ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್ಚರಿ ವಿಶ್ವಕಪ್​ನಲ್ಲಿ ಭಾರತ ಚಿನ್ನದ ಬೇಟೆ; 5 ಗೋಲ್ಡ್, 1 ಬೆಳ್ಳಿ, 1 ಕಂಚು ಗೆದ್ದು ಇತಿಹಾಸ ಸೃಷ್ಟಿ

ಆರ್ಚರಿ ವಿಶ್ವಕಪ್​ನಲ್ಲಿ ಭಾರತ ಚಿನ್ನದ ಬೇಟೆ; 5 ಗೋಲ್ಡ್, 1 ಬೆಳ್ಳಿ, 1 ಕಂಚು ಗೆದ್ದು ಇತಿಹಾಸ ಸೃಷ್ಟಿ

  • Archery World Cup 2024: ಆರ್ಚರಿ ವಿಶ್ವಕಪ್​​ನಲ್ಲಿ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತ 5ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದಿದೆ. ಭಾನುವಾರ ನಡೆದ ರಿಕರ್ವ್ ಪುರುಷರ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದೆ.

ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್-2024ರ ಸ್ಟೇಜ್ 1ರಲ್ಲಿ ಭಾರತ ಇತಿಹಾಸ ಸೃಷ್ಟಿಸಿದೆ. ಐದು ಚಿನ್ನ, 1 ಬೆಳ್ಳಿ, 1 ಕಂಚು ಗೆದ್ದು ಮೈಲಿಗಲ್ಲು ಸಾಧಿಸಿದೆ.
icon

(1 / 9)

ಪುರುಷರ ರಿಕರ್ವ್ ತಂಡ ಸ್ಪರ್ಧೆಯಲ್ಲಿ ಭಾರತವು ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿ ಚಿನ್ನ ಗೆದ್ದಿದೆ. ಭಾರತದ ತರುಣ್ ದೀಪ್ ರೈ, ಧೀರಜ್ ಬೊಮ್ಮದೇವರ ಮತ್ತು ಪ್ರವೀಣ್ ಯಾದವ್ ಅವರು ಫೈನಲ್​​ನಲ್ಲಿ ದಕ್ಷಿಣ ಕೊರಿಯಾವನ್ನು 5-1 ಅಂತರದಿಂದ ಸೋಲಿಸಿದರು. ಈ ವಿಶ್ವಕಪ್​ನಲ್ಲಿ ಭಾರತಕ್ಕೆ ಲಭಿಸಿದ ಐದನೇ ಚಿನ್ನದ ಪದಕ ಇದಾಗಿದೆ.
icon

(2 / 9)

ರಿಕರ್ವ್​ ಸ್ಪರ್ಧೆಯಲ್ಲಿ ಭಾರತ ಪುರುಷರ ಚಿನ್ನ ಗೆದ್ದ ಬೆನ್ನಲ್ಲೇ ಮಿಶ್ರ ತಂಡ ರಿಕರ್ವ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ, ಮೆಕ್ಸಿಕೊ ತಂಡವನ್ನು 6-0 ಅಂತರದಿಂದ ಸೋಲಿಸಿತು. ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಪದಕ ಗೆದ್ದರು.
icon

(3 / 9)

ಶನಿವಾರ ನಡೆದ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಜ್ಯೋತಿ ವೆನ್ನಮ್ ಚಿನ್ನದ ಪದಕ ಗೆದ್ದರು. ಫೈನಲ್​ನಲ್ಲಿ ಮೆಕ್ಸಿಕೊದ ಆಂಡ್ರಿಯಾ ಬೆಸೆರಾಕಾ ಅವರನ್ನು ಜ್ಯೋತಿ ಸೋಲಿಸಿದರು.
icon

(4 / 9)

ಪುರುಷರ ಕಾಂಪೌಂಡ್ ಸ್ಪರ್ಧೆಯ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಶ್ ಬೆಳ್ಳಿ ಗೆದ್ದರು. ಫೈನಲ್​​ನಲ್ಲಿ ಅವರು ಮಾಜಿ ವಿಶ್ವ ಚಾಂಪಿಯನ್ ನಿಕೊ ವೈನರ್ ವಿರುದ್ಧ 147–150 ಅಂತರದಿಂದ ಸೋತರು.
icon

(5 / 9)

ಕಾಂಪೌಂಡ್ ಬಿಲ್ಲುಗಾರಿಕೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಜ್ಯೋತಿ ವೆನ್ನಮ್ ಮತ್ತು ಅಭಿಷೇಕ್ ವರ್ಮಾ ಈ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಫೈನಲ್​ನಲ್ಲಿ ತಮ್ಮ ಎದುರಾಳಿಗಳನ್ನು 158-157 ಅಂತರದಿಂದ ಸೋಲಿಸಿದರು.
icon

(6 / 9)

ಪುರುಷರ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಅಭಿಷೇಕ್, ಪ್ರಥಮೇಶ್ ಮತ್ತು ಪ್ರಿಯಾಂಶ್ ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಫೈನಲ್​ನಲ್ಲಿ ಅವರು ತಮ್ಮ ನೆದರ್ಲೆಂಡ್ಸ್​ ಎದುರಾಳಿಗಳನ್ನು 238-231 ರಿಂದ ಸೋಲಿಸಿದರು.
icon

(7 / 9)

ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದೆ. ಜ್ಯೋತಿ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಭಾರತವನ್ನು ಪ್ರತಿನಿಧಿಸಿದ್ದರು. ಫೈನಲ್​​ನಲ್ಲಿ ಭಾರತ 236-226 ಅಂಕಗಳಿಂದ ಇಟಲಿಯನ್ನು ಸೋಲಿಸಿತು.
icon

(8 / 9)

ಕಾಂಪೌಂಡ್​ ಬಿಲ್ಲುಗಾರಿಕೆಯಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ನೀಡಿದರೂ ಭಾರತೀಯರಿಗೆ ನಿರಾಸೆಯಾಗಿದೆ. ಏಕೆಂದರೆ ಈ ಸ್ಪರ್ಧೆ ಒಲಿಂಪಿಕ್​​ನಲ್ಲಿ ಇರುವುದಿಲ್ಲ. ಆರ್ಚರಿ ವಿಶ್ವಕಪ್​ನಲ್ಲಿ ಕಾಂಪೌಂಡ್ ವಿಭಾಗದಲ್ಲಿ ಭಾರತ 5 ಚಿನ್ನದ ಪದಕಗಳನ್ನು ಗೆದ್ದಿದೆ.
icon

(9 / 9)

IPL_Entry_Point

ಇತರ ಗ್ಯಾಲರಿಗಳು