ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Most Expensive Vegetable: ಈ ತರಕಾರಿ ಬಲುದುಬಾರಿ, ಕೆಜಿಗೆ 85,614 ರೂಪಾಯಿ, ಸಾಂಬಾರ್‌ ಮಾಡುವಿರಾ? ಪಲ್ಯ ಮಾಡುವಿರಾ?

Most expensive vegetable: ಈ ತರಕಾರಿ ಬಲುದುಬಾರಿ, ಕೆಜಿಗೆ 85,614 ರೂಪಾಯಿ, ಸಾಂಬಾರ್‌ ಮಾಡುವಿರಾ? ಪಲ್ಯ ಮಾಡುವಿರಾ?

ಹುಪ್‌ ಶೂಟ್ಸ್‌ (Hop shoots) ಎನ್ನುವ ತರಕಾರಿಯು ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೇ ದುಬಾರಿ ತರಕಾರಿಯಾಗಿ ಪರಿಣಮಿಸಿದೆ. ಈ ತರಕಾರಿ ಹೊಂದಿರುವ ವೈದ್ಯಕೀಯ ಗುಣಲಕ್ಷಣಗಳಿಂದಾಗಿ ಇದರ ದರ ತುಂಬಾ ದುಬಾರಿ.

Most expensive vegetable: ಈ ತರಕಾರಿ ಬಲುದುಬಾರಿ, ಕೆಜಿಗೆ 85,614 ರೂಪಾಯಿ
Most expensive vegetable: ಈ ತರಕಾರಿ ಬಲುದುಬಾರಿ, ಕೆಜಿಗೆ 85,614 ರೂಪಾಯಿ (kisanofindia.com)

ಈರುಳ್ಳಿ, ಟೊಮೆಟೊ ದರ ಹೆಚ್ಚಾದರೆ ನಾವೆಲ್ಲ ಟೆನ್ಷನ್‌ ಮಾಡಿಕೊಳ್ಳುತ್ತೇವೆ. ತರಕಾರಿ ರೇಟ್‌ ಇಷ್ಟು ದುಬಾರಿಯಾದ್ರೆ ಏನು ಮಾಡೋದು ಎಂದು ಯೋಚನೆ ಮಾಡುತ್ತೇವೆ. ಜಗತ್ತಿನ ದುಬಾರಿ ತರಕಾರಿ ಯಾವುದು ಎಂದರೆ ಹಲವು ತರಕಾರಿಗಳ ಹೆಸರು ಬರಬಹುದು. ಆದರೆ, ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ತರಕಾರಿಯೊಂದು ವೈರಲ್‌ ಆಗಿರುವುದು ಅದರ ರೇಟ್‌ನಿಂದಾಗಿ. ಅದು ಜಗತ್ತಿನ ದುಬಾರಿ ತರಕಾರಿಗಳಲ್ಲಿ ಒಂದು ಎಂಬ ಖ್ಯಾತಿ ಪಡೆಯಿತು. ಆ ತರಕಾರಿ ಹೆಸರು ಹುಪ್‌ ಶೂಟ್ಸ್‌.

ಟ್ರೆಂಡಿಂಗ್​ ಸುದ್ದಿ

ಹುಪ್‌ ಶೂಟ್ಸ್‌ ಎನ್ನುವ ತರಕಾರಿಯು ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೇ ದುಬಾರಿ ತರಕಾರಿಯಾಗಿ ಪರಿಣಮಿಸಿದೆ. ಈ ತರಕಾರಿ ಹೊಂದಿರುವ ವೈದ್ಯಕೀಯ ಗುಣಲಕ್ಷಣಗಳಿಂದಾಗಿ ಇದರ ದರ ತುಂಬಾ ದುಬಾರಿಯಾಗಿದೆ. ಈ ತರಕಾರಿಗೆ ಕೆ.ಜಿ.ಗೆ €1,000. ಭಾರತದ ಲೆಕ್ಕದಲ್ಲಿ ನೋಡುವುದಾದರೆ ಇದರ ದರ 85,614 ರೂಪಾಯಿ. ಹದಿನೈದು ಗ್ರಾಂ ಚಿನ್ನದ ದರದಲ್ಲಿ ಒಂದು ಕೆಜಿ ಈ ತರಕಾರಿ ಖರೀದಿಸಬಹುದು.

