Quarrel over Papadam: ಕೇರಳದಲ್ಲಿ 1 ಹಪ್ಪಳಕ್ಕೆ ಭಾರಿ ಜಗಳ; ವೈರಲ್ ವಿಡಿಯೋ ಇಲ್ಲಿದೆ ನೋಡಿ…
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Quarrel Over Papadam: ಕೇರಳದಲ್ಲಿ 1 ಹಪ್ಪಳಕ್ಕೆ ಭಾರಿ ಜಗಳ; ವೈರಲ್ ವಿಡಿಯೋ ಇಲ್ಲಿದೆ ನೋಡಿ…

Quarrel over Papadam: ಕೇರಳದಲ್ಲಿ 1 ಹಪ್ಪಳಕ್ಕೆ ಭಾರಿ ಜಗಳ; ವೈರಲ್ ವಿಡಿಯೋ ಇಲ್ಲಿದೆ ನೋಡಿ…

Ruckus over Papadam: ಮದುವೆ ಹಾಲ್‌ನಲ್ಲಿ ಎರಡನೇ ಸಲ ಹಪ್ಪಳ ಕೇಳಿದ್ದಕ್ಕಾಗಿ ಶುರುವಾದ ವಾಕ್ಸಮರ, ಭಾರಿ ಜಗಳಕ್ಕೇ ಕಾರಣವಾಯಿತು. ಇದರಿಂದಾಗಿ ಮದುವೆ ಹಾಲ್‌ಗೆ ಆಗಿರುವ ನಷ್ಟ ಬರೋಬ್ಬರಿ 1.5 ಲಕ್ಷ ರೂಪಾಯಿ. ಇಲ್ಲಿದೆ ಈ ಭಾರಿ ಜಗಳದ ವಿವರ.

<p>ಕೇರಳದ ಆಲಪ್ಪುಳದ ಮುಟ್ಟಂ ಹರಿಪ್ಪಾಡ್‌ನ ಚೂಂಡ್‌ಪಲಗ ಜಂಕ್ಷನ್‌ನಲ್ಲಿರುವ ಮದುವೆ ಹಾಲ್‌ನಲ್ಲಿ ಒಂದೇ ಒಂದು ಹಪ್ಪಳಕ್ಕಾಗಿ ಭಾರಿ ಜಗಳವೇ ನಡೆಯಿತು. ಮೂವರು ಗಾಯಗೊಂಡು, 1.5 ಲಕ್ಷ ರೂಪಾಯಿ ನಷ್ಟ ಉಂಟಾದ ವಿರಳ ಘಟನೆ ವರದಿಯಾಗಿದೆ.&nbsp;</p>
ಕೇರಳದ ಆಲಪ್ಪುಳದ ಮುಟ್ಟಂ ಹರಿಪ್ಪಾಡ್‌ನ ಚೂಂಡ್‌ಪಲಗ ಜಂಕ್ಷನ್‌ನಲ್ಲಿರುವ ಮದುವೆ ಹಾಲ್‌ನಲ್ಲಿ ಒಂದೇ ಒಂದು ಹಪ್ಪಳಕ್ಕಾಗಿ ಭಾರಿ ಜಗಳವೇ ನಡೆಯಿತು. ಮೂವರು ಗಾಯಗೊಂಡು, 1.5 ಲಕ್ಷ ರೂಪಾಯಿ ನಷ್ಟ ಉಂಟಾದ ವಿರಳ ಘಟನೆ ವರದಿಯಾಗಿದೆ.&nbsp;

ಆಲಪ್ಪುಳ: ಒಂದೇ ಒಂದು ಹಪ್ಪಳ ಕೇಳಿದ್ದು. ಅದೂ ಎರಡನೇ ಸಲ. ಅಷ್ಟೇ ಶುರುವಾಗಿ ಬಿಡ್ತು ವಾಕ್ಸಮರ. ಅದು ಜಗಳವಾಗಿ ಕೈ ಕೈ ಮಿಲಾಯಿಸುವ ತನಕ ಹೋಗಿ ಬಿಡ್ತು. ಪರಿಣಾಮ ಮದುವೆ ಹಾಲ್‌ಗೆ ಆಗಿರುವ ನಷ್ಟ ಬರೋಬ್ಬರಿ 1.5 ಲಕ್ಷ ರೂಪಾಯಿ!

