Cyber Crime: ಎಕ್ಸ್ ಮುಖ್ಯಸ್ಥ ಮಸ್ಕ್ ಡಿಫೇಕ್ ವಿಡಿಯೋ ಮೂಲಕ ಕೋರಿಯಾ ಮಹಿಳೆ ಜತೆ ಲವ್, 41 ಲಕ್ಷ ರೂ, ವಂಚನೆ
ತಂತ್ರಜ್ಞಾನದ ದುರ್ಬಳಕೆ ಎಲ್ಲೆಡೆ ನಡೆದಿದೆ.ದಕ್ಷಿಣಾ ಕೋರಿಯಾದಲ್ಲಿ ಮಹಿಳೆಯೊಬ್ಬರು ಪ್ರಖ್ಯಾತ ಉದ್ಯಮಿ ಎಲನ್ ಮಸ್ಕ್( Elon Mask) ಅವರ ಹೆಸರಿನ ನಕಲಿ ಖಾತೆಯಿಂದ ವಂಚನೆಗೆ ಒಳಗಾಗಿದ್ದಾರೆ.
ಸಿಯೋಲ್: ಈಗ ಎಲ್ಲೆಲ್ಲೂ ಡಿ ಫೇಕ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರಲ್ಲೂ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಎಷ್ಟು ಒಳಿತನ್ನು ಮಾಡುತ್ತಿದೆಯೋ ಅಷ್ಟೇ ಮೋಸ, ವಂಚನೆಯೂ ದಾರಿಯಾಗಿದೆ. ಬಳಕೆ ಮಾಡುವವರು ಎಚ್ಚರದಿಂದ ಇರಬೇಕಷ್ಟೇ. ಭಾರತದಲ್ಲಿಯೇ ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸಹಿತ ಹಲವರ ಡಿಫೇಕ್ ವಿಡಿಯೋ ಬಳಸಿ ಭಾರೀ ಸದ್ದು ಮಾಡಿದ್ದ ಪ್ರಕರಣ ವರದಿಯಾಗಿತ್ತು. ಗಣ್ಯರನ್ನೇ ಟಾರ್ಗೆಟ್ ಮಾಡಿ ಡಿಫೇಕ್ ವಿಡಿಯೋ ಮಾಡುವುದು ನಡೆದಿದೆ. ಇದೇ ರೀತಿ ವಿಶ್ವದ ಪ್ರಮುಖ ಉದ್ಯಮಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಅವರ ಡಿಫೇಕ್ ವಿಡಿಯೋ ಮೂಲಕ ಭಾರೀ ವಂಚನೆ ಮಾಡಿರುವ ಪ್ರಕರಣವಿದು.
ದಕ್ಷಿಣಾಕೋರಿಯಾದ ಸಿಯೋಲ್ ನಗರದ ಮಹಿಳೆಯರೊಬ್ಬರು ತಾವು ಎಕ್ಸ್ ಸಂಸ್ಥೆ ಹಾಗೂ ಟೆಸ್ಲಾ ಕಂಪೆನಿ ಮುಖ್ಯಸ್ಥ ಎಲಾನ್ ಮಸ್ಕ್ ಅವರೊಂದಿಗೆ ಸಂಪರ್ಕಕ್ಕೆ ಬಂದಿರುವಾಗಿ ನಂಬಿ ಸಾಕಷ್ಟು ಹಣವನ್ನೂ ಕಳೆದುಕೊಂಡಿದ್ದಾಳೆ.
