ಕನ್ನಡ ಸುದ್ದಿ  /  ಜೀವನಶೈಲಿ  /  Winter Health: ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಶೀತಜ್ವರ; ಚಳಿಗಾಲದಲ್ಲಿ ಆರೋಗ್ಯದ ನಿರ್ಲಕ್ಷ್ಯ ಸಲ್ಲ

Winter Health: ಉಸಿರಾಟದ ಮೇಲೆ ಗಂಭೀರ ಪರಿಣಾಮ ಬೀರಬಹುದು ಶೀತಜ್ವರ; ಚಳಿಗಾಲದಲ್ಲಿ ಆರೋಗ್ಯದ ನಿರ್ಲಕ್ಷ್ಯ ಸಲ್ಲ

ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಶೀತಜ್ವರವು ಹಲವು ರೀತಿ ತೊಂದರೆಗಳನ್ನು ಉಂಟು ಮಾಡಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಇದು ಗಂಭೀರ ಉಸಿರಾಟದ ಸಮಸ್ಯೆಗೂ ಕಾರಣವಾಗಬಹುದು ಎನ್ನುತ್ತಾರೆ ಡಾ. ಶೀತಲ್ ಚೌರಾಸಿಯಾ.

ಡಾ. ಶೀತಲ್ ಚೌರಾಸಿಯಾ (ಬಲಚಿತ್ರ)
ಡಾ. ಶೀತಲ್ ಚೌರಾಸಿಯಾ (ಬಲಚಿತ್ರ)

ಚಳಿಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣಕ್ಕೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಕೆಲವೊಮ್ಮೆ ಒಂದು ಸಮಸ್ಯೆ ಇನ್ನೊಂದರೊಂದಿಗೆ ತಳುಕು ಹಾಕಿಕೊಂಡು ಗಂಭೀರ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ಒಂದಿಷ್ಟು ಎಚ್ಚರ ವಹಿಸುವುದು ಮುಖ್ಯವಾಗುತ್ತದೆ. ಚಳಿಗಾಲದಲ್ಲಿ ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಶೀತಜ್ವರವೂ ಒಂದು.

ಟ್ರೆಂಡಿಂಗ್​ ಸುದ್ದಿ

ಶೀತಜ್ವರದ ಸೋಂಕು ನಮ್ಮ ಉಸಿರಾಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಶೀತಜ್ವರದ ವೈರಸ್ ಪ್ರಾಥಮಿಕವಾಗಿ ಉಸಿರಾಟದ ಅಂಗಗಳ ಮೇಲೆ ದಾಳಿ ಮಾಡುತ್ತವೆ, ಇದು ಶ್ವಾಸನಾಳ ಮತ್ತು ಶ್ವಾಸಕೋಶದ ಉರಿಯೂತವನ್ನು ಉಂಟುಮಾಡುತ್ತದೆ. ಆದರೆ ವ್ಯಕ್ತಿ ಅಥವಾ ರೋಗಿಯ ಪ್ರತಿರಕ್ಷಣಾ ಸ್ಥಿತಿಯ ಆಧಾರದ ಮೇಲೆ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯಲ್ಲಿ ಸಣ್ಣ ಮಟ್ಟಿಗೆ ಉಸಿರಾಟದ ಸಮಸ್ಯೆಯ ಜೊತೆಗೆ ಕೆಮ್ಮು, ಜ್ವರ, ಗಂಟಲು ನೋವು ಮತ್ತು ಕಟ್ಟಿದ ಮೂಗಿನಂತಹ ರೋಗಲಕ್ಷಣಗಳು ಕಾಣಿಸಬಹುದು.

ಇದನ್ನೂ ಟಿಪ್ಸ್‌: Viral: ಚಳಿಗಾಲದಲ್ಲಿ ಹೆಚ್ಚುತ್ತೆ ಹೃದಯಾಘಾತ, ಹೃದಯ ಜೋಪಾನ; ಸಾಮಾಜಿಕ ಜಾಲತಾಣದಲ್ಲಿ ವೈದ್ಯರು ನೀಡಿದ್ರು ಬೆಸ್ಟ್‌ ಟಿಪ್ಸ್‌

