ್ಲಿಂದ ಖರೀದಿಸುವುದು?

ವಾಹನ ಚಲಿಸುತ್ತಿರುವಾಗ ನೇರವಾಗಿ ಟೋಲ್ ಪಾವತಿಗಳನ್ನು ಮಾಡಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧನವೇ ಫಾಸ್ಟ್‌ ಟ್ಯಾಗ್‌. ಇದನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿಯಂತ್ರಿಸುತ್ತದೆ. NHAI ಇತ್ತೀಚೆಗೆ ತನ್ನ ಅನುಮೋದಿತ ಬ್ಯಾಂಕ್‌ಗಳ ಫಾಸ್ಟ್‌ಟ್ಯಾಗ್ ಸೇವೆಗಳಿಗಾಗಿ ಪೇಟಿಎಂ ಪಾವತಿ ಬ್ಯಾಂಕ್ ಅನ್ನು ತೆಗೆದುಹಾಕಿದೆ. ಇತ್ತೀಚೆಗೆ NHAI ಹೊರಡಿಸಿದ ಅಧಿಕೃತ ಬ್ಯಾಂಕ್‌ಗಳ ಪಟ್ಟಿಯು 39 ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಒಳಗೊಂಡಿದೆ. ಆ ಮೂಲಕ ಹೊಸ ಫಾಸ್ಟ್‌ ಟ್ಯಾಗ್‌ ಪಡೆಯಬಹುದು.