ಆಗಿದ್ದಾದರೂ ಏನು
ದಕ್ಷಿಣಾ ಕೋರಿಯಾದ ಮಹಿಳೆ ಜಿಯೋಂಗ್ ಜಿ ಸುನ್ ಅವರಿಗೆ ಸಾಮಾಜಿಕ ಮಾಧ್ಯಮದ ಹುಚ್ಚು.ಅದರಲ್ಲೂ ಗಣ್ಯಾತಿ ಗಣ್ಯರನ್ನು ಪರಿಚಯ ಮಾಡಿಕೊಳ್ಳುವ ಉಮೇದು. ಇನ್ಸ್‌ಟಾ ಗ್ರಾಂ ಖಾತೆಯಲ್ಲಿ ಸುನ್ ಅವರು ಎಲಾನ್ ಮಸ್ಕ್ ಅವರ ಖಾತೆಯೊಂದಿಗೆ ಸಂಪರ್ಕ ಸಾಧಿಸಿದ್ದರು. ಆಕೆಗೆ ತಾನು ನಿಜವಾಗಿಯೂ ಬಿಲೇನಿಯರ್ ಎಲಾನ್ ಮಸ್ಕ್ ಜತೆಗೆ ಮಾತುಕತೆ ನಡೆಸುತ್ತಿರುವುದಾಗಿ ನಂಬಿದ್ದರು. ಆದರೆ ಅದು ನಿಜವಾದ ಖಾತೆಯಾಗಿರಲಿಲ್ಲ. ಅವರೊಂದಿಗೆ ವಿಡಿಯೋದಲ್ಲಿ ಮಾತನಾಡಿದ್ದು ಡಿಫೇಕ್ ವಿಡಿಯೋದಲ್ಲಿ.
ಆತ ನನ್ನೊಂದಿಗೆ ಮಾತನಾಡಿದ್ದು ನೋಡಿ ನನಗೂ ಇದು ನಿಜವೋ ಕನಸೋ ಎನ್ನುವುದು ತಿಳಿಯದಾಗಲಿಲ್ಲ. ಏಕೆಂದರೆ ಮಸ್ಕ್ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿದ್ದು ಖುಷಿಗೆ ಪಾರವೇ ಇರಲಿಲ್ಲ. ಖಾತೆಯ ವಿವರಗಳನ್ನು ನೋಡಿ ಇವರು ನಿಜವಾಗಿಯೂ ಮಸ್ಕ್ ಹೌದೋ ಅಲ್ಲವೋ ಎನ್ನುವ ಅನುಮಾನ ಬಂದಿತ್ತು. ಆದರೆ ಅವರು ನಂಬಿಸಿದ್ದರಿಂದ ನಿಜವಾಗಿಯೂ ಮಸ್ಕ್ ಅವರೇ ಎನ್ನುವ ನಂಬಿಕೆ ಬಂದಿತು ಎಂದು ಸುನ್ ಹೇಳಿಕೊಂಡಿದ್ದಾರೆ.
ನಂಬಿಕೆ ಬರುವ ನಡವಳಿಕೆ
ಆದರೆ ಮಸ್ಕ್ ತಾವು ಕೆಲಸ ಮಾಡುತ್ತಿರುವ ಸ್ಥಳದ ಫೋಟೋ, ಮಕ್ಕಳ ಬಗ್ಗೆ ಮಾತನಾಡಿದ್ದು, ತನ್ನ ಅಭಿಮಾನಿಗಳೊಂದಿಗೆ ಹೀಗೆ ಆಗಾಗ ಮಾತನಾಡುತ್ತೇನೆ ಎಂದು ಹೇಳಿದ್ದೂ ಆಕೆಗೆ ನಿಜವಾಗಿಯೂ ಮಸ್ಕ್ ಜತೆಗೆ ಸಂಪರ್ಕದಲ್ಲಿರುವ ಮಾಹಿತಿ ದೊರತಿತ್ತು. ಅಲ್ಲದೇ ಸದ್ಯವೇ ಕೋರಿಯಾದ ಅಧ್ಯಕ್ಷರನ್ನು ಭೇಟಿ ಮಾಡಲು ಬರುತ್ತೇನೆ ಎಂದು ಹೇಳಿದ್ದು ಇನ್ನೂ ನಂಬುವಂತೆ ಮಾಡಿತ್ತು.