ಕೆಲವೊಮ್ಮೆ ದುರ್ಬಲ ರೋಗನಿರೋಧಕ ಶಕ್ತಿಯಿರುವ ಜನರಲ್ಲಿ, ಇದು ನ್ಯುಮೋನಿಯಾದಂತಹ ಹೆಚ್ಚು ತೀವ್ರವಾದ ಉಸಿರಾಟದ ಸೋಂಕು ಉಂಟಾಗಿ ಉಸಿರಾಟದ ವೈಫಲ್ಯಕ್ಕೂ ಕಾರಣವಾಗಬಹುದು. ಅಂತಹ ವ್ಯಕ್ತಿಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ, ವೆಂಟಿಲೇಟರ್‌ ಸಪೋರ್ಟ್‌ನಲ್ಲಿ ಇರಿಸಬೇಕಾಗಬಹುದು. ಈ ಸಮಸ್ಯೆ ಅತಿಯಾದರೆ ಸಾವು ಕೂಡ ಸಂಭವಿಸಬಹುದು. ಇದಲ್ಲದೆ, ಕೆಲವೊಮ್ಮೆ ಶೀತಜ್ವರದ ಸೋಂಕು ಅಸ್ತಮಾ ಮತ್ತು COPD ಯಂತಹ ಮೊದಲೇ ಅಸ್ತಿತ್ವದಲ್ಲಿರುವ ರೋಗಲಕ್ಷಣ ಪರಿಸ್ಥಿತಿಗಳನ್ನು ಉಲ್ಬಣ ಮಾಡಬಹುದು. ಹೃದಯಾಘಾತ ಮತ್ತು ಮೂತ್ರಪಿಂಡ ವೈಫಲ್ಯದಂತಹ ರೋಗಗಳನ್ನು ಹೊಂದಿರುವ ರೋಗಿಗಳಲ್ಲಿ ಹೆಚ್ಚು ತೊಂದರೆ ಕಾಡಬಹುದು. ಹಲವು ಬಾರಿ ಶೀತಜ್ವರದ ಕಾಣಿಸಿದ ರೋಗಿಗಳು ಚೇತರಿಸಿಕೊಂಡ ನಂತರವೂ, ವ್ಯಕ್ತಿಯ ಶ್ವಾಸಕೋಶವನ್ನು ತಲುಪುವ ಮಾರ್ಗದಲ್ಲಿ ಸಾಕಷ್ಟು ಉರಿಯುವಂತೆ ಮಾಡುತ್ತದೆ, ಇದು ಸೆಕೆಂಡರಿ ಬ್ಯಾಕ್ಟೀರಿಯಾದ ಸೋಂಕುಗಳು ಮತ್ತು ಸೆಕೆಂಡರಿ ನ್ಯುಮೋನಿಯಾಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ನವಜಾತ ಶಿಶುವಿನ ಆರೈಕೆ ಹೇಗೆ.? ಪೋಷಕರಿಗೆ ಇಲ್ಲಿದೆ ಮಹತ್ವದ ಕಿವಿಮಾತು

ಅಲ್ಲದೆ, ಶೀತಜ್ವರದ ಸೋಂಕಿನ ನಂತರ, ಶ್ವಾಸಕೋಶದ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗಬಹುದು. ಕೆಲವು ಸಂದರ್ಭಗಳಲ್ಲಿ ರೋಗಿಗಳು ತಮ್ಮ ಸೋಂಕಿನ ಪೂರ್ವ ಸ್ಥಿತಿಗೆ ತಲುಪಲು ಸಾಧ್ಯವಾಗಬಹುದು. ಆದರೆ, COPD ರೋಗಿಗಳಲ್ಲಿ, ಇದು ಸಂಪೂರ್ಣವಾಗಿ ಹಿಂದಿನ ಸ್ಥಿತಿಗೆ ಮರಳದೇ ಇರಬಹುದು ಮತ್ತು ರೋಗಿಯು ದೀರ್ಘಾವಧಿಯಲ್ಲಿ ತನ್ನ ಶ್ವಾಸಕೋಶ ಕೆಲಸ ಮಾಡುವ ತೀವ್ರತೆಯನ್ನು ಕಳೆದುಕೊಳ್ಳಬಹುದು.

ಲೇಖನ: ಡಾ. ಶೀತಲ್ ಚೌರಾಸಿಯಾ, ಕನ್ಸಲ್ಟೆಂಟ್ - ಪಲ್ಮನರಿ ಮೆಡಿಸಿನ್, ಮಣಿಪಾಲ್ ಆಸ್ಪತ್ರೆ ವೈಟ್‌ಫೀಲ್ಡ್

ಈ ಲೇಖನವನ್ನೂ ಓದಿ

ಚಳಿಗಾಲದಲ್ಲಿ ಶೇಂಗಾವನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಪ್ರಯೋಜನ; ಕಡಲೆಕಾಯಿ ಸೇವನೆಯ 10 ಉಪಯೋಗ ತಿಳಿಯಿರಿ

ನೆಲಗಡಲೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದ್ದು, ಇದು ದೇಹಕ್ಕೆ ಅಗತ್ಯ ಪೋಷಕಾಂಶ ಸೇರಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಮೊನೊಸ್ಯಾಚುರೇಟೆಡ್‌ ಮತ್ತು ಪಾಲಿಅನ್‌ಸ್ಯಾಚುರೇಟೆಡ್‌ ಕೊಬ್ಬಿನಾಂಶವಿದೆ. ಇದು ಜಿಐ ಕಡಿಮೆ ಪ್ರಮಾಣದಲ್ಲಿರುವ ಆಹಾರವಾದ ಕಾರಣ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ವಿಭಾಗ