ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ; 101 ರೂ, 251 ರೂಪಾಯಿಗಳ ಏರ್‌ಫೈಬರ್ ಬೂಸ್ಟರ್ ಪ್ಲಾನ್ ಘೋಷಣೆ

ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ; 101 ರೂ, 251 ರೂಪಾಯಿಗಳ ಏರ್‌ಫೈಬರ್ ಬೂಸ್ಟರ್ ಪ್ಲಾನ್ ಘೋಷಣೆ

ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗೆ ಜಿಯೋ 2 ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ. ಯಾವ ಪ್ಲಾನ್‌ನಲ್ಲಿ ಎಷ್ಟು ಡೇಟಾ ಇದೆ ಅನ್ನೋದರ ವಿವರ ಇಲ್ಲಿದೆ.

ರಿಲಯನ್ಸ್ ಜಿಯೋ ಸಂಸ್ಥೆ 101 ರೂ, 251 ರೂಪಾಯಿಗಳ ಏರ್‌ಫೈಬರ್ ಬೂಸ್ಟರ್ ಪ್ಲಾನ್ ಘೋಷಣೆ ಮಾಡುವ ಮೂಲಕ ಪ್ರತಿಸ್ಪರ್ಧಿ ಏರ್‌ಟೆಲ್‌ಗೆ ತೀವ್ರ ಪೈಪೋಟಿ ನೀಡುತ್ತಿದೆ.
ರಿಲಯನ್ಸ್ ಜಿಯೋ ಸಂಸ್ಥೆ 101 ರೂ, 251 ರೂಪಾಯಿಗಳ ಏರ್‌ಫೈಬರ್ ಬೂಸ್ಟರ್ ಪ್ಲಾನ್ ಘೋಷಣೆ ಮಾಡುವ ಮೂಲಕ ಪ್ರತಿಸ್ಪರ್ಧಿ ಏರ್‌ಟೆಲ್‌ಗೆ ತೀವ್ರ ಪೈಪೋಟಿ ನೀಡುತ್ತಿದೆ.

ಬೆಂಗಳೂರು: ಮಾರುಕಟ್ಟೆಯಲ್ಲಿ ಪ್ರತಿ ಸ್ಪರ್ಧೆಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌ಗಳನ್ನು ಘೋಷಿಸಿದ್ದು, ಇದೀಗ ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗಾಗಿ 101 ರೂಪಾಯಿ ಹಾಗೂ 255 ರೂಪಾಯಿಗಳ ಎರಡು ಹೊಸ ಬೂಸ್ಟರ್ ಪ್ಲಾನ್‌ಗಳನ್ನು ಪರಿಚಯಿಸಿದೆ.

ಟ್ರೆಂಡಿಂಗ್​ ಸುದ್ದಿ

ಹೊಸ ಏರ್‌ಫೈಬರ್ ಬೂಸ್ಟರ್ ಪ್ಲಾನ್‌ಗಳ ವಿವರ ಹೀಗಿದೆ

101 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ ಜಿಯೋ ಏರ್‌ಫೈಬರ್ ಗ್ರಾಹಕರು 100 ಜಿಬಿ ಹೈ ಸ್ಪೀಡ್ ಡೇಟಾವನ್ನು ನೀಡುತ್ತಿದೆ. 251 ರೂಪಾಯಿ ಬೂಸ್ಟರ್ ಪ್ಲಾನ್‌ನಲ್ಲಿ 500 ಜಿಬಿ ಡೇಟಾ ಇರಲಿದೆ. ಇದನ್ನು ಏರ್‌ಫೈಬರ್ ಪ್ಲಸ್ ಗ್ರಾಹಕರು ಸೇರಿದಂತೆ ಎಲ್ಲರೂ ಪಡೆಯಬಹುದಾಗಿದೆ. ಈ ಎರಡೂ ಪ್ಲಾನ್‌ಗಳು Myjio ಅಪ್ಲಿಕೇಶನ್ ಮತ್ತು jio.com ನಲ್ಲಿ ಲಭ್ಯವಿದೆ. ಜಿಯೋ ಏರ್‌ಫೈಬರ್ ಬಳಕೆದಾರರಿಗೆ 400 ರೂಪಾಯಿಯ ಬೂಸ್ಟರ್ ಯೋಜನೆಯನ್ನು ಸಹ ನೀಡುತ್ತದೆ. ಈ ಪ್ಲಾನ್‌ನಲ್ಲಿ 1ಟಿಬಿ ಡೇಟಾ ಅವಧಿ ಮುಗಿದ ನಂತರ ಅನಿಯಮಿತ ಯೋಜನೆಯಾಗುತ್ತದೆ. ಆದರೆ ಇದರ ವೇಗ 64kbps ಇರುತ್ತದೆ.

ಹೊಸದಾಗಿ ನೀಡಿರುವ ಏರ್‌ಫೈಬರ್ ಬೂಸ್ಟರ್‌ ಯೋಜನೆಗಳ ಜೊತೆಗೆ ಜಿಯೋ ತನ್ನ ಏರ್‌ಫೈಬರ್ ಮತ್ತು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗೆ ಒಟ್ಟು 6 ಪ್ಲಾನ್‌ಗಳನ್ನು ನೀಡಿದೆ. ಜಿಯೋ ಏರ್‌ಫೈಬರ್‌ನಲ್ಲಿರುವ 599 ರೂಪಯಿ, 899 ರೂಪಾಯಿ ಹಾಗೂ 1,199 ರೂಪಾಯಿಗಳ ಈ ಮೂರು ರಿಚಾರ್ಜ್ ಪ್ಲಾನ್‌ಗಳು ಎಲ್ಲಾ ಗ್ರಾಹಕರಿಗೂ ಲಭ್ಯಇವೆ. 6 ಮತ್ತು 12 ತಿಂಗಳ ವ್ಯಾಲಿಡಿಟಿಯೊಂದಿಗೆ ಮೂರು ರಿಚಾರ್ಜ್ ಪ್ಲಾನ್‌ಗಳಲ್ಲಿ 1000 ಜಿಬಿ ಡೇಟಾ ಇರುತ್ತದೆ.