ಕೇರಳದ ಆಲಪ್ಪುಳದ ಮುಟ್ಟಂ ಹರಿಪ್ಪಾಡ್‌ನ ಚೂಂಡ್‌ಪಲಗ ಜಂಕ್ಷನ್‌ನಲ್ಲಿರುವ ಮದುವೆ ಹಾಲ್‌ನಲ್ಲಿ ಭಾನುವಾರ ನಡೆದ ಘಟನೆ ಇದು. ಮದುವೆ ಊಟದ ನಡುವೆ ವ್ಯಕ್ತಿಯೊಬ್ಬ ಎರಡನೇ ಸಲ ಹಪ್ಪಳ ಕೇಳಿದ. ಹಪ್ಪಳ ಬಡಿಸುತ್ತಿದ್ದಾತ, ಇಲ್ಲ ಕೊಡೊಕಾಗಲ್ಲ. ಒಂದೇ ಸಲ ಹಪ್ಪಳ ಬಡಿಸೋದು ಎಂದ. ನಂಗೆ ಬೇಕೇ ಬೇಕು ಎಂದು ಊಟಕ್ಕೆ ಕುಳಿತವ ಕೇಳಿದ. ಹಪ್ಪಳ ಬಡಿಸುತ್ತಿದ್ದಾತನ ಸಿಟ್ಟು ನೆತ್ತಿಗೇರಿತು. ಊಟಕ್ಕೆ ಕುಳಿತವನಿಗೂ ಸಿಟ್ಟು ಏರಿತು. ವಾಕ್ಸಮರ ಶುರುವಾಯಿತು.

ಊಟಕ್ಕೆ ಕುಳಿತವ ಎದ್ದ. ಜತೆಗೆ ಕುಳಿತವರೂ ಎದ್ದರು. ತಳ್ಳಾಟ, ನೂಕಾಟ ಶುರುವಾಯಿತು. ಬಡಿಸುತ್ತಿದ್ದ ಸೌಟ್‌ ಹಿಡಿದು ಎರಡು ಕೊಟ್ಟ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿದೆ.

ಹಪ್ಪಳಕ್ಕಾಗಿ ನಡೆದ ಈ ಭಾರಿ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 15 ಜನರ ವಿರುದ್ಧ ಕರೀನಂಕುಳಂಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಗಾಯಗೊಂಡವರನ್ನು ಮುರಳೀಧರನ್‌ (65), ಜೊಹಾನ್‌ (21) ಮತ್ತು ಹರಿ (21) ಎಂದು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಜನ ಈ ಫೈಟಿಂಗ್‌ನಲ್ಲಿ ಗಾಯಗೊಂಡಿದ್ದಾರೆ ಎಂದು ಆಡಿಟೋರಿಯಂ ಸಿಬ್ಬಂದಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಮದುವೆ ಹಾಲ್‌ಗೆ ನಷ್ಟ ಹೇಗಾಯಿತು ಎಂದರೆ- ಗಲಾಟೆ ನಡುವೆ ಮದುವೆ ಹಾಲ್‌ನ ಮಾರ್ಬಲ್‌ ಹಲಗೆ 12 ಟೇಬಲ್‌, 25 ಪ್ಲಾಸ್ಟಿಕ್‌ ಚೇರ್‌ಗಳನ್ನು ಮುರಿದು ಹಾಕಲಾಗಿದೆ. ಜಗಳ ಬಿಡಿಸಲು ಹೋದ ಆಡಿಟೋರಿಯಂ ಮಾಲೀಕ ಕೂಡ ಗಾಯಗೊಂಡಿದ್ದಾರೆ.

