ಕನ್ನಡ ಸುದ್ದಿ  /  Lifestyle  /  Women Health How To Get Rid Off Constipation Problem During Periods Health Tips In Kannada Rsa

Women Health: ಋತುಚಕ್ರದ ಸಮಯದಲ್ಲಿ ಉಂಟಾಗುವ ಮಲಬದ್ಧತೆಗೆ ಕಾರಣವೇನು? ಸಮಸ್ಯೆಯಿಂದ ಪಾರಾಗುವುದು ಹೇಗೆ..?

Women Health: ಋತುಚಕ್ರದ ಸಮಯದಲ್ಲಿ ಅನೇಕ ಮಹಿಳೆಯರಿಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಟ್ಟಿನ ನೋವಿನ ಜೊತೆಯಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುವುದು ಎಂದರೆ ಸುಲಭವಲ್ಲ. ಹೀಗಾಗಿ ಮುಟ್ಟಿನ ಸಂದರ್ಭದಲ್ಲಿ ಮಲಬದ್ಧತೆಯಿಂದ ಪಾರಾಗುವುದು ಹೇಗೆ..? ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಋತುಚಕ್ರದ ಸಮಯದಲ್ಲಿ ಉಂಟಾಗುವ ಮಲಬದ್ಧತೆಗೆ ಕಾರಣವೇನು?
ಋತುಚಕ್ರದ ಸಮಯದಲ್ಲಿ ಉಂಟಾಗುವ ಮಲಬದ್ಧತೆಗೆ ಕಾರಣವೇನು? ( )

Women Health: ಋತುಚಕ್ರದ ಸಮಯದಲ್ಲಿ ಮಹಿಳೆಯರು ಸಾಕಷ್ಟು ರೀತಿ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಕೆಲವೊಮ್ಮೆ ಹಾರ್ಮೋನುಗಳ ಏರುಪೇರಿನಿಂದಾಗಿ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆಯುಂಟಾಗುತ್ತದೆ. ಇದರಿಂದಾಗಿ ಅನೇಕರು ಮುಟ್ಟಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ.

ಋತುಚಕ್ರದ ಸಮಯದಲ್ಲಿ ಭಾವನೆಗಳ ಏರಿಳಿತ ಹಾಗೂ ಆಯಾಸದ ಸಮಸ್ಯೆ ಸಾಲದು ಎಂಬಂತೆ ಈ ಮಲಬದ್ಧತೆಯ ಸಮಸ್ಯೆ ಕೂಡ ಜೀವ ಹಿಂಡುತ್ತಿರುತ್ತದೆ. ಮುಟ್ಟಿನ ದಿನಗಳಲ್ಲಿ ಕಾಡುವ ಮಲಬದ್ಧತೆಯ ಸಮಸ್ಯೆಯಿಂದ ಪಾರಾಗಬೇಕು ಎಂದುಕೊಂಡಿದ್ದರೆ ಇಲ್ಲಿದೆ ಪರಿಹಾರ.

ಮುಟ್ಟಿನ ಸಂದರ್ಭದಲ್ಲಿ ಮಲಬದ್ಧತೆ ಏಕೆ ಉಂಟಾಗುತ್ತದೆ..?

ಮುಟ್ಟಿನ ದಿನಗಳಲ್ಲಿ ಮಹಿಳೆಯರ ಹಾರ್ಮೋನುಗಳಲ್ಲಿ ಏರಿಳಿತ ಉಂಟಾಗುತ್ತಲೇ ಇರುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಋತುಸ್ರಾವ ಹಾಗೂ ಗರ್ಭಾವಸ್ಥೆಯನ್ನು ನಿರ್ವಹಿಸುವ ಹಾರ್ಮೋನನ್ನು ಪ್ರೊಜೆಸ್ಟರಾನ್ ಎಂದು ಕರೆಯಲಾಗುತ್ತದೆ. ಮುಟ್ಟಿಗೂ ಮೊದಲು ಇವುಗಳ ಸಂಖ್ಯೆ ಗರ್ಭವನ್ನು ಗರ್ಭಾವಸ್ಥೆಗೆ ತಯಾರಿ ಮಾಡಲು ಹೆಚ್ಚಾಗಿ ಇರುತ್ತದೆ. ಮುಟ್ಟಿನ ಅವಧಿಯಲ್ಲಿ ಕರುಳಿನ ಸ್ನಾಯುಗಳು ವಿಶ್ರಾಂತಿ ಮಾಡುತ್ತವೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಕೂಡ ನಿಧಾನಗೊಳ್ಳುತ್ತದೆ. ಹೀಗಾಗಿ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ.