ಡಿಫೇಕ್ ವಿಡಿಯೋದಲ್ಲಿ ಮಸ್ಕ್ ರೀತಿಯಲ್ಲೇ ಆತ ನಿರಂತರವಾಗಿ ಆಕೆಯೊಂದಿಗೆ ಮಾತುಕತೆ ನಡೆಸಿದ್ದ. ಮಸ್ಕ್ ಐ ಲವ್ ಯು ಎಂದು ಕೂಡ ಹೇಳಿಕೊಂಡಿದ. ಇದರಿಂದ ಆಕೆ ಪುಳಕಿತಳಾಗಿ ಹೋಗಿದ್ದಳು.
ಬಯಲಾಯ್ತು ವಂಚನೆ
ಇದೇ ವೇಳೆ ನನ್ನ ಉದ್ಯಮವನ್ನು ವಿಸ್ತರಣೆ ಮಾಡುತ್ತಿದ್ದೇನೆ. ನಿನ್ನ ಹಣವನ್ನು ಹೂಡಿಕೆ ಮಾಡಿ ನಿನ್ನನ್ನೇ ಶ್ರೀಮಂತಳನ್ನಾಗಿ ಮಾಡುವೆ ಎಂದು ನಂಬಿಸಿದ. ಕೋರಿಯಾದಲ್ಲಿರುವ ಸ್ನೇಹಿತರೊಬ್ಬರ ಖಾತೆಗೆ ಹಣ ಹಾಕುವಂತೆ ತಿಳಿಸಿದ್ದ. ನನ್ನಂದಾಗಿ ನನ್ನ ಫ್ಯಾನ್‌ಗಳು ಶ್ರೀಮಂತರಾಗುವುದು ನನಗೂ ಖುಷಿ ತರುವ ವಿಚಾರ ಎಂದು ಹೇಳಿಕೊಂಡಿದ್ದ. ಇದನ್ನು ನಂಬಿದ ಸುನ್ ಬರೋಬ್ಬರಿ , 41 ಲಕ್ಷ ರೂ.ಗಳನ್ನು ಆಕೆ ಖಾತೆಗೆ ವರ್ಗಾಯಿಸಿದ್ದಳು. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಅಂತ ಹೆಸರಿನ ಯಾವುದೇ ಖಾತೆ ಇಲ್ಲ ಎನ್ನುವುದು ತಿಳಿದಿತ್ತು. ಆನಂತರ ಆಕೆ ಕೃತಬುದ್ದಿ ತಂತ್ರಜ್ಞಾನ ವಂಚನೆ ಬಲೆಗೆ ತಾನು ಬಿದ್ದಿರುವುದು ಬಯಲಾಗಿತ್ತು.
ಆದರೆ ದಕ್ಷಿಣಾ ಕೋರಿಯಾದಲ್ಲಿ ಸೈಬರ್ ಅಪರಾಧ ಪ್ರಕರಣ ತಡೆಗೆ ಅಂತಹ ಬಿಗಿ ಕಾನೂನುಗಳು ಇಲ್ಲ. ಈ ಕಾರಣದಿಂದ ಅಲ್ಲಿ ಜನ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. ಅದರಲ್ಲಿ ಸುನ್ ಕೂಡ ಒಬ್ಬರು.
ದಕ್ಷಿಣಾ ಕೋರಿಯಾದಲ್ಲಿ ಸಿಯೋಲ್ ವಿಶ್ವವಿದ್ಯಾನಿಲಯವೊಂದರಿಂದ ನಡೆದಿರುವ ಅಧ್ಯಯನವೊಂದರ ಪ್ರಕಾರ, ಒಂದೇ ವರ್ಷ ಅವಧಿಯಲ್ಲಿ 280 ಸೈಬರ್ ಅಪರಾಧಗಳು ನಡೆದಿವೆ. ಇದರಲ್ಲಿ ಶೇ.71.4 ವಂಚನೆಗೆ ಒಳಗಾದವರು ಮಹಿಳೆಯರೇ ಎಂದು ತಿಳಿಸಲಾಗಿದೆ.