ಒತ್ತಡ ನಿವಾರಣೆ ಜಾಗೃತಿ ತಿಂಗಳು 2024; ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒತ್ತಡ ನಿವಾರಣೆ ಜಾಗೃತಿ ತಿಂಗಳು 2024; ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ

ಒತ್ತಡ ನಿವಾರಣೆ ಜಾಗೃತಿ ತಿಂಗಳು 2024; ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ

ಒತ್ತಡವು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಇದು ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಏಪ್ರಿಲ್ ತಿಂಗಳನ್ನು ಒತ್ತಡ ನಿವಾರಣೆ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಸಹಾಯ ಪಡೆಯಿರಿ.

ಏಪ್ರಿಲ್ ತಿಂಗಳನ್ನು ಒತ್ತಡ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ. ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ. (ಫೋಟೋ-ಕರ್ನಾಟಕ ಆರೋಗ್ಯ ಇಲಾಖೆ)
ಏಪ್ರಿಲ್ ತಿಂಗಳನ್ನು ಒತ್ತಡ ಜಾಗೃತಿಯ ಮಾಸವೆಂದು ಆಚರಿಸಲಾಗುತ್ತಿದೆ. ಮಾನಸಿಕ ಸಮಸ್ಯೆಗೆ ಟೆಲಿ ಮನಸ್ ಸಹಾಯವಾಣಿ ಮೂಲಕ ಸಲಹೆ ಪಡೆಯಿರಿ. (ಫೋಟೋ-ಕರ್ನಾಟಕ ಆರೋಗ್ಯ ಇಲಾಖೆ)

ಬೆಂಗಳೂರು: ಒತ್ತಡ ಮತ್ತು ಆತಂಕವು (Stress And Anxiety) ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯದ (Human Mental And Physical Health) ಮೇಲೆ ಪರಿಣಾಮ ಬೀರುತ್ತದೆ. ಅನೇಕ ಜನರು ಪ್ರತಿದಿನವೂ ಒತ್ತಡವನ್ನು ಅನುಭವಿಸುತ್ತಾರೆ. ಕೆಲಸ, ಕುಟುಂಬ, ಆರೋಗ್ಯ ಮತ್ತು ಹಣಕಾಸಿಗೆ ಸಂಬಂಧಿಸಿದ ದೈನಂದಿನ ಒತ್ತಡಗಳು ಹೆಚ್ಚಾಗಿ ಹೆಚ್ಚಿನ ಒತ್ತಡದಲ್ಲಿ ಜೀವನ ನಡೆಸುತ್ತಾರೆ. ಉತ್ತಮ ಆರೋಗ್ಯಕ್ಕಾಗಿ, ದೈನಂದಿನ ಜೀವನದಲ್ಲಿ ಒತ್ತಡವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಒತ್ತಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹೃದ್ರೋಗ, ಆತಂಕದ ಅಸ್ವಸ್ಥತೆಗಳು ಹಾಗೂ ಖಿನ್ನತೆ ಸೇರಿದಂತೆ ಹಲವು ಕಾಯಿಲೆಗಳಿಗೆ ಕಾರಣವಾಗಿ, ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಏಪ್ರಿಲ್ ತಿಂಗಳನ್ನು ಒತ್ತಡ ನಿವಾರಣೆ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತಿದೆ. ನೀವೇನಾದರೂ ಮಾನಸಿಕ ಸಮಸ್ಯೆ ಹಾಗೂ ಒತ್ತಡಕ್ಕೆ ಒಳಗಾಗಿದ್ದರೆ ಆರೋಗ್ಯ ಇಲಾಖೆಯ ‘ಟೆಲಿ ಮನಸ್’ ಸಹಾಯವಾಣಿ ಮೂಲಕ ಸಲಹೆ ಸೂಚನೆಗಳನ್ನು ಪಡೆಯಬಹುದು. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ಆರೋಗ್ಯ ಇಲಾಖೆ, ದೈನಂದಿನ ಕೆಲಸ ಕಾರ್ಯಗಳಿಂದ ತುಸು ವಿರಾಮವನ್ನು ಪಡೆದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಿ. ಸಹಾಯವಾಣಿ - ಟೆಲಿ ಮನಸ್ (Tele Manas) - 14416 ಗೆ ಕರೆ ಮಾಡಿ ಎಂದಿದೆ.

‘ವ್ಯಥೆ, ಕೌಟುಂಬಿಕ ಸಮಸ್ಯೆ, ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು, ಆತ್ಮಹತ್ಯೆಯ ಚಿಂತನೆ, ಮಾದಕ ವಸ್ತುಗಳ ಸೇವನೆಯ ವ್ಯಸನ, ಜ್ಞಾಪಕ ಶಕ್ತಿ ಸಮಸ್ಯೆ, ಆರ್ಥಿಕ ಒತ್ತಡ ಸೇರಿ ಇತರೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರೂ ಶುಲ್ಕರಹಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಬಹುದು’ ಎಂದು ತಿಳಿಸಿದೆ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner