ಕನ್ನಡ ಸುದ್ದಿ  /  ಜೀವನಶೈಲಿ  /  Women Health: ಗರ್ಭಿಣಿಯರು ಮಾವಿನ ಹಣ್ಣು ಸೇವಿಸಿದರೆ ಮಧುಮೇಹ ಹೆಚ್ಚಾಗುತ್ತಾ? ವೈದ್ಯರು ಹೇಳೋದೇನು ?

Women Health: ಗರ್ಭಿಣಿಯರು ಮಾವಿನ ಹಣ್ಣು ಸೇವಿಸಿದರೆ ಮಧುಮೇಹ ಹೆಚ್ಚಾಗುತ್ತಾ? ವೈದ್ಯರು ಹೇಳೋದೇನು ?

Women Health: ಗರ್ಭಿಣಿ ಆಗಿದ್ದಾಗ ಮಾವಿನ ಹಣ್ಣು ತಿನ್ನಬಾರದು ಎಂದು ಅನೇಕರು ಸಲಹೆ ನೀಡುತ್ತಾರೆ. ಹಾಗಾದರೆ ಗರ್ಭವತಿಯರು ನಿಜವಾಗಿಯೂ ಮಾವಿನ ಹಣ್ಣು ಸೇವಿಸಬಾರದೇ? ತಿಂದರೆ ಏನು ಸಮಸ್ಯೆ ಉಂಟಾಗುತ್ತದೆ? ವೈದ್ಯರು ಹೇಳುವುದೇನು? ಮಾಹಿತಿ ಇಲ್ಲಿದೆ

ಗರ್ಭಿಣಿಯರು ದಿನಕ್ಕೆ ಒಂದು ಮಾವಿನ ಹಣ್ಣು ಸೇವಿಸಿದರೆ ಸಮಸ್ಯೆ ಇಲ್ಲ. ಆದರೆ ಅದಕ್ಕಿಂತ ಹೆಚ್ಚು ಸೇವಿಸಿದರೆ ಮಧುಮೇಹದಂಥ ಸಮಸ್ಯೆ ಕಾಡುವ ಸಾಧ್ಯತೆ ಇದೆ.
ಗರ್ಭಿಣಿಯರು ದಿನಕ್ಕೆ ಒಂದು ಮಾವಿನ ಹಣ್ಣು ಸೇವಿಸಿದರೆ ಸಮಸ್ಯೆ ಇಲ್ಲ. ಆದರೆ ಅದಕ್ಕಿಂತ ಹೆಚ್ಚು ಸೇವಿಸಿದರೆ ಮಧುಮೇಹದಂಥ ಸಮಸ್ಯೆ ಕಾಡುವ ಸಾಧ್ಯತೆ ಇದೆ.

Women Health: ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಯಲ್ಲಿ ಗರ್ಭದಲ್ಲಿರುವ ಮಗುವಿನ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಈ ಹಿನ್ನೆಲೆಯಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುವಾಗ ಅವರು ಜಾಗರೂಕತೆ ವಹಿಸಬೇಕಾಗುತ್ತದೆ. ಗರ್ಭಿಣಿಯಾಗಿದ್ದಾಗ ಮಧುಮೇಹದ ಸಾಧ್ಯತೆಗಳು ಜಾಸ್ತಿ ಇರುವುದರಿಂದ ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಾವಿನ ಹಣ್ಣುಗಳನ್ನು ಸೇವಿಸಬಾರದು ಎಂದು ಸಲಹೆ ನೀಡುತ್ತಾರೆ. ಇದು ನಿಜವಾಗಿಯೂ ಹೌದಾ..? ಗರ್ಭಿಣಿಯರು ಮಾವಿನ ಹಣ್ಣು ತಿಂದರೆ ಮಧುಮೇಹದ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆಯಾ..? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಟ್ರೆಂಡಿಂಗ್​ ಸುದ್ದಿ

