ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2023 Reaction: ಭಾರತ ತೊರೆಯುವ ಅತಿಶ್ರೀಮಂತರಿಗೇಕೆ ತೆರಿಗೆ ವಿನಾಯಿತಿ? ಪಾಸ್‌ಪೋರ್ಟ್‌ ರದ್ದುಮಾಡಿ ಎಂದ ಸ್ವದೇಶಿ ಜಾಗರಣ ಮಂಚ್‌

Budget 2023 reaction: ಭಾರತ ತೊರೆಯುವ ಅತಿಶ್ರೀಮಂತರಿಗೇಕೆ ತೆರಿಗೆ ವಿನಾಯಿತಿ? ಪಾಸ್‌ಪೋರ್ಟ್‌ ರದ್ದುಮಾಡಿ ಎಂದ ಸ್ವದೇಶಿ ಜಾಗರಣ ಮಂಚ್‌

Budget 2023 reaction: ಅತಿಶ್ರೀಮಂತರಿಗೆ ಅನ್ವಯವಾಗುವ ಆದಾಯ ತೆರಿಗೆ ದರವನ್ನು ಕಡಿಮೆ ಮಾಡಿರುವ ಬಗ್ಗೆ ಸ್ವದೇಶಿ ಜಾಗರಣ ಮಂಚ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಈ ರೀತಿ ಪರಿಹಾರವನ್ನು ನೀಡುವ ಬದಲು ಹೆಚ್ಚಿನ ತೆರಿಗೆ ದರವನ್ನು ಉಲ್ಲೇಖಿಸಿ ದೇಶವನ್ನು ತೊರೆಯುವ ಅತಿಶ್ರೀಮಂತರ ಪಾಸ್‌ಪೋರ್ಟ್‌ ರದ್ದುಗೊಳಿಸಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ ಹೇಳಿದೆ.

ಸ್ವದೇಶಿ ಜಾಗರಣ ಮಂಚ್‌ನ ಸಹ ಸಂಚಾಲಕ ಅಶ್ವನಿ ಮಹಾಜನ್
ಸ್ವದೇಶಿ ಜಾಗರಣ ಮಂಚ್‌ನ ಸಹ ಸಂಚಾಲಕ ಅಶ್ವನಿ ಮಹಾಜನ್

ನವದೆಹಲಿ: ʻದೇಶ ಬಿಟ್ಟು ಹೋಗುವ ಅತಿಶ್ರೀಮಂತರಿಗೇಕೆ ತೆರಿಗೆ ವಿನಾಯಿತಿ ನೀಡುತ್ತೀರಿ? ಅವರ ಪಾಸ್‌ಪೋರ್ಟ್‌ ರದ್ದುಮಾಡಿ..ʼ - ಇದು ಕೇಂದ್ರ ಬಜೆಟ್‌ ಮಂಡನೆ ಬಳಿಕ ಸ್ವದೇಶಿ ಜಾಗರಣ ಮಂಚ್‌ ನೀಡಿರುವ ಪ್ರತಿಕ್ರಿಯೆ!

ಟ್ರೆಂಡಿಂಗ್​ ಸುದ್ದಿ

ಅತಿಶ್ರೀಮಂತರಿಗೆ ಅನ್ವಯವಾಗುವ ಆದಾಯ ತೆರಿಗೆ ದರವನ್ನು ಕಡಿಮೆ ಮಾಡಿರುವ ಬಗ್ಗೆ ಸ್ವದೇಶಿ ಜಾಗರಣ ಮಂಚ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರ ಈ ರೀತಿ ಪರಿಹಾರವನ್ನು ನೀಡುವ ಬದಲು ಹೆಚ್ಚಿನ ತೆರಿಗೆ ದರವನ್ನು ಉಲ್ಲೇಖಿಸಿ ದೇಶವನ್ನು ತೊರೆಯುವ ಅತಿ ಶ್ರೀಮಂತರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಬೇಕು ಎಂದು ಸ್ವದೇಶಿ ಜಾಗರಣ ಮಂಚ್‌ ಹೇಳಿದೆ.

ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ ಕೇಂದ್ರ ಬಜೆಟ್ 2023-24, ಆದಾಯ ತೆರಿಗೆ ದರವನ್ನು ಪ್ರಸ್ತುತ 42.74% ರಿಂದ 39% ಕ್ಕೆ ಕಡಿಮೆ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇದು ಹೈ ನೆಟ್‌ವರ್ತ್‌ ಇಂಡಿವಿಜುವಲ್ಸ್‌ (HNWI) ಅಂದರೆ ಅತಿ ಶ್ರೀಮಂತರು ದೇಶ ತೊರೆಯುವುದನ್ನು ತಡೆಯಲು ಕೈಗೊಂಡಿರುವ ಕ್ರಮ ಎಂದು ಸ್ವದೇಶಿ ಜಾಗರಣ್‌ ಮಂಚ್‌ (SJM)ನ ಸಹ ಸಂಚಾಲಕ ಅಶ್ವನಿ ಮಹಾಜನ್ ಟೀಕಿಸಿದರು.

