Dental Health: ಹಲ್ಲು ಆರೋಗ್ಯದ ಕನ್ನಡಿ; ಮಧುಮೇಹದಿಂದ ಹೃದ್ರೋಗದವರೆಗೆ ಹಲ್ಲು ಸೂಚಿಸುವ ಅನಾರೋಗ್ಯದ ಲಕ್ಷಣಗಳಿವು-health news dental health diabetes to dementia teeth can tell about your health vitamin d deficiency bone health rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Dental Health: ಹಲ್ಲು ಆರೋಗ್ಯದ ಕನ್ನಡಿ; ಮಧುಮೇಹದಿಂದ ಹೃದ್ರೋಗದವರೆಗೆ ಹಲ್ಲು ಸೂಚಿಸುವ ಅನಾರೋಗ್ಯದ ಲಕ್ಷಣಗಳಿವು

Dental Health: ಹಲ್ಲು ಆರೋಗ್ಯದ ಕನ್ನಡಿ; ಮಧುಮೇಹದಿಂದ ಹೃದ್ರೋಗದವರೆಗೆ ಹಲ್ಲು ಸೂಚಿಸುವ ಅನಾರೋಗ್ಯದ ಲಕ್ಷಣಗಳಿವು

Dental Health: ಹಲ್ಲುಗಳು ಕೇವಲ ಅಗಿಯುವುದನ್ನು ಮಾತ್ರ ಸಂಕೇತಿಕರಿಸುವುದಲ್ಲ. ಇವು ನಮ್ಮ ಆರೋಗ್ಯದ ಸೂಚಕವೂ ಹೌದು. ಬಾಯಿಯ ಕಳಪೆ ನೈರ್ಮಲ್ಯವು ಹಲವು ರೀತಿಯ ಅನಾರೋಗ್ಯವನ್ನು ಸೂಚಿಸಬಹುದು. ಮಧುಮೇಹ, ಹೃದ್ರೋಗ, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಹಲ್ಲಿನ ಮೂಲಕವೇ ಗುರುತಿಸಬಹುದು.

ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ
ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ

ಹಲ್ಲುಗಳು ಅಗಿಯಲು ಮತ್ತು ಮಾತನಾಡಲು ಮಾತ್ರ ಅವಶ್ಯವಲ್ಲ; ಅವು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಹೊರ ಹಾಕುತ್ತವೆ. ಬಾಯಿಯ ಅನಾರೋಗ್ಯವು ಹೃದ್ರೋಗ, ಮಧುಮೇಹ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗೂ ಸಂಬಂಧಿಸಿದೆ. ಹಲ್ಲುಗಳು ನಮ್ಮ ಒಟ್ಟಾರೆ ಆರೋಗ್ಯದ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸಬಹುದು.

ಡೆಂಟೋಫೇಶಿಯಲ್‌ ಆಸ್ತೆಟಿಕ್ಸ್‌ ಸ್ಟುಡಿಯೋದ ಡಾ. ನೀತಿಕಾ ಮೋದಿ ಹಿಂದುಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ ವಿಭಾಗಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವಾಗಿ ಮಾತನಾಡಿದ್ದಾರೆ.

ʼನೀವು ಟೈಪ್‌ 2 ಡಯಾಬಿಟಿಸ್‌ ಅಥವಾ ಪೆರಿಯಡಾಂಟಿಟಿಸ್‌ ಟೈಪ್‌ 2 ಮಧುಮೇಹದಿಂದ ಬಳಲುತ್ತಿರಬಹುದು. ಮಧುಮೇಹದ ಸಮಸ್ಯೆಯನ್ನು ಹಲ್ಲಿನಿಂದ ತಿಳಿಯಬಹುದು. ನೀವು ಆರೋಗ್ಯವಂತರಾಗಿದ್ದು, ನಿಮ್ಮ ವಸಡಿನಲ್ಲಿ ಯಾವುದೇ ತೊಂದರೆ ಇಲ್ಲದೆ ಇದ್ದೂ, ಇದ್ದಕ್ಕಿದ್ದಂತೆ ಬಾಯಿಯಲ್ಲಿ ರಕ್ತಸ್ರಾವ ಹಾಗೂ ವಸಡಿನಲ್ಲಿ ಉರಿ ಆರಂಭವಾದರೆ ನೀವು ಗರ್ಭ ಧರಿಸಿರಬಹುದು. ಕಳಪೆ ಬಾಯಿಯ ನೈಮರ್ಲ್ಯ ಅಥವಾ ವಸಡಿನ ಕಾಯಿಲೆ ಹೊಂದಿರುವವರಲ್ಲಿ ಅಲ್ಝೈಮರ್‌ನಿಂದ ಬುದ್ಧಿಮಾಂದ್ಯತೆಯವರೆಗೆ ಇಂತಹ ಮಾನಸಿಕ ಆರೋಗ್ಯ ಅಪಾಯ ಹೆಚ್ಚುವ ಸಾಧ್ಯತೆ ಇದೆ. ವಿಟಮಿನ್‌ ಕೊರತೆಯೂ ಕೂಡ ಹಲ್ಲಿನಲ್ಲಿ ಗೋಚರವಾಗುತ್ತದೆ. ವಿಟಮಿನ್‌ ಬಿ ಕೊರತೆಯು ದಂತಕವಚದ ಮೇಲೆ ಪರಿಣಾಮ ಬೀರಬಹುದು. ಆ ಕಾರಣದಿಂದ ದಂತಕವಚವು ತೆಳುವಾಗಿರುತ್ತದೆ.

