ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಮಸೀದಿ ಕೆಡವಿದ ಸ್ಥಳದಲ್ಲೇ ಮಂದಿರ ನಿರ್ಮಾಣ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದ ಪಾಕಿಸ್ತಾನ

Ayodhya Ram Mandir: ಮಸೀದಿ ಕೆಡವಿದ ಸ್ಥಳದಲ್ಲೇ ಮಂದಿರ ನಿರ್ಮಾಣ ಪ್ರಜಾಪ್ರಭುತ್ವಕ್ಕೆ ಕಳಂಕ ಎಂದ ಪಾಕಿಸ್ತಾನ

Pakistan criticizes Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಡೆದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಸರ್ಕಾರ ಖಂಡನಾ ಹೇಳಿಕೆ ಬಿಡುಗಡೆ ಮಾಡಿದೆ. ಮಸೀದಿ ಕೆಡವಿದ ಸ್ಥಳದಲ್ಲೇ ಮಂದಿರ ನಿರ್ಮಿಸಿರುವುದು ಸರಿಯಲ್ಲ. ಅಲ್ಪ ಸಂಖ್ಯಾತರ ಭದ್ರತೆ, ರಕ್ಷಣೆ ಕಡೆಗೆ ಗಮನಹರಿಸಬೇಕು ಎಂದು ಆಗ್ರಹಿಸಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮ ಮಂದಿರದ ಪ್ರತಿಕೃತಿ ಸ್ಮರಣಿಕೆ ನೀಡಿ ಗೌರವಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಮ ಮಂದಿರದ ಪ್ರತಿಕೃತಿ ಸ್ಮರಣಿಕೆ ನೀಡಿ ಗೌರವಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. (HT_PRINT)

ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಮತ್ತು ಬಾಲರಾಮ ಪ್ರಾಣ ಪ್ರತಿಷ್ಠಾ (Ram Lalla Pran Pratishtha) ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪಾಕಿಸ್ತಾನ ಸರ್ಕಾರ (Pakistan Govt), ಅದನ್ನು ಖಂಡಿಸಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಎಕ್ಸ್‌ ಖಾತೆಯಲ್ಲಿ ಈ ಪತ್ರಿಕಾ ಹೇಳಿಕೆಯನ್ನು ಶೇರ್ ಮಾಡಿದ್ದು, “ಭಾರತದ ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ 'ರಾಮ ಮಂದಿರ' ನಿರ್ಮಾಣ ಮತ್ತು ಪವಿತ್ರೀಕರಣ ಕಾರ್ಯವನ್ನು ಪಾಕಿಸ್ತಾನ ಖಂಡಿಸುತ್ತದೆ.” ಎಂದು ಹೇಳಿಕೊಂಡಿದೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂಬಂಧ ಪಾಕಿಸ್ತಾನ ಸರ್ಕಾರದ ಖಂಡನಾ ಹೇಳಿಕೆ
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂಬಂಧ ಪಾಕಿಸ್ತಾನ ಸರ್ಕಾರದ ಖಂಡನಾ ಹೇಳಿಕೆ

ಕೆಡವಲ್ಪಟ್ಟ ಮಸೀದಿ ಸ್ಥಳದಲ್ಲಿ ಮಂದಿರ ನಿರ್ಮಾಣ, ಪ್ರಜಾಪ್ರಭುತ್ವಕ್ಕೆ ಕಳಂಕ ಎಂದ ಪಾಕಿಸ್ತಾನ

"ಕೆಡವಲ್ಪಟ್ಟ ಮಸೀದಿಯ ಸ್ಥಳದಲ್ಲಿ ನಿರ್ಮಿಸಲಾದ ಮಂದಿರವು ಮುಂದಿನ ದಿನಗಳಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಉಳಿಯುತ್ತದೆ. ವಿಶೇಷವಾಗಿ, ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿ ಮಸೀದಿಗಳ ಮೇಲೆ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಪಟ್ಟಿ ಬೆಳೆಯುತ್ತಿದೆ. ಇದು ಅಪವಿತ್ರತೆ ಮತ್ತು ವಿನಾಶ" ಎಂದು ಪಾಕ್ ಸರ್ಕಾರ ಹೇಳಿದೆ.

