ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi Controversial Remarks: ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ ಇದು ಮೊದಲನೇಯದಲ್ಲ; ಇತಿಹಾಸದ ಪುಟ ಸೇರಿದ ಕೆಲವು ಇಲ್ಲಿವೆ...

Rahul Gandhi Controversial remarks: ರಾಹುಲ್‌ ಗಾಂಧಿ ವಿವಾದಾತ್ಮಕ ಹೇಳಿಕೆ ಇದು ಮೊದಲನೇಯದಲ್ಲ; ಇತಿಹಾಸದ ಪುಟ ಸೇರಿದ ಕೆಲವು ಇಲ್ಲಿವೆ...

Rahul Gandhi Controversial remarks: ರಾಹುಲ್ ಗಾಂಧಿ ಅವರನ್ನು 2019 ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್‌ ಕೋರ್ಟ್‌ ದೋಷಿ ಎಂದು ಎರಡು ದಿನ ಹಿಂದೆ ಘೋಷಿಸಿತು. ಕರ್ನಾಟಕದ ಕೋಲಾರದಲ್ಲಿ 2019ರ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ 'ಮೋದಿ' ಎಂಬ ಉಪನಾಮವನ್ನು ಬಳಸಿ ಲೇವಡಿ ಮಾಡಿದ್ದರು. ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (PTI)

ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ, ಈ ವಾರ ಅವರು ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಈ ತೀರ್ಪು ಅವರನ್ನು ಲೋಕಸಭೆಯಿಂದ ಅನರ್ಹಗೊಳ್ಳುವಂತೆ ಮಾಡಿದೆ. ವಿಚಲಿತರಾದ ಕಾಂಗ್ರೆಸ್ ನಾಯಕರು "ಕಾನೂನು ಮತ್ತು ರಾಜಕೀಯವಾಗಿ" ಬೆಳವಣಿಗೆಗಳ ವಿರುದ್ಧ ಹೋರಾಡುವುದಾಗಿ ಘೋಷಿಸಿದ್ದಾರೆ. ಆದಾಗ್ಯೂ ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಗಳಿಂದ ವಿವಾದಕ್ಕೆ ಈಡಾಗುತ್ತಿರುವುದು ಇದೇ ಮೊದಲಲ್ಲ.

ಚೌಕಿದಾರ್‌ ಚೋರ್‌ ಹೈ

ಬಿಹಾರದಲ್ಲಿ 2019 ರಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಜನರನ್ನು 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಮಾಡಿದ ನಂತರ ರಾಹುಲ್‌ ಗಾಂಧಿ ವಿರುದ್ಧ ದೂರು ದಾಖಲಾಗಿತ್ತು. ರಫೇಲ್ ಡೀಲ್‌ನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ರಾಹುಲ್‌ ಗಾಂಧಿ, ಸಾರ್ವಜನಿಕ ಸಭೆಗಳಲ್ಲಿ ಸಾಕಷ್ಟು ಸಲ ಈ ಘೋಷಣೆ ಮಾಡಿದ್ದಾರೆ. 2014 ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಕಾವಲು ಕಾಯುವ ಕಾವಲುಗಾರ ಎಂದು ಬಿಂಬಿಸಲು ಬಳಕೆಗೆ ಬಂದದ್ದು ಈ ಚೌಕಿದಾರ್ ಪದ.

ವಿನಾಯಕ ದಾಮೋದರ್‌ ಸಾವರ್ಕರ್‌ ಬ್ರಿಟಿಷರಿಗೆ ನೆರವಾದರು

ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ. ನಂತರ ಅವರು ಅಂದಿನ ಆಡಳಿತಗಾರರಿಗೆ ಕ್ಷಮಾದಾನ ಅರ್ಜಿಯನ್ನೂ ಬರೆದಿದ್ದರು ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ಗಾಂಧಿ ಹೇಳಿದ್ದರು. ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು, ರಾಹುಲ್‌ ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ ನಂತರ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ಹೇಳಿಕೆಗಳು ಆಕ್ರೋಶಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಶಿವಸೇನೆ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದವು.

ಮಹಾತ್ಮಗಾಂಧಿಯನ್ನು ಹತ್ಯೆ ಮಾಡಿದ್ದು ಆರ್‌ಎಸ್‌ಎಸ್‌

ಸೂರತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ಸಜ್ಜಾಗಿದ್ದರೂ, 2014 ರಲ್ಲಿ ಗಾಂಧಿ ಅವರು ಮಾಡಿದ್ದ ಹೇಳಿಕೆಗಳಿಗೆ ಸಂಬಂಧಿಸಿ ಮತ್ತೊಂದು ಮಾನನಷ್ಟ ಮೊಕದ್ದಮೆಯು ಕೂಡ ಎದುರಾಗಿದೆ. ಥಾಣೆಯ ಭಿವಂಡಿ ಪ್ರದೇಶದಲ್ಲಿ ಅವರ ಭಾಷಣವನ್ನು ಆಲಿಸಿದ ನಂತರ 2014ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಳೀಯ ಪದಾಧಿಕಾರಿ ರಾಜೇಶ್ ಕುಂಟೆ ಅವರು ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡಿದ್ದರು. ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದರು.

ರೇಪ್‌ ಇನ್‌ ಇಂಡಿಯಾ

ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾದ ಬಗ್ಗೆ ಮಾತನಾಡಿದರೂ ಅದು ಈಗ 'ರೇಪ್ ಇನ್ ಇಂಡಿಯಾ' ಆಗಿ ಮಾರ್ಪಟ್ಟಿದೆ. ಅಂತಹ ಘಟನೆಗಳು ದೇಶಾದ್ಯಂತ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ ಎಂದು ಪ್ರತಿಪಾದಿಸಿದ ರಾಹುಲ್‌ ಗಾಂಧಿ ಟೀಕೆಗೆ ಒಳಗಾಗಿದ್ದರು. ಅಲ್ಲದೆ, ಪ್ರತಿಭಟನೆಗಳನ್ನೂ ಎದುರಿಸಿದರು.

ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ಆದರೆ ಈ ಹೇಳಿಕೆಗೆ ತಾನು ಎಂದಿಗೂ ಕ್ಷಮೆ ಯಾಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಬದಲಿಗೆ, ಯುಪಿಎ ಸರ್ಕಾರದ ಅವಧಿಯಲ್ಲಿ ದೆಹಲಿಯನ್ನು ಅತ್ಯಾಚಾರದ ರಾಜಧಾನಿ ಎಂದು ಪ್ರಧಾನಿ ಕರೆದಿದ್ದಾರೆ. ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.

(ಏಜೆನ್ಸಿ ಮಾಹಿತಿಯೊಂದಿಗೆ)

IPL_Entry_Point