ಇಷ್ಟೇ ಅಲ್ಲದೆ ಇನ್ನೂ ಹಲವು ಸಮಸ್ಯೆಗಳನ್ನು ಬಾಯಿಯ ಅನಾರೋಗ್ಯದ ಆಧಾರದ ಮೇಲೆ ಕಂಡು ಹಿಡಿಯಬಹುದಾಗಿದೆ. ಈ ಬಗ್ಗೆ ಪಾಂಡೆ ಡೆಂಟಿಸ್ಟ್ರಿಯ ಸಂಸ್ಥಾಪಕಿ ಡಾ. ವಿನಿಶಾ ಪಾಂಡೆ ಇನ್ನಷ್ಟು ವಿಷಯಗಳನ್ನು ತಿಳಿಸಿದ್ದಾರೆ.

ಹಲ್ಲುಗಳು ಅತ್ಯುತ್ತಮ ಮಧುಮೇಹ ಸೂಚಕಗಳಾಗಿವೆ

ಹಲ್ಲು ಹಾಗೂ ಬಾಯಿಯ ಕುರುಹುಗಳ ಸಂಪೂರ್ಣ ಪರೀಕ್ಷೆಯ ನಂತರ ದಂತವೈದ್ಯರು ಮಧುಮೇಹದ ಸಂಕೇತಗಳನ್ನು ಗುರುತಿಸಬಹುದಾಗಿದೆ. ಮಧುಮೇಹವು ಒಟ್ಟಾರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಪ್ರತಿಯಾಗಿ ಬಾಯಿಯ ಇತರ ಸೋಂಕುಗಳಾದ ಪರಿದಂತದ ಕಾಯಿಲೆ (periodontal disease), ವಸಡಿಗೆ ಸಂಬಂಧಿಸಿದ ಕಾಯಿಲೆ, ಹಲ್ಲು ಉದುರುವುದು ಇಂತಹ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

ಗರ್ಭಾವಸ್ಥೆಯೂ ಹಲ್ಲಿನ ಮೇಲೆ ಪರಿಣಾಮ ಬೀರುತ್ತದೆ

ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಲ್ಲುಗಳು ಸಡಿಲಗೊಳ್ಳುವುದು ಮತ್ತು ವಸಡಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ವಸಡು ಊದಿಕೊಳ್ಳುವುದು, ರಕ್ತಸ್ರಾವಕ್ಕೂ ಕಾರಣವಾಗಬಹುದು. ಸಾಮಾನ್ಯವಾಗಿ ಇದನ್ನು ಗರ್ಭಧಾರಣೆಯ ಜಿಂಗೈವಿಟಿಸ್ ಎಂದು ಕರೆಯಲಾಗುತ್ತದೆ.

