ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಮೈನವಿರೇಳಿಸುವ ಕ್ಷಣ; ವಿದೇಶದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ವಿದ್ಯಾರ್ಥಿ

Viral Video: ಮೈನವಿರೇಳಿಸುವ ಕ್ಷಣ; ವಿದೇಶದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ವಿದ್ಯಾರ್ಥಿ

Indian student unfurls tricolour: ತನ್ನ ಹೆಸರು ಕರೆಯುತ್ತಿದ್ದಂತೆಯೇ ಮಹೇಶ್ ನಾರಾಯಣ್​ ಎಂಬ ವಿದ್ಯಾರ್ಥಿ ವೇದಿಕೆ ಏರುತ್ತಾನೆ. ಪದವಿ ಸ್ವೀಕಾರಕ್ಕೂ ಮುನ್ನ ಜೇಬಿನಿಂದ ಭಾರತದ ರಾಷ್ಟ್ರಧ್ವಜ ತೆಗೆದು ಪ್ರದರ್ಶಿಸುತ್ತಾನೆ. ನಂತರ ವೇದಿಕೆಯುದ್ದಕ್ಕೂ ನಡೆಯುತ್ತಾ ಅದನ್ನು ಹಾರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ.

ವಿದೇಶದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ವಿದ್ಯಾರ್ಥಿ
ವಿದೇಶದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ವಿದ್ಯಾರ್ಥಿ

ಭಾರತದಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಅಲ್ಲಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ಪದವಿಗಳನ್ನು ಪಡೆಯುವುದು ಹೆಮ್ಮೆಯ ಕ್ಷಣವಾಗಿರುತ್ತದೆ. ಈ ಕ್ಷಣವನ್ನು ಇನ್ನಷ್ಟು ವಿಶೇಷವಾಗಿಸಲು ಅನೇಕ ವಿದ್ಯಾರ್ಥಿಗಳು ವಿಶಿಷ್ಟವಾದದ್ದನ್ನು ಮಾಡಲು ಪ್ರಯತ್ನಿಸುತ್ತಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ಭಾರತೀಯರಿಗೆ ಮೈನವಿರೇಳಿಸುವಂತೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ವಿದೇಶದ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ವಘಟಿಕೋತ್ಸವ ಸಮಾರಂಭದಲ್ಲಿ ಭಾರತೀಯ ವಿದ್ಯಾರ್ಥಿ ತ್ರಿವರ್ಣ ಧ್ವಜವನ್ನು ಹಾರಿಸಿದ ಸಂದರ್ಭದ ವಿಡಿಯೋ ಇದಾಗಿದೆ. ತನ್ನ ಹೆಸರು ಕರೆಯುತ್ತಿದ್ದಂತೆಯೇ ಮಹೇಶ್ ನಾರಾಯಣ್​ ಎಂಬ ವಿದ್ಯಾರ್ಥಿ ವೇದಿಕೆ ಏರುತ್ತಾನೆ. ಪದವಿ ಸ್ವೀಕಾರಕ್ಕೂ ಮುನ್ನ ಜೇಬಿನಿಂದ ಭಾರತದ ರಾಷ್ಟ್ರಧ್ವಜ ತೆಗೆದು ಪ್ರದರ್ಶಿಸುತ್ತಾನೆ. ನಂತರ ವೇದಿಕೆಯುದ್ದಕ್ಕೂ ನಡೆಯುತ್ತಾ ಅದನ್ನು ಹಾರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವೇಳೆ ಮಹೇಶ್ ನಾರಾಯಣ್ ಭಾರತದ ಸಾಂಪ್ರದಾಯಿಕ ಉಡುಪು ಧರಿಸಿರುತ್ತಾನೆ. ಕೇಸರಿ ಮತ್ತು ಕೆಂಪು ಬಣ್ಣದ ಪೈಜಾಮ ತೊಟ್ಟಿದ್ದು, ಕಾಲಿಗೆ ಹಾಕಿದ್ದ ಚಪ್ಪಲಿಯೂ ಸಾಂಪ್ರದಾಯಿಕ ಶೈಲಿಯಲ್ಲಿದ್ದದ್ದು ವಿಶೇಷವಾಗಿತ್ತು.

ಛತ್ತೀಸ್‌ಗಢ್ ಕೇಡರ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿ ಅವನೀಶ್ ಶರಣ್ ಈ ವಿಡಿಯೋವನ್ನು ತಮ್ಮ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಆತ ಪದವಿ ಪಡೆದ ಮತ್ತು ಲಕ್ಷಾಂತರ ಹೃದಯಗಳನ್ನು ಗೆದ್ದನು" ಎಂದು ಅವನೀಶ್ ಶರಣ್ ತಮ್ಮ ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ.

ಈ ವಿಡಿಯೋ ನೆಟ್ಟಿಗರ ಹೃಯದ ಗೆದ್ದಿದ್ದು, ಪಾಸಿಟಿವ್​​ ಕಾಮೆಂಟ್​​ಗಳ ಸುರಿಮಳೆಯೇ ಹರಿದು ಬಂದಿದೆ. “ಎಂತಹ ಸುಂದರವಾದ ಗೆಸ್ಚರ್. ಜೈ ಹಿಂದ್ ಗೆಳೆಯ. ಈ ವ್ಯಕ್ತಿಯ ಬಗ್ಗೆ ತುಂಬಾ ಹೆಮ್ಮೆ ಇದೆ, ” ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ದಿಲ್ ಜೀತ್ ಲಿಯಾ ಭಾಯ್ ನೆ (ಸಹೋದರ ನಮ್ಮ ಹೃದಯವನ್ನು ಗೆದ್ದರು)...ಅದ್ಭುತ ಕ್ಷಣ" ಎಂದು ಮತ್ತೊಬ್ಬರು ಹೇಳಿದ್ದಾರೆ. "ಆತನ ಮುಖದಲ್ಲಿ ಬೆಲೆಕಟ್ಟಲಾದ ತೃಪ್ತಿಯ ಭಾವನೆ" ಎಂದು ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರೆ.

ವಿದೇಶದಲ್ಲಿ ಕನ್ನಡ ಧ್ವಜ ಹಾರಿಸಿದ್ದ ವಿದ್ಯಾರ್ಥಿ

ಕೆಲ ತಿಂಗಳ ಹಿಂದೆ ಲಂಡನ್​​ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯೊಬ್ಬ ಕನ್ನಡದ ಧ್ವಜ ಹಾರಿಸಿದ್ದ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎಂಎಸ್​ ಪದವಿ ಸ್ವೀಕಾರದ ವೇಳೆ ಬೀದರ್​ ಮೂಲದ ಆದಿಶ್​ ಆರ್​.ವಾಲಿ ಎಂಬ ವಿದ್ಯಾರ್ಥಿ ಕೆಂಪು-ಹಳದಿ ಬಣ್ಣದ ಕನ್ನಡ ಧ್ವಜ ಧ್ವಜ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದನು. ಬಳಿಕ ಈತನನ್ನು ಯುನೈಟೆಡ್​ ಕಿಂಗ್​ಡಮ್​ನ ಕನ್ನಡ ಸಾಹಿತ್ಯ ಪರಿಷತ್​ ಯುವ ಸಂಚಾಲಕನನ್ನಾಗಿ ಆಯ್ಕೆ ಮಾಡಲಾಗಿತ್ತು.

IPL_Entry_Point