"ಕಳೆದ 31 ವರ್ಷಗಳ ಬೆಳವಣಿಗೆಗಳು, ಅಯೋಧ್ಯೆಯ ಪವಿತ್ರೀಕರಣ ಸಮಾರಂಭಕ್ಕೆ ಕಾರಣವಾಗಿದ್ದು, ಭಾರತದಲ್ಲಿ ಬಹುಸಂಖ್ಯಾತರ ಪ್ರಾಬಲ್ಯವನ್ನು ಸೂಚಿಸುತ್ತದೆ. ಇದು ಭಾರತೀಯ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಚಿನಲ್ಲಿರುವ ಪ್ರಯತ್ನಗಳಿಗೆ ಧಕ್ಕೆ ಉಂಟುಮಾಡುವ ಪ್ರಮುಖ ಅಂಶವಾಗಿದೆ" ಎಂದು ಅದು ಹೇಳಿದೆ.

ಮುಸ್ಲಿಮರು ಮತ್ತು ಅವರ ಪವಿತ್ರ ಸ್ಥಳಗಳು ಸೇರಿ "ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆ" ಯನ್ನು ಖಚಿತಪಡಿಸಬೇಕು ಎಂದು ಪಾಕಿಸ್ತಾನವು ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಪಾಕಿಸ್ತಾನದಲ್ಲೇ ಹಿಂದೂ, ಕ್ರಿಶ್ಚಿಯನ್, ಅಹ್ಮದಿ ಮುಂತಾದವರಿಗೆ ಭದ್ರತೆ, ಸುರಕ್ಷತೆ ಇಲ್ಲ ಎಂದ ವರದಿ

ಈ ನಡುವೆ, ಪಾಕಿಸ್ತಾನದಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಅಹ್ಮದಿಗಳಂತಹ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಬಹಿಷ್ಕಾರ, ಸೀಮಿತ ಅವಕಾಶಗಳು ಮತ್ತು ಹಿಂಸಾಚಾರ ಸೇರಿದಂತೆ ನಿರಂತರ ತಾರತಮ್ಯವನ್ನು ಎದುರಿಸುತ್ತಿರುವುದರ ಕಡೆಗೆ ಹ್ಯೂಮನ್ ರೈಟ್ಸ್ ವಾಚ್ ಗಮನಸೆಳೆದಿದೆ.

ಆದಾಗ್ಯೂ, ಭಾರತದಲ್ಲಿ ಹೆಚ್ಚುತ್ತಿರುವ ಹಿಂದುತ್ವ ಸಿದ್ಧಾಂತದ ಅಲೆಯು ಧಾರ್ಮಿಕ ಸಾಮರಸ್ಯ ಮತ್ತು ಪ್ರಾದೇಶಿಕ ಶಾಂತಿಗೆ "ಗಂಭೀರ ಬೆದರಿಕೆಯನ್ನು" ಒಡ್ಡುತ್ತಿದೆ ಎಂದು ಪಾಕಿಸ್ತಾನ ಕಳವಳ ವ್ಯಕ್ತಪಡಿಸಿದೆ.

ಅಯೋಧ್ಯೆಗೆ ಸಂಬಂಧಿಸಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದರ ಉದ್ಘಾಟಿಸಿ, ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಭಗವಾನ್ ಶ್ರೀರಾಮನು 500 ವರ್ಷಗಳ ಬಳಿಕ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಐತಿಹಾಸಿಕ ಸಂದರ್ಭ ಇದು.

ರಾಮ ಮಂದಿರ ಉದ್ಠಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ ಮೇಲೆ ಹೂಮಳೆಗೆರೆದರು.

IPL_Entry_Point