ಮೇಷ ರಾಶಿ ಜುಲೈ ತಿಂಗಳ ಭವಿಷ್ಯ; ಹಣಕಾಸಿನ ವಿಚಾರದಲ್ಲಿ ತೊಂದರೆ ಇಲ್ಲ,ಮಾನಸಿಕ ಒತ್ತಡ ಹೆಚ್ಚು, ಭೂಲಾಭ ಬೇರೇನು
ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗಾಗಿ ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಅವರು ಕೊಟ್ಟಿರುವ ಮೇಷ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯವನ್ನು ಆಧರಿಸಿದ ಮಾಹಿತಿ ಇದು.
(1 / 8)
ಮೇಷ ರಾಶಿಯವರಿಗೆ ಜುಲೈ ತಿಂಗಳಲ್ಲಿ ಹಣಕಾಸಿನ ವಿಚಾರದಲ್ಲಿ ತೊಂದರೆ ಬಾರದಿದ್ದರೂ ಮಾನಸಿಕ ಒತ್ತಡವಿರುತ್ತದೆ. ಅದು ನಾನಾ ಕಾರಣಗಳಿಗೆ ಇರಬಹುದು ಎಂದು
(2 / 8)
ಮೇಷ ರಾಶಿಯವರಾಗಿದ್ದು ನಿರುದ್ಯೋಗಿಗಳಾಗಿದ್ದರೆ, ಉದ್ಯೋಗ ಹುಡುಕುತ್ತಿರುವ ಅರ್ಹರಿಗೆ ವಿದೇಶದಲ್ಲಿ ಉತ್ತಮ ಅವಕಾಶ ಸಿಗಲಿದೆ.
(3 / 8)
ಮೇಷ ರಾಶಿಯವರು ದಿನನಿತ್ಯದ ಬಳಕೆಗೆ ಬೇಕಾಗುವ ಪದಾರ್ಥಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡರೆ ವಿಶೇಷ ಲಾಭಗಳಿಸುವಿರಿ. ಆತ್ಮೀಯರ ಸಹಾಯ ಸಹಕಾರ ದೊರೆಯುತ್ತದೆ.
(4 / 8)
ಮೇಷ ರಾಶಿಯವರು ಕೆಲವರಿಗೆ ಜುಲೈನಲ್ಲಿ ಭೂಲಾಭದ ಸೂಚನೆ ಇದೆ. ಅರ್ಥಾತ್ ಭೂಮಿ ಖರೀದಿಸುವ ಲಕ್ಷಣಗಳಿವೆ. ಆದರೆ, ಭೂಮಿ ಖರೀದಿಸುವಾಗ ಎಚ್ಚರಿಕೆ ಇರಲಿ.
(5 / 8)
ಮೇಷ ರಾಶಿಯವರಿಗೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ವಿನಾಕಾರಣ ಆತಂಕ ಉಂಟಾಗುತ್ತದೆ. ವಿದ್ಯಾರ್ಥಿಗಳಾದವರು ಅಂತಹ ಆತಂಕ ಬಿಟ್ಟು ವ್ಯಾಸಂಗದಲ್ಲಿ ನಿರತರಾದರೆ ವಿಶೇಷ ಲಾಭವಿದೆ. ಉನ್ನತಿಯೂ ಇದೆ.
(6 / 8)
ಹೇಳಿ ಕೇಳಿ ಮಳೆಗಾಲ ಬೇರೆ. ಎಲ್ಲ ರಾಶಿಯವರೂ ಮಳೆಗಾಲದಲ್ಲಿ ಅರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಬೇಕಾದ್ದು ಅವಶ್ಯ. ಆದರೆ ಮೇಷ ರಾಶಿಯವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ.
(7 / 8)
ಗ್ರಹಗತಿಗಳಿಗೆ ಅನುಗುಣವಾಗಿ ಜುಲೈ ತಿಂಗಳ ಆರಂಭದ ದಿನಗಳಲ್ಲಿ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಬಹುದು. ಭಿನ್ನಮತ ಉಂಟಾಗಿ ವಾಕ್ಸಮರವೂ ಆಗಬಹುದು. ತಾಳ್ಮೆ ಮತ್ತು ವಿವೇಚನೆಯಿಂದ ವರ್ತಿಸಬೇಕಾದ್ದು ಅವಶ್ಯ.
(8 / 8)
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು