ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಬಿರಿಯಾನಿ ಪ್ರೇಮಿಯಾಗಿದ್ರೆ ಮಧುರೈ ಗುಂಡು ಭಾಯಿ ಸ್ಟೈಲ್‌ ಬಿರಿಯಾನಿ ಒಮ್ಮೆ ಟ್ರೈ ಮಾಡಿ, ಇದರ ರುಚಿಗೆ ಫಿದಾ ಆಗ್ತೀರಿ

ನೀವು ಬಿರಿಯಾನಿ ಪ್ರೇಮಿಯಾಗಿದ್ರೆ ಮಧುರೈ ಗುಂಡು ಭಾಯಿ ಸ್ಟೈಲ್‌ ಬಿರಿಯಾನಿ ಒಮ್ಮೆ ಟ್ರೈ ಮಾಡಿ, ಇದರ ರುಚಿಗೆ ಫಿದಾ ಆಗ್ತೀರಿ

ಬಿರಿಯಾನಿ ಪ್ರೇಮಿಗಳಿಗೆ ಬಿರಿಯಾನಿ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ಬಿರಿಯಾನಿಯಲ್ಲಿ ಹತ್ತಾರು ವಿಧಗಳಿವೆ. ಇತ್ತೀಚಿನ ದಿನಗಳಲ್ಲಿ ಮಧುರೈನ ಗುಂಡು ಭಾಯಿ ಸ್ಟೈಲ್‌ ಬಿರಿಯಾನಿ ಹೆಚ್ಚು ಖ್ಯಾತಿ ಪಡೆಯುತ್ತಿದೆ. ಇದನ್ನು ತಯಾರಿಸಲು ತಮಿಳುನಾಡಿನಲ್ಲಿ ಬೆಳೆಯುವ ಸಾಂಬಾ ರೈಸ್‌ ಬಳಸಲಾಗುತ್ತದೆ. ಆ ಕಾರಣಕ್ಕೆ ಈ ಬಿರಿಯಾನಿಗೆ ಕೊಂಚ ಭಿನ್ನ ರುಚಿ ಎಂಬುದು ಸುಳ್ಳಲ್ಲ.

ಗುಂಡು ಭಾಯಿ ಬಿರಿಯಾನಿ
ಗುಂಡು ಭಾಯಿ ಬಿರಿಯಾನಿ

ಮಾಂಸಾಹಾರ ಪ್ರಿಯರಿಗೆ ಬಿರಿಯಾನಿ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಭಿನ್ನ ಪರಿಮಳ, ರುಚಿ ಹೊಂದಿರುವ ಬಿರಿಯಾನಿ ತಯಾರಿಯಲ್ಲಿ ಮಸಾಲೆಯ ಪಾತ್ರ ದೊಡ್ಡದು. ಪ್ರಪಂಚದಾದ್ಯಂತ ಬಿರಿಯಾನಿ ಪ್ರಿಯರ ಸಂಖ್ಯೆ ಹೆಚ್ಚೇ ಇದೆ ಎಂದು ಹೇಳಬಹುದು. ವೆಜ್‌ ಬಿರಿಯಾನಿಯಾದ್ರೆ ವಿವಿಧ ಬಗೆಯ ಮಸಾಲೆಗಳು, ತರಕಾರಿ, ರೈಸ್‌ ಸೇರಿಸಿ ತಯಾರಿಸಲಾಗುತ್ತದೆ. ನಾನ್‌ವೆಜ್‌ ಬಿರಿಯಾನಿಯಾದ್ರೆ ಚಿಕನ್‌, ಮಟನ್‌, ಫಿಶ್‌ ಹೀಗೆ ಬೇರೆ ಬೇರೆ ಮಾಂಸಗಳನ್ನು ಹಾಕಿ ಬಿರಿಯಾನಿ ಮಾಡಲಾಗುತ್ತದೆ. ಬಿರಿಯಾನಿ ಸಂಪ್ರದಾಯಿಕ ಖಾದ್ಯವಾದ್ರು ಕೂಡ ಇತ್ತೀಚಿನ ದಿನಗಳಲ್ಲಿ ಇದನ್ನು ತಯಾರಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಮಧುರೈ  ಗುಂಡು ಭಾಯಿ ಶೈಲಿಯ ಹೈದಾಬ್ರಾದಿ ಬಿರಿಯಾನಿ ರೆಸಿಪಿಯು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಹಲವರು ಇವರ ಬಿರಿಯಾನಿ ರುಚಿಗೆ ಫಿದಾ ಆಗಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲೂ ಈ ಬಿರಿಯಾನಿ ವಿಶೇಷ ಗಮನ ಸೆಳೆಯುತ್ತಿದೆ. 

ಟ್ರೆಂಡಿಂಗ್​ ಸುದ್ದಿ

ಗುಂಡು ಭಾಯಿ ಶೈಲಿಯ ಬಿರಿಯಾನಿ ತಯಾರಿಸೋದು ಹೇಗೆ ಅನ್ನೋ ಕುತೂಹಲ ನಿಮಗಿದ್ರೆ, ಇಲ್ಲಿ ನಾವು ರೆಸಿಪಿ ಹೇಳುತ್ತೇವೆ ನೋಡಿ.ಇದನ್ನು ಮಾಡೋದು ಸುಲಭ. ಆದ್ರೆ ರುಚಿ ಮಾತ್ರ ನೀವು ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಎನ್ನಿಸುತ್ತದೆ. 