1,499 ರೂಪಾಯಿ, 2,499 ರೂಪಾಯಿ ಹಾಗೂ 3,999 ರೂಪಾಯಿಗಳ ದೊಡ್ಡ ಮೊತ್ತದ ಈ ಮೂರು ಪ್ಲಾನ್‌ಗಳನ್ನು ಏರ್‌ಫೈಬರ್ ಮ್ಯಾಕ್ಸ್ ಗ್ರಾಹಕರಿಗೆ ನೀಡಲಾಗಿದೆ. 6 ತಿಂಗಳು ಹಾಗೂ 1 ವರ್ಷದ ವ್ಯಾಲಿಡಿಟಿ ಇದ್ದು, ಒಟ್ಟು 1,000ಜಿಬಿ ಡೇಟಾ ಇದರಲ್ಲಿದೆ. ಏರ್ಟೆಲ್ ಹಾಗೂ ಇತರೆ ಪ್ರತಿ ಸ್ಪರ್ಧೆಗಳನ್ನು ಗಮನದಲ್ಲಿಟ್ಟುಕೊಂಡು ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಲೇ ಇದೆ.

ಭಾರತದಲ್ಲಿ 5G ಸೇವೆ ನೀಡಲಿರುವ ವಿಐ; ಏರ್‌ಟೆಲ್, ಜಿಯೋ 5ಜಿ ಪ್ಲಾನ್​​ನಲ್ಲಾಗಲಿದೆ ಬದಲಾವಣೆ

ಮುಂದಿನ 6-7 ತಿಂಗಳೊಳಗೆ ವೊಡಾಫೋನ್ ಐಡಿಯಾ (Vodafone Idea-Vi) ಭಾರತದಲ್ಲಿ ತನ್ನ 5G ಸೇವೆಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. ವಿಐ ಪ್ರತಿಸ್ಪರ್ಧಿಗಳು ಈಗಾಗಲೇ ದೇಶದಾದ್ಯಂತ 5ಜಿ ಸೇವೆ ಆರಂಭಿಸಿವೆ. ಹೀಗಾಗಿ ವೊಡಾಫೋನ್ ಐಡಿಯಾಗೆ ಎಷ್ಟರ ಮಟ್ಟಿಗೆ ಯಶಸ್ಸು ಸಿಗುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.

ಕಂಪನಿಯ ಮೂರನೇ ತ್ರೈಮಾಸಿಕ ಗಳಿಕೆಯ ವರದಿ ನೀಡುವ ವೇಳೆ ವೊಡಾಫೋನ್ ಐಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ ಮೂಂದ್ರಾ ಅವರು 5G ಸೇವೆ ಘೋಷಣೆಯನ್ನು ಮಾಡಿದ್ದಾರೆ. ವೊಡಾಫೋನ್ ಐಡಿಯಾ ಕಂಪನಿಯ ಘೋಷಣೆ ಬೆನ್ನಲ್ಲೇ ಏರ್‌ಟೆಲ್ ಮತ್ತು ಜಿಯೋ ಕಂಪನಿಗಳು ಶೀಘ್ರದಲ್ಲೇ ತಮ್ಮ 5ಜಿ ಪ್ಲಾನ್​​ನ ಬೆಲೆಯಲ್ಲಿ ಬದಲಾವಣೆ ಮಾಡಲು ಮುಂದಾಗಿವೆ ಎಂದು ವರದಿಯಾಗುತ್ತಿದೆ. ಆದರೆ ಈ ಬೆಳವಣಿಗೆಗಳನ್ನು ಜಿಯೋ ಅಥವಾ ಏರ್​ಟೆಲ್​ ಕಂಪನಿಯು ಅಧಿಕೃತವಾಗಿ ದೃಢಪಡಿಸಿಲ್ಲ.

ದೇಶದಲ್ಲಿ 5G ಪರಿಚಯಿಸಲು ತನ್ನ ಕಾರ್ಯತಂತ್ರವನ್ನು ಅಂತಿಮಗೊಳಿಸಲು ವಿಐ ತಂತ್ರಜ್ಞಾನ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ನಾವು 6 ರಿಂದ 7 ತಿಂಗಳುಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದೇವೆ ಎಂದು ಅಕ್ಷಯ ಮೂಂದ್ರಾ ತಿಳಿಸಿದ್ದಾರೆ. ಜಿಯೋ ಈಗಾಗಲೇ ರಾಷ್ಟ್ರವ್ಯಾಪಿ ತನ್ನ 5G ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಆದರೆ ಏರ್‌ಟೆಲ್ ಕೆಲ ಪ್ರದೇಶಗಳಲ್ಲಿ ಇನ್ನೂ 5ಜಿ ಸೇವೆ ಪ್ರಾರಂಭಿಸಿಲ್ಲ. ಮಾರ್ಚ್ 2024 ರ ವೇಳೆಗೆ ಭಾರತಾದಾದ್ಯಂತ 5ಜಿ ಸೇವೆ ಸಾಧಿಸುವ ಗುರಿಯನ್ನು ಏರ್​ಟೆಲ್​ ಹೊಂದಿದೆ. (This copy first appeared in Hindustan Times Kannada website. To read more like this please logon to kannada.hindustantime.com).

IPL_Entry_Point