ಒಟ್ಟಿನಲ್ಲಿ ಹಪ್ಪಳಕ್ಕಾಗಿ ನಡೆದ ಈ ಗಲಾಟೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಪ್ಪಳ ಎಂದರೆ ಅವರಿಗೆ ಪಂಚಪ್ರಾಣ. ಒಂದೇ ಒಂದು ಹಪ್ಪಳ ತಿಂದು ಊಟ ಮುಗಿಸುವವರಲ್ಲ ಅವರು. ಅದು ಸೆಂಟಿಮೆಂಟ್‌ನಿಂದಾಗಿ ಆಗಿರುವ ಗಲಾಟೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

ಗಲಾಟೆ ವಿಡಿಯೋ ಇಲ್ಲಿದೆ ನೋಡಿ

ಇಲ್ಲಿದೆ ಇಂದಿನ ಕೆಲವು ಪ್ರಮುಖ ಸುದ್ದಿಗಳು

1) ಭಾರತದ ಜಿಡಿಪಿ ಪ್ರಗತಿ ಕುರಿತು ಗುಡ್‌ ನ್ಯೂಸ್‌ ಬಂದಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್‌ -ಜೂನ್‌ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ ಕೇವಲ ಶೇ 0.4ರಷ್ಟು ಪ್ರಗತಿ ದಾಖಲಿಸಿದೆ. ವಿವರ ಓದಿಗೆ - India Q1 GDP grows at 13.5 percent: ಭಾರತದ ಜಿಡಿಪಿ ಶೇ. 13.5ರಷ್ಟು ಪ್ರಗತಿ, ಚೀನಾದ್ದು ಕೇವಲ ಶೇ 0.4 ಏರಿಕೆ

2) ಕಿರುತೆರೆಯಲ್ಲಿ ಪ್ರಸಾರವಾದ 'ನನ್ನಮ್ಮ ಸೂಪರ್ ಸ್ಟಾರ್' ಮತ್ತು 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ದೊಡ್ಡ ಮಟ್ಟದ ಹವಾ ಸೃಷ್ಟಿಸಿರುವ ವಂಶಿಕಾ, ಈಗ ಹಿರಿತೆರೆಯ ಕಡೆ ಮುಖ ಮಾಡಿದ್ದಾಳೆ. ವಿವರ ಓದಿಗೆ - Vanshika Master Anand: ‘ಗೌರಿ ಗಣೇಶ’ ಹಬ್ಬದಂದು ಚಿತ್ರರಂಗ ಪ್ರವೇಶಿಸಿದ ಮಾಸ್ಟರ್‌ ಆನಂದ್‌ ಮಗಳು ವಂಶಿಕಾ..

3) ಐಡಿಯಾ ಪಬ್ಲಿಕ್‌ ಚಾರ್ಟರ್‌ ಸ್ಕೂಲ್‌ನ ನಿನ್ನೆ ಲೇ ಸ್ಟ್ರೀಟ್‌ ಮತ್ತು 45ನೇ ಸ್ಟ್ರೀಟ್‌ ನಡುವಿನ ಒಂದು ಬ್ಲಾಕ್‌ನಲ್ಲಿ ವಿದ್ಯಾರ್ಥಿಯು ಶೂಟ್‌ ಮಾಡಿದ್ದಾನೆ ಎಂದು ಡಿಸಿ ಮೆಟ್ರೊಪಾಲಿಟನ್‌ ಪೊಲೀಸ್‌ ಮುಖ್ಯಸ್ಥರಾದ ರಾಬರ್ಟ್‌ ಕಾಂಟಿ ಹೇಳಿದ್ದಾರೆ. ವಿವರ ಓದಿಗೆ - ಈ ಮಕ್ಕಳಿಗೆ ಏನಾಗಿದೆ? ಇಬ್ಬರು ಸಹಪಾಠಿಗಳನ್ನು ಗನ್‌ನಿಂದ ಶೂಟ್‌ ಮಾಡಿದ 15ರ ಬಾಲಕ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.