ವಿಟಮಿನ್‌ ಸಿ ಅಂಶವುಳ್ಳ ಮಾವಿನ ಹಣ್ಣು

ಪ್ರಸೂತಿ ತಜ್ಞರು ಹೇಳುವ ಪ್ರಕಾರ ಮಾವಿನ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಅತ್ಯಧಿಕವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಒಂದು ಮಾವಿನ ಹಣ್ಣನ್ನು ತಿಂದರೆ ಆ ದಿನದ ವಿಟಮಿನ್ ಸಿ ಪೂರೈಕೆ ಸಿಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು, ಮೂಳೆಗಳು ಹಾಗೂ ಹಲ್ಲುಗಳ ಬೆಳವಣಿಗೆ ಸಮಪರ್ಕವಾಗಿ ಆಗಲು ವಿಟಮಿನ್ ಸಿ ಅತ್ಯಗತ್ಯವಾಗಿದೆ. ಮಾವಿನ ಹಣ್ಣುಗಳಲ್ಲಿ ವಿಟಮಿನ್ ಎ ಅಂಶ ಕೂಡ ಇರುತ್ತದೆ. ಜನನದ ಸಮಯದಲ್ಲಿ ಮಗುವಿನಲ್ಲಿ ವಿಟಮಿನ್ ಎ ಅಂಶದ ಕೊರತೆಯುಂಟಾದಲ್ಲಿ ಮಗುವಿನ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಬಹುದು. ಮಗುವಿನಲ್ಲಿ ಉಸಿರಾಟದ ಸಮಸ್ಯೆ ಹಾಗೂ ಅತಿಸಾರದಂತಹ ಸಮಸ್ಯೆ ಉಂಟಾಗಬಹುದು.

ಗರ್ಭಾವಸ್ಥೆಯಲ್ಲಿ ಮಾವಿನ ಹಣ್ಣಿನ ಸೇವಿಸುವುದರಿಂದ ಬಹಳಷ್ಟು ಲಾಭಗಳಿವೆ. ಗರ್ಭಿಣಿಯರಲ್ಲಿ ರಕ್ತ ಹೀನತೆಯನ್ನು ತಡೆಯುವುದರಿಂದ ಹಿಡಿದು, ಭ್ರೂಣದ ಬೆಳವಣಿಗೆಯನ್ನು ಉತ್ತೇಜಿಸುವುದು, ಮೂಳೆಗಳು ಹಾಗೂ ಹಲ್ಲುಗಳು ಬಲಗೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆ ದೇಹದಲ್ಲಿ ದ್ರವಾಂಶವನ್ನು ಸರಿದೂಗಿಸಲೂ ಸಹ ಮಾವಿನ ಹಣ್ಣುಗಳು ಸಹಕಾರಿಯಾಗಿವೆ.

ಅತಿಯಾದರೆ ಅಮೃತವೂ ವಿಷ

ಹಾಗಾದರೆ ಮಾವಿನ ಹಣ್ಣಿನ ಸೇವನೆಯಿಂದ ಗರ್ಭಿಣಿಯರಿಗೆ ತೊಂದರೆಯಾಗುತ್ತದೆ ಎಂಬುದು ಸುಳ್ಳು ಸುದ್ದಿಯಾ ಎಂಬ ಪ್ರಶ್ನೆ ಈಗ ನಿಮ್ಮ ಮನದಲ್ಲಿ ಮೂಡಿರಬಹುದು. ನಿಯಂತ್ರಿತ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅತಿಯಾಗಿ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ ನಿರ್ಜಲೀಕರಣ ಹಾಗೂ ಅತಿಸಾರದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಮಧುಮೇಹದ ಸಮಸ್ಯೆ ಉಂಟಾಗುವ ಅಪಾಯ ಕೂಡ ಇರುತ್ತದೆ. ಅಲ್ಲದೇ ತೂಕದಲ್ಲಿ ವಿಪರೀತ ಏರಿಕೆ ಉಂಟಾಗಬಹುದು. ಕೆಲವು ಗರ್ಭಿಣಿಯರು ಮಾವಿನ ಹಣ್ಣುಗಳ ಸೇವನೆಯಿಂದ ಅಲರ್ಜಿ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತದೆ.

ಮಾವಿನ ಹಣ್ಣುಗಳಲ್ಲಿ ಗರ್ಭಿಣಿ ಹಾಗೂ ಭ್ರೂಣದ ಆರೋಗ್ಯಕ್ಕೆ ಸಹಕಾರಿ ಎನಿಸುವ ಸಾಕಷ್ಟು ಪೋಷಕಾಂಶಗಳು ಅಡಗಿದೆ. ಆದರೆ ಅತಿಯಾಗಿ ತಿಂದರೆ ಅಮೃತವೂ ವಿಷ ಎಂಬಂತೆ ಅತಿಯಾದ ಮಾವಿನ ಹಣ್ಣಿನ ಸೇವನೆಯು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಹೀಗಾಗಿ ನಿಮ್ಮ ವೈದ್ಯರ ಸಲಹೆಯನ್ನು ಪಡೆದು ಅವರು ತಿಳಿಸಿದ ಪ್ರಮಾಣದಲ್ಲಿ ಮಾತ್ರ ಮಾವಿನ ಹಣ್ಣನ್ನು ಸೇವಿಸಿದಲ್ಲಿ ನಿಮಗೂ ಹಾಗೂ ನಿಮ್ಮ ಮಗುವಿಗೂ ಯಾವುದೇ ತೊಂದರೆ ಇರುವುದಿಲ್ಲ.