Speeding truck crushes car: ಬೆಂಗಳೂರು ಬನ್ನೇರುಘಟ್ಟದಲ್ಲಿ ಎಸ್‌ಯುವಿ ಮೇಲೆ ಬಿದ್ದ ಸಿಮೆಂಟ್ ಮಿಕ್ಸರ್ ಟ್ರಕ್; ಅಪಘಾತ ಸ್ಥಳದ ಫೋಟೋಸ್
Speeding truck crushes car: ಅತಿವೇಗದಿಂದ ಬಂದ ಕಾಂಕ್ರೀಟ್ ಮಿಕ್ಸರ್ ಟ್ರಕ್, ಎಸ್‌ಯುವಿ ಮೇಲೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಶಾಲೆಗೆ ಹೊರಟಿದ್ದ ಬಾಲಕಿ ಮತ್ತು ಆಕೆಯ ತಾಯಿ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಎಸ್‌ಯುವಿ ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ಅಪಘಾತ ಸ್ಥಳದ ಕೆಲವು ಫೋಟೋಸ್ ಇಲ್ಲಿವೆ.
(1 / 3)
ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಟ್ರಕ್ ಕಾರಿನ ಮೇಲೆ ಬಿದ್ದು ಸಂಭವಿಸಿದ ಭೀಕರ ಅಪಘಾತ (Tragic accident)ದಲ್ಲಿ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಎಸ್‌ಯುವಿ. (ANI)
(2 / 3)
ತಾಯಿ, ಮಗಳ ದುರ್ಮರಣಕ್ಕೆ ಕಾರಣವಾದ ಕಾಂಕ್ರೀಟ್ ಮಿಕ್ಸರ್ ಅಪಘಾತ ಸ್ಥಳದಲ್ಲಿ ಕಂಡುಬಂದುದು ಹೀಗೆ. ಇದನ್ನು ತೆರವುಗೊಳಿಸಲು ಮೂರು ಜೆಸಿಬಿ, ಒಂದು ಅರ್ಥ್ ಮೂವರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. (ANI)
ಇತರ ಗ್ಯಾಲರಿಗಳು