ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi Visit Tripura Meghalaya: ತ್ರಿಪುರ, ಮೇಘಾಲಯಕ್ಕೆ ಪ್ರಧಾನಿ ಮೋದಿ, 6,800 ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ | 10 ಅಂಶಗಳು

PM Modi visit Tripura Meghalaya: ತ್ರಿಪುರ, ಮೇಘಾಲಯಕ್ಕೆ ಪ್ರಧಾನಿ ಮೋದಿ, 6,800 ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ | 10 ಅಂಶಗಳು

PM Modi visit Tripura Meghalaya: ಇಂದು ಪ್ರಧಾನಿ ನರೇಂದ್ರ ಮೋದಿಯವರು ಮೇಘಾಲಯ ಮತ್ತು ತ್ರಿಪುರಕ್ಕೆ ಭೇಟಿ ನೀಡಿ 6,800 ಕೋಟಿ ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (ಫೈಲ್‌ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಫೈಲ್‌ ಚಿತ್ರ)

ಇಂದು ಪ್ರಧಾನಿ ನರೇಂದ್ರ ಮೋದಿಯವರು ಮೇಘಾಲಯ ಮತ್ತು ತ್ರಿಪುರಕ್ಕೆ ಬೇಟಿ ನೀಡುತ್ತಿದ್ದಾರೆ. ನಾರ್ತ್‌ ಈಸ್ಟ್‌ ಕೌನ್ಸಿಲ್‌ (ಈಶಾನ್ಯ ಮಂಡಳಿ) ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು, ಬೃಹತ್‌ ಮೊತ್ತದ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗಿ, ನೂತನ ಮುಖ್ಯಮಂತ್ರಿಗಳು ಆಯ್ಕೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ತ್ರಿಪುರ ಮತ್ತು ಮೇಘಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮುಂದಿನ ವರ್ಷದ ಆರಂಭದಲ್ಲಿಯೇ ತ್ರಿಪುರ ಮತ್ತು ಮೇಘಾಲಯಗಳಲ್ಲಿ ಚುನಾವಣೆ ನಡೆಯಲಿದೆ. ಎನ್‌ಪಿಪಿ-ಬಿಜೆಪಿ ಸರಕಾರವು ಮೇಘಾಲಯದಲ್ಲಿ ಆಡಳಿತ ನಡೆಸುತ್ತಿದ್ದು, ತ್ರಿಪುರದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಪಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಭೇಟಿಗೆ ಹೆಚ್ಚಿನ ಮಹತ್ವವಿದೆ.

ಮೇಘಾಲಯ ಮತ್ತು ತ್ರಿಪುರಕ್ಕೆ ಪ್ರಧಾನಿ ಭೇಟಿ: ಹತ್ತು ಅಂಶಗಳು

1. ತ್ರಿಪುರ ಮತ್ತು ಮೇಘಾಲಯ ಹಾಗೂ ಸಂಪೂರ್ಣ ಈಶಾನ್ಯ ಭಾಗವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಟ್ವೀಟ್‌ ಮಾಡಿದ್ದಾರೆ.

2. ನಾರ್ತ್‌ ಈಸ್ಟ್‌ ಕೌನ್ಸಿಲ್‌- ಇದು ಈಶಾನ್ಯ ಭಾಗದ ಸಾಮಾಜಿಕ ಅಭಿವೃದ್ಧಿ ಏಜೆನ್ಸಿಯಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೊರಾಂ, ನಾಗಲ್ಯಾಂಡ್‌, ಸಿಕ್ಕಿಂ ಮತ್ತು ತ್ರಿಪುರಗಳ ಅಭಿವೃದ್ಧಿಗಾಗಿ ಇರುವ ಕೌನ್ಸಿಲ್‌. ಇದನ್ನು 1971ರಲ್ಲಿ ಸ್ಥಾಪಿಸಲಾಗಿತ್ತು.

3. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರಧಾನಿ ನರೇಂದ್ರ ಮೋದಿಯ ಇಂದಿನ ಭೇಟಿಗೆ ಒಂದು ದಿನ ಮುನ್ನ ಅಂದ್ರೆ, ನಿನ್ನೆಯೇ ಶಿಲ್ಲಾಂಗ್‌ ತಲುಪಿದ್ದರು.

4. ಇಂದು ಬೆಳಗ್ಗಿನಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ತ್‌ ಈಸ್ಟ್‌ ಕೌನ್ಸಿಲ್‌ನ ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

5. ಇಂದು ಒಟ್ಟು 6,800 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ.

6. ಇವುಗಳಲ್ಲಿ 2,450 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳು ಮೇಘಾಲಯಕ್ಕೆ ಸಂಬಂಧಿಸಿದೆ.

7. ಪ್ರಧಾನಿ ನರೇಂದ್ರ ಮೋದಿಯವರು ಹಂಸ್ವಲಿಯಲ್ಲಿ ಐಐಎಂ ಶಿಲ್ಲಾಂಗ್‌ನ ಹೊಸ ಕ್ಯಾಂಪಸ್‌ ಉದ್ಘಾಟಿಸಲಿದ್ದಾರೆ. ಶಿಲ್ಲಾಂಗ್‌ ಡೈಂಗ್‌ಪಾಸೋಹ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಇದು ನ್ಯೂ ಶಿಲ್ಲಾಂಗ್‌ ಸ್ಯಾಟ್‌ಲೈಟ್‌ ಟೌನ್‌ಶಿಪ್‌ಗೆ ಉತ್ತಮ ಕನೆಕ್ಟಿವಿಟಿ ಒದಗಿಸಲಿದೆ. ಇದರೊಂದಿಗೆ ಮೇಘಾಲಯ, ಮಣಿಪುರ, ಅರುಣಾಚಲ ಪ್ರದೇಶದ ಮೂರು ರಸ್ತೆ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ.

8. ಅಸ್ಸಾಂ, ಮಿಜೋರಾಂ, ಮೇಘಾಲಯ, ಮಣಿಪುರ ಮತ್ತು ತ್ರಿಪುರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಆರು ರಸ್ತೆ ಪ್ರಾಜೆಕ್ಟ್‌ಗಳಿಗೂ ಚಾಲನೆ ನೀಡಲಿದ್ದಾರೆ.

9. ತ್ರಿಪುರದ ಸುಮಾರು 4,350 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ. ಅಂದರೆ, ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ ಮತ್ತು ನಗರ)ಗೆ ಚಾಲನೆ ನೀಡಲಿದ್ದಾರೆ. ಈ ಪ್ರಾಜೆಕ್ಟ್‌ 3,400 ಕೋಟಿ ರೂ. ಮೌಲ್ಯದ್ದಾಗಿದ್ದು, ಸುಮಾರು 2 ಲಕ್ಷ ಫಲಾನುಭವಿಗಳಿಗೆ ಮನೆ ದೊರಕಲಿದೆ.

10. ಪ್ರತಿಪಕ್ಷಗಳು ಇತ್ತೀಚಿನ ಭಾರತ ಚೀನಾ ಗಡಿ ವಿವಾದದ ಕುರಿತು ಟೀಕಿಸುತ್ತಿರುವ ಸಂದರ್ಭದಲ್ಲಿ, ಈಶಾನ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದಾರೆ.

IPL_Entry_Point