“ಹಲವು ಜನರು ವಿವಿಧ ಕಾರಣಗಳಿಂದ ದೇಶವನ್ನು ತೊರೆಯುತ್ತಿದ್ದಾರೆ. ವಿಶೇಷವಾಗಿ ಇಲ್ಲಿ ತೆರಿಗೆ ದರ ಹೆಚ್ಚಿರುವ ಕಾರಣ ಬೇರೆ ದೇಶದಲ್ಲಿ ಕೆಲಸ ಮಾಡುತ್ತಾರೆ” ಎಂಬುದರ ಕಡೆಗೆ ಮಹಾಜನ್ ಗಮನಸೆಳೆದರು.

"ನಾನು ವಿತ್ತ ಸಚಿವನಾಗಿದ್ದರೆ, ಈ ಎಲ್ಲ ಅತಿ ಶ್ರೀಮಂತರು ದೇಶವನ್ನು ತೊರೆಯುವುದನ್ನು ನಿಲ್ಲಿಸಿ ಮತ್ತು ಅವರ ಪಾಸ್‌ಪೋರ್ಟ್‌ಗಳನ್ನು ಹಿಂಪಡೆಯಲು ಮೊದಲು ಪ್ರಧಾನಿಯವರನ್ನು ಕೇಳುತ್ತಿದ್ದೆ" ಎಂದು ಮಹಾಜನ್ ಪಿಟಿಐಗೆ ನೀಡಿದ ವಿಶೇಷ ವೀಡಿಯೊ ಸಂದರ್ಶನದಲ್ಲಿ ಹೇಳಿದ್ದಾರೆ.

ತಮ್ಮ ಮೇಲೆ ಅನ್ವಯವಾಗುವ ತೆರಿಗೆ ದರದ ಕಾರಣ ಮುಂದಿಟ್ಟು ದೇಶವನ್ನು ತೊರೆದಿರುವ ಈ ಅತಿಶ್ರೀಮಂತ ವ್ಯಕ್ತಿಗಳನ್ನು ಎಂದಿಗೂ ಭಾರತಕ್ಕೆ ಹಿಂತಿರುಗಲು ಸರ್ಕಾರ ಬಿಡಬಾರದು ಎಂದು ಸ್ವದೇಶಿ ಜಾಗರಣ ಮಂಚ್ (SJM) ನ ಸಹ-ಸಂಚಾಲಕರು ಹೇಳಿದರು.

“ಭಾರತವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಬೇಕು. ಅಂತಹ ಜನರನ್ನು ನಾವು ಭಾರತದ ಬೆಳವಣಿಗೆಯ ಕಥೆಯ ಭಾಗವಾಗಿ ಮಾಡಬೇಕಾಗಿಲ್ಲ”ಎಂದು ಅವರು ಹೇಳಿದರು.

ಗಮನಿಸಬಹುದಾದ ಸುದ್ದಿಗಳು

ಭಾರತ ಮತ್ತು ಅಮೆರಿಕಗಳು MQ-9B ಪ್ರಿಡೇಟರ್‌ ಡ್ರೋನ್‌ ಒಪ್ಪಂದ ಅಂತಿಮಗೊಳಿಸುವ ವಿಚಾರದಲ್ಲಿ ಉತ್ಸುಕತೆ ತೋರಿವೆ. ಇದು 3 ಬಿಲಿಯನ್‌ ಡಾಲರ್‌ ಮೌಲ್ಯದ ಒಪ್ಪಂದವಾಗಿದ್ದು, 30 MQ-9B ಪ್ರಿಡೇಟರ್‌ ಡ್ರೋನ್‌ ಖರೀದಿಗೆ ಸಂಬಂಧಿಸಿದ್ದಾಗಿದೆ. ಭಾರತ ಮತ್ತು ಅಮೆರಿಕಗಳು ಈ ಒಪ್ಪಂದಕ್ಕೆ ಸಂಬಂಧಿಸಿದ ಆರಂಭಿಕ ತೀರ್ಮಾನ ತೆಗೆದುಕೊಳ್ಳಲು ಉತ್ಸುಕವಾಗಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Speeding truck crushes car: ಅತಿವೇಗದಿಂದ ಬಂದ ಕಾಂಕ್ರೀಟ್‌ ಮಿಕ್ಸರ್‌ ಟ್ರಕ್‌, ಎಸ್‌ಯುವಿ ಮೇಲೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಶಾಲೆಗೆ ಹೊರಟಿದ್ದ ಬಾಲಕಿ ಮತ್ತು ಆಕೆಯ ತಾಯಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಎಸ್‌ಯುವಿ ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ಅಪಘಾತ ಸ್ಥಳದ ಕೆಲವು ಫೋಟೋಸ್‌ ಇಲ್ಲಿವೆ.

IPL_Entry_Point