1.ಫೈಬರ್ ಅಂಶಯುಕ್ತ ಅಹಾರಗಳ ಸೇವನೆ

ನೀವು ಮಲಬದ್ಧತೆ ಸಮಸ್ಯೆಯಿಂದ ಪಾರಾಗಲು ನೀವು ಮಾಡಬಹುದಾದ ಪ್ರಮುಖ ಕೆಲಸವೆಂದರೆ ಆದಷ್ಟು ಫೈಬರ್ ಅಂಶ ಹೆಚ್ಚಿರುವಂತಹ ಹಣ್ಣುಗಳು ಹಾಗೂ ತರಕಾರಿಗಳ ಸೇವನೆ ಮಾಡಬೇಕು. ಫೈಬರ್ ಅಂಶಯುಕ್ತ ಆಹಾರಗಳು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕರುಳಿನ ಕಾರ್ಯವನ್ನು ಚುರುಕುಗೊಳಿಸುವ ಕಾರ್ಯವನ್ನು ಮಾಡುತ್ತದೆ.

2. ಪ್ರೋಬಯಾಟಿಕ್ ಭರಿತ ಆಹಾರ ಸೇವನೆ

ಪ್ರೋಬಯಾಟಿಕ್‌ಯುಕ್ತ ಆಹಾರಗಳು ಕರುಳಿನ ಆರೋಗ್ಯವನ್ನು ಸುಧಾರಿಸುವ ಬ್ಯಾಕ್ಟೀರಿಯಾವನ್ನು ಹೊಂದಿರು್ತವೆ. ಅಲ್ಲದೇ ಇವುಗಳು ಜೀರ್ಣಕ್ರಿಯೆಯನ್ನು ಇನ್ನಷ್ಟು ಸರಾಗಗೊಳಿಸುವ ಕಾರ್ಯವನ್ನು ಮಾಡುತ್ತವೆ. ಇವುಗಳು ಮುಟ್ಟಿನ ಸಮಯದಲ್ಲಿ ಮಲಬದ್ಧತೆ ಸಮಸ್ಯೆಯನ್ನು ಸುಧಾರಿಸುತ್ತವೆ. ಹೆಚ್ಚೆಚ್ಚು ಪ್ರೋಬಯೋಟಿಕ್ ಅಹಾರದ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.

3. ದೈಹಿಕವಾಗಿ ಸಕ್ರಿಯರಾಗಿರಿ

ಮುಟ್ಟಿನ ಸಮಯದಲ್ಲಿ ಮಹಿಳೆಯರು ವಿಶ್ರಾಂತಿಯಲ್ಲಿರಲು ಹೆಚ್ಚು ಇಚ್ಛಿಸುತ್ತಾರೆ. ಆದರೆ ಮಲಬದ್ಧತೆಯ ಸಮಸ್ಯೆಯಿಂದ ಪಾರಾಗಲು ನೀವು ಉಳಿದ ದಿನಗಳಲ್ಲಿ ಲಘು ದೈಹಿಕ ಚಟುವಟಿಕೆಗಳನ್ನು ಮಾಡುವುದು ಒಳ್ಳೆಯದು. ದಿನಕ್ಕೆ ಕನಿಷ್ಟ 45 ನಿಮಿಷಗಳ ಕಾಲ ನೀವು ದೇಹವನ್ನು ದಂಡಿಸಿದರೆ ನಿಮಗೆ ಮುಟ್ಟಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

4. ಈ ರೀತಿ ವಿಶ್ರಾಂತಿ ಮಾಡಿ

ನೀವು ಮಾನಸಿಕವಾಗಿ ವಿಶ್ರಾಂತಿ ತೆಗೆದುಕೊಂಡಾಗ ಮಾತ್ರ ನಿಮ್ಮ ದೇಹ ಕೂಡ ನಿರಾಳ ಭಾವವನ್ನು ಅನುಭವಿಸಲು ಸಾಧ್ಯವಿದೆ. ಹೀಗಾಗಿ ಮುಟ್ಟಿನ ದಿನಗಳಲ್ಲಿ ನೀವು ಧ್ಯಾನ ಮಾಡಬೇಕು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೂ ಒಳ್ಳೆಯ ಪರಿಣಾಮವನ್ನುಂಟು ಮಾಡುತ್ತದೆ.

5.ಸೇವಿಸುವ ಆಹಾರದ ಬಗ್ಗೆ ಜಾಗ್ರತೆಯಿರಲಿ

ಕೆಫಿನ್‌ಗಳನ್ನು ಬಳಸಿ ತಯಾರಿಸಿದ ಪಾನೀಯಗಳು, ಡೈರಿ ಉತ್ಪನ್ನಗಳು, ಜಂಕ್ ಆಹಾರಗಳು, ಸಂಸ್ಕರಿಸಿದ ಆಹಾರಗಳು ಇವೆಲ್ಲವೂ ಮಲಬದ್ಧತೆಯ ಸಮಸ್ಯೆ ಕಾರಣವಾಗುತ್ತದೆ. ಹೀಗಾಗಿ ಮುಟ್ಟಿನ ದಿನಗಳು ಮಾತ್ರವಲ್ಲ ಉಳಿದ ದಿನಗಳಲ್ಲಿಯೂ ನೀವು ಯಾವ ರೀತಿಯ ಆಹಾರವನ್ನು ಸೇವಿಸುತ್ತಿದ್ದೀರಿ ಎನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.