ಬೇಕಾಗುವ ಸಾಮಗ್ರಿಗಳು: ಎಣ್ಣೆ, ಈರುಳ್ಳಿ, ಹಸಿಮೆಣಸು, ಸ್ಪ್ರಿಂಗ್‌ ಆನಿಯನ್‌, ಸಾಂಬಾ ರೈಸ್‌, ದಾಲ್ಚಿನ್ನಿ, ಚಕ್ಕೆ, ಲವಂಗ, ಕರಿಬೇವು, ಗರಂಮಸಾಲೆ, ಖಾರದಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಮೊಸರು, ಜೀರಿಗೆಪುಡಿ, ಕೊತ್ತಂಬರಿ ಸೊಪ್ಪು, ತುಪ್ಪ 

ತಯಾರಿಸುವ ವಿಧಾನ: ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ. ಅದಕ್ಕೆ ಹೆಚ್ಚಿಟ್ಟುಕೊಂಡ ಸ್ಪ್ರಿಂಗ್‌ ಆನಿಯನ್‌, ಹಸಿಮೆಣಸು ಹಾಗೂ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿದುಕೊಳ್ಳಿ. ನಂತರ ಇದಕ್ಕೆ ಗರಂಮಸಾಲೆ, ಜೀರಿಗೆಪುಡಿ, ಖಾರದಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಮತ್ತು ಮೊಸರು ಮುಂತಾದ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ, ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ನಂತರ ಕರಿಬೇವಿನ ಸೊಪ್ಪು ಸೇರಿಸಿ, ಈ ಎಲ್ಲವನ್ನೂ ಮಿಶ್ರಣ ಮಾಡಿ, ವಿಶೇಷ ಮಸಾಲೆ ತಯಾರಿಸಬೇಕು. 

ಬಿರಿಯಾನಿಗೆ ಭಿನ್ನ ಪರಿಮಳ ಬೇಕು ಎಂದರೆ ತಮಿಳುನಾಡಿನಲ್ಲಿ ಬೆಳೆಯುವ ಸಾಂಬಾ ಅಕ್ಕಿಗೆ ಬಳಸಬೇಕು. ಜೊತೆಗೆ ಪುದಿನ, ಕೊತ್ತಂಬರಿ, ಏಲಕ್ಕಿ ಹಾಗೂ ದಾಲ್ಚಿನ್ನಿ ಮುಂತಾದುವನ್ನು ಕುದಿಯುವ ನೀರಿಗೆ ಹಾಕಬೇಕು. ಅಕ್ಕಿಯನ್ನು ಚೆನ್ನಾಗಿ ತೊಳೆದ ನಂತರ, ಅದನ್ನ ಕುದಿಯುತ್ತಿರುವ ಬಿಸಿ ನೀರಿಗೆ ಹಾಕಬೇಕು. ಅದನ್ನು 15 ನಿಮಿಷಗಳ ಕಾಲ ಕುದಿಸಬೇಕು. ನಂತರ ಮೊದಲು ತಯಾರಿಸಿಕೊಂಡ ಮಸಾಲೆ ಮಿಶ್ರಣಕ್ಕೆ ಚಿಕನ್‌ ತುಂಡುಗಳನ್ನು ಸೇರಿಸಿ. ಈ ಎಲ್ಲವನ್ನು ಸ್ವಲ್ಪ ಹೊತ್ತು ಹೊಂದಿಕೊಳ್ಳಲು ಬಿಡಿ. ಈ ಮಧ್ಯೆ ಬೇಯಿಸಿದ ಜೀರಿಗೆ ಸಾಂಬಾ ರೈಸ್‌ ಅನ್ನು ಸೋಸಿ ಪಕ್ಕಕ್ಕೆ ಇಡಿ.

ಈಗ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಚಿಕನ್‌ ಮಸಾಲ ಗ್ರೇವಿಯ ಮೇಲೆ ಸುರಿಯಿರಿ. ಒಂದು ಭಾಗ ಮಸಾಲ ಹಾಗೂ ಉಳಿದ ಅರ್ಧ ಭಾಗ ಅಕ್ಕಿ ಸೇರಿಸಿ. ಅದರ ಮೇಲೆ ಅರಿಸಿನ ಹಾಗೂ ಕಿತ್ತಳೆ ಕೇಸರಿ ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ಅನ್ನದ ಮೇಲೆ ಹರಡಿ.

ನಂತರ ಒದ್ದೆ ಬಟ್ಟೆಯನ್ನು ನೀರಿನಲ್ಲಿ ಅದ್ದಿ, ಅದನ್ನು ಪಾತ್ರೆಯ ಮೇಲೆ ಹರಡಿ ಮುಚ್ಚಿಡಿ. ಇದನ್ನು ಅರ್ಧ ಗಂಟೆ ಬೇಯಿಸಿ. ನಂತರ ಪಾತ್ರೆಯ ಮುಚ್ಚಳ ತೆಗೆದು ತುಪ್ಪ ಹರಡಿ. ಈಗ ನಿಮ್ಮ ಮುಂದೆ ರುಚಿಯಾದ ಬಿರಿಯಾನಿ ತಿನ್ನಲು ಸಿದ್ಧ. ಇದನ್ನು ರಾಯಿತ ಹಾಗೂ ಗ್ರೇವಿಯೊಂದಿಗೆ ಸವಿಯಬಹುದು.