ಪೌಷ್ಟಿಕಾಂಶದ ಕೊರತೆ

ಪೌಷ್ಟಿಕಾಂಶ ಕೊರತೆ ಹಾಗೂ ಪೌಷ್ಟಿಕ ಆಹಾರದ ಕೊರತೆಯು ಬಾಯಿಯ ಕಳಪೆ ನೈಮರ್ಲ್ಯಕ್ಕೆ ಕಾರಣವಾಗಬಹುದು. ವಿಟಮಿನ್‌ ಡಿ ಕೊರತೆಯಿಂದ ಪರಿದಂತದ ಕಾಯಿಲೆ, ಹಲ್ಲು ವಿರೂಪವಾಗುವುದು, ದಂತಕ್ಷಯ ಹಾಗೂ ಒಸಡಿನ ಕಾಯಿಲೆಗಳು ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಆಸ್ಟಿಯೊಪೊರೋಸಿಸ್‌ನಿಂದಾಗಿ ಹಲ್ಲು ಉದುರಬಹುದು

ಆಸ್ಟಿಯೊಪೊರೋಸಿಸ್ ಮೂಳೆಗಳ ಕಾಯಿಲೆಯಾಗಿದ್ದು, ಇದು ಹಲ್ಲು ಉದುರಲು ಕಾರಣವಾಗಬಹುದು. ಮೂಳೆಯ ಸಾಂಧ್ರತೆ ಕೊರತೆಯ ಕಾಲ ಕ್ರಮೇಣ ಹಲ್ಲಿನ ಸಮಸ್ಯೆಗಳನ್ನು ಉಂಟು ಮಾಡಬಹುದು. ಮೂಳೆಯ ದ್ರವ್ಯರಾಶಿಯ ಸಾಂಧ್ರತೆಯ ಕೊರತೆ, ಆಸ್ಟಿಯೊಪೊರೋಸಿಸ್ ಮತ್ತು ಪಿರಿಯಾಂಟೈಟಿಸ್ ನಡುವೆ ಪರಸ್ಪರ ಸಂಬಂಧವಿದೆ.

ಬುಲಿಮಿಯಾದಂತಹ ಸಮಸ್ಯೆಯು ಹಲ್ಲಿನಲ್ಲಿ ಕಾಣಬಹುದು

ಬುಲಿಮಿಯಾ ಎಂಬುದು ಮಾನಸಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆ ಇರುವವರು ಅತಿಯಾಗಿ ತಿನ್ನುತ್ತಾರೆ. ಆದರೆ ಇವರಲ್ಲಿ ಪೌಷ್ಟಿಕಾಂಶ ಕೊರತೆ ಇದ್ದು ಇದು ಹಲ್ಲು ಹಾಗೂ ವಸಡಿನ ಅನಾರೋಗ್ಯವನ್ನು ಸೂಚಿಸಬಹುದು. ಬಾಯಿಯ ಅಂಗಾಂಶ ಮೃದುವಾಗುವುದು ಹಾಗೂ ವಸಡಿನ ಸುತ್ತಲೂ ರಕ್ತಸ್ರಾವವಾಗುವುದಕ್ಕೂ ಇದು ಕಾರಣವಾಗಬಹುದು.

ಅಲ್ಝೈಮರ್‌

ಹಲ್ಲಿನ ಸೋಂಕಿನ ಇತಿಹಾಸ ಇರುವ ರೋಗಿಗಳಲ್ಲಿ ವಯಸ್ಸಾದ ಮೇಲೆ ಅಲ್ಝೈಮರ್‌ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ದಿನದಲ್ಲಿ ಎರಡು ಬಾರಿ ಹಲ್ಲುಜ್ಜುವುದು ಹಾಗೂ ಫ್ಲೇಕ್‌ ತೊಲಗಿಸುವುದರಿಂದ ಅಲ್ಝೈಮರ್‌ ಅಪಾಯದಿಂದ ದೂರ ಇರಬಹುದು.

ಹೃದಯದ ಆರೋಗ್ಯವೂ ಹಲ್ಲಿನಲ್ಲಿ ಕಾಣಿಸುತ್ತದೆ 

ಅಮೆರಿಕನ್‌ ಡೆಂಟಲ್‌ ಅಸೋಸಿಯೇಷನ್‌ ಪ್ರಕಾರ ವಸಡು ಹಾಗೂ ಪರಿದಂತದ ಸೋಂಕುಗಳು ಹೃದ್ರೋಗ ಹೊಂದಿರುವ ವ್ಯಕ್ತಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಹೃದಯಾಘಾತ/ಪಾರ್ಶ್ವವಾಯು ಹಲ್ಲು ಉದುರುವುದು ಹಾಗೂ ವಸಡಿನ ಕಾಯಿಲೆಗೆ ನೇರವಾಗಿ ಸಂಬಂಧಿಸಿರುತ್ತದೆ.

mysore-dasara_Entry_Point