ಈ ತರಕಾರಿಯು ತನ್ನ ಗುಣಮಟ್ಟಕ್ಕೆ ತಕ್ಕಂತೆ ದರ ಹೆಚ್ಚಿಸಿಕೊಳ್ಳುತ್ತದೆ. ಈ ತರಕಾರಿ ದುಬಾರಿ ಮಾತ್ರವಲ್ಲ, ಅಷ್ಟು ಸುಲಭವಾಗಿ ಖರೀದಿಸಲು ದೊರಕುವುದಿಲ್ಲ. ಈ ತರಕಾರಿ ನೋಡಲು ಗಾತ್ರದಲ್ಲಿ ಚಿಕ್ಕದಾಗಿದೆ. ಈ ತರಕಾರಿಯನ್ನು ಸಮಗ್ರವಾಗಿ ಬೆಳೆಸಲು ಸಾಧ್ಯವಿಲ್ಲ. ಔಷಧೀಯ ಗುಣ ಹೊಂದಿರುವ ಈ ತರಕಾರಿಯನ್ನು ಕ್ಷಯರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಈ ತರಕಾರಿ ಗಿಡದ ಚಿಗುರುಗಳು ಜೀರ್ಣಕ್ರಿಯೆ ಉತ್ತಮಪಡಿಸುತ್ತದೆ.

ಖಿನ್ನತೆ, ಆತಂಕದಲ್ಲಿ ಬಳವು ರೋಗಿಗಳಿಗೆ ಈ ತರಕಾರಿ ಉತ್ತಮ ಔಷಧ. ಈ ತರಕಾರಿ ನೋವು ನಿವಾರಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ನಿದ್ರಾಹೀನತೆಯನ್ನೂ ಕಡಿಮೆ ಮಾಡುತ್ತದೆ. ಈ ತರಕಾರಿ ಗಿಡದ ಹೂವನ್ನು ಹಾಪ್‌ ಕೋನ್ಸ್‌ ಎಂದು ಕರೆಯುತ್ತಾರೆ. ಇದನ್ನು ಬಿಯರ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರ ಕೊಂಬೆಗಳನ್ನು, ದಂಟುಗಳನ್ನು ಈರುಳ್ಳಿಯಂತೆ ಸಲಾಡ್‌ಗಳಲ್ಲಿ ಬಳಸಲಾಗುತ್ತದೆ. ಈ ತರಕಾರಿಯಿಂದ ಉಪ್ಪಿನಕಾಯಿಯನ್ನೂ ಮಾಡಬಹುದು. ಆದರೆ, ಆ ಉಪ್ಪಿನಕಾಯಿ ದರವೆಷ್ಟು ಎಂದು ಸದ್ಯ ತಿಳಿದಿಲ್ಲ.

ಈ ಗಿಡದ ಚಿಗುರು ದೇಹದ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಹೀಗಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಯೌವನ, ಕಾಂತಿಯುಕ್ತ ಚರ್ಮವನ್ನು ಪಡೆಯಲು ಹಾಪ್‌ ಗಿಡದ ಚಿಗುರುಗಳನ್ನು ಬಳಸುತ್ತಾರೆ. ಈ ತರಕಾರಿ ಗಿಡ ಬೆಳೆಯಲು ವಿಶೇಷ ತಾಪಮಾನ ಬೇಕು. ಭಾರತದಲ್ಲಿ ಈ ತರಕಾರಿ ಬೆಳೆಯುವುದಿಲ್ಲ. ಆದರೆ, ಶಿಮ್ಲಾದಲ್ಲಿ ಇದೇ ಗಿಡವನ್ನು ಹೋಲು ಗುಚ್ಚಿ ಹೆಸರಿನ ತರಕಾರಿ ಇದೆ. ಶಿಮ್ಲಾದ ಗುಚ್ಚಿಯೂ ದುಬಾರಿಯಾಗಿದ್ದು, ಕೆ.ಜಿ.ಗೆ 30-40 ಸಾವಿರ ರೂಪಾಯಿ ಇರುತ್ತದೆ.

ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ, ಈ ದುಬಾರಿ ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನಬಹುದು.

IPL_Entry_Point