ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ-business news paytm fastag port how can you port an account to other banks detail uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ

ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ

ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಪೇಟಿಎಂ ಫಾಸ್ಟ್ಯಾಗ್ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ.

ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ (ಸಾಂಕೇತಿಕ ಚಿತ್ರ)
ಪೇಟಿಎಂ ಫಾಸ್ಟ್ಯಾಗ್ ಪೋರ್ಟ್‌; ಇತರೆ ಬ್ಯಾಂಕ್‌ಗಳಿಗೆ ನಿಮ್ಮ ಖಾತೆಯನ್ನು ಪೋರ್ಟ್‌ ಮಾಡುವುದು ಹೇಗೆ, ಇಲ್ಲಿದೆ ವಿವರ (ಸಾಂಕೇತಿಕ ಚಿತ್ರ)

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ತನ್ನ 32 ಅಧಿಕೃತ ಬ್ಯಾಂಕುಗಳ ಪಟ್ಟಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ಅನ್ನು ಸೇರಿಸಿಲ್ಲ.

ಅಧಿಕೃತ ಬ್ಯಾಂಕುಗಳ ಪಟ್ಟಿಯಲ್ಲಿ ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಕಾಸ್ಮೋಸ್ ಬ್ಯಾಂಕ್, ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕ್ ಸೇರಿವೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಬಂಧಗಳನ್ನು ವಿಧಿಸಿದ ನಂತರ ಎನ್‌ಎಚ್‌ಎಐ ಈ ಕ್ರಮ ತೆಗೆದುಕೊಂಡಿದೆ. ಇದರ ಪ್ರಕಾರ, ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಫಾಸ್ಟ್ಯಾಗ್‌ ಠೇವಣಿ ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿದೆ.

ಪೇಟಿಎಂ ಫಾಸ್ಟ್ಯಾಗ್‌ ಬಳಕೆದಾರರು ಈಗ ಏನು ಮಾಡಬೇಕು

ತಮ್ಮ ಪೇಟೆಇಂ ಖಾತೆಗಳಲ್ಲಿ ಬ್ಯಾಲೆನ್ಸ್ ಹೊಂದಿರುವ ಪೇಟಿಎಂ ಫಾಸ್ಟ್ಯಾಗ್‌ ಬಳಕೆದಾರರು ಫೆಬ್ರವರಿ 29 ರ ನಂತರವೂ ಇದನ್ನು ಬಳಸಬಹುದು. ಆದರೆ, ಆ ಖಾತೆಗೆ ಹಣವನ್ನು ಸೇರಿಸಲು ಅಥವಾ ಟಾಪ್-ಅಪ್‌ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇದೇ ಫೆಬ್ರವರಿ 29 ರ ನಂತರ ನಿಮ್ಮ ಪೇಟಿಎಂ ಪೇಮೆಂಟ್‌ ಬ್ಯಾಂಕ್ ಖಾತೆ / ವ್ಯಾಲೆಟ್‌ಗೆ ಹಣವನ್ನು ಜಮಾ ಮಾಡಲು ಅಥವಾ ಸೇರಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಆದಾಗ್ಯೂ, ಫೆಬ್ರವರಿ 29 ರ ನಂತರವೂ ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್‌ನಿಂದ ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧವಿಲ್ಲ.

ಫಾಸ್ಟ್ಯಾಗ್‌ ಖಾತೆಗಳನ್ನು ರದ್ದುಗೊಳಿಸುವುದು ಹೇಗೆ

ಹೊಸ ಖಾತೆಗಳನ್ನು ರಚಿಸಲು ಬಳಕೆದಾರರು ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ತಮ್ಮ ಖಾತೆಗಳನ್ನು ಅಳಿಸಬೇಕಾಗುತ್ತದೆ.

ಫಾಸ್ಟ್ಯಾಗ್‌ ಖಾತೆಯನ್ನು ರದ್ದುಗೊಳಿಸುವ ಹಂತಗಳು ಇಲ್ಲಿವೆ:

1. ಫಾಸ್ಟ್ಯಾಗ್‌ ಪೇಟಿಎಂ ಪೋರ್ಟಲ್‌ಗೆ ಹೋಗಿ ಅಲ್ಲಿ ಯೂಸರ್ ಐಡಿ, ವಾಲೆಟ್ ಐಡಿ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಆಗಬೇಕು.

2. ಅಲ್ಲಿ ಹೆಲ್ಪ್ ಆಂಡ್ ಸಪೋರ್ಟ್‌ ಎಂಬುದನ್ನು ಕ್ಲಿಕ್ ಮಾಡಬೇಕು

3. ಅದರಲ್ಲಿ ಕ್ವರೀಸ್ ರಿಲೇಟೆಡ್ ಟು ಅಪ್ಡೇಟಿಂಗ್ ಫಾಸ್ಟ್ಯಾಗ್ ಪ್ರೊಫೈಲ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು

4. “ಐ ವಾಂಟ್‌ ಟು ಕ್ಲೋಸ್ ಮೈ ಫಾಸ್ಟ್ಯಾಗ್” ಎಂಬುದನ್ನು ಆಯ್ಕೆ ಮಾಡಬೇಕು.

ಮತ್ತೊಂದು ಪೂರೈಕೆದಾರರಿಗೆ ಫಾಸ್ಟ್ಯಾಗ್‌ ಖಾತೆ ಪೋರ್ಟ್ ಮಾಡುವುದು ಹೇಗೆ

ಪೇಟಿಎಂ ಫಾಸ್ಟ್ಯಾಗ್‌ ಖಾತೆಯನ್ನು ಮತ್ತೊಂದು ಪೂರೈಕೆದಾರರ ಸೇವೆ ಪಡೆಯಲು ಪೋರ್ಟ್ ಮಾಡುವುದು ಸಾಧ್ಯವಿದೆ. ಇದಕ್ಕಾಗಿ, ಹೊಸ ಬ್ಯಾಂಕಿನ ಗ್ರಾಹಕ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು. ಅಲ್ಲಿ ಪೇಟಿಎಂ ಫಾಸ್ಟ್ಯಾಗ್ ಖಾತೆಯ ವಿವರಗಳನ್ನು ಹಂಚಿಕೊಳ್ಳಿ ಮತ್ತು ನಂತರ ಪೋರ್ಟಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.