Kawasaki ZX-4R: ಕವಾಸಕಿ ಪ್ರಿಯರೇ ಗಮನಿಸಿ, ಹೊಸ ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗೆ, ದರ 8.5 ಲಕ್ಷ ರೂಪಾಯಿ
- ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗಿಳಿದಿದೆ. ಇದರ ಎಕ್ಸ್‌ಶೋರೂಂ ದರ 8.49 ಲಕ್ಷ ರೂಪಾಯಿ ಇದೆ. ಭಾರತದ ರಸ್ತೆಗೆ ಸಿಬಿಯು ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಾಣಗೊಂಡ ಬೈಕ್ ಆಗಮಿಸಲಿದೆ.
- ಕವಾಸಕಿ ಝಡ್‌ಎಕ್ಸ್-4ಆರ್ ಬೈಕ್ ರಸ್ತೆಗಿಳಿದಿದೆ. ಇದರ ಎಕ್ಸ್‌ಶೋರೂಂ ದರ 8.49 ಲಕ್ಷ ರೂಪಾಯಿ ಇದೆ. ಭಾರತದ ರಸ್ತೆಗೆ ಸಿಬಿಯು ಅಂದರೆ ಸಂಪೂರ್ಣವಾಗಿ ವಿದೇಶದಲ್ಲಿ ನಿರ್ಮಾಣಗೊಂಡ ಬೈಕ್ ಆಗಮಿಸಲಿದೆ.
(1 / 8)
ಕವಾಸಕಿ ಕಂಪನಿಯು ಝಡ್‌ಎಕ್ಸ್ 4ಆರ್ ಬೈಕನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದೆ.
(2 / 8)
ಇದರ ಎಕ್ಸ್‌ಶೋರೂಂ ದರ 8.49 ಲಕ್ಷ ರೂಪಾಯಿ. Z900 ಬೈಕ್‌ಗೆ ಹೋಲಿಸಿದರೆ ಇದರ ದರ ಸುಮಾರು 71,000 ರೂಪಾಯಿ ಕಡಿಮೆಯಾಗಿದೆ. ಝಡ್‌ಎಕ್ಸ್ 4ಆರ್ ಬೈಕ್ ನಿಂಜಾ 400 ಮತ್ತು ನಿಂಜಾ 650 ನಡುವಿನ ಶ್ರೇಣಿಯ ಬೈಕಾಗಿದೆ.
(3 / 8)
ಝಡ್‌ಎಕ್ಸ್-4ಆರ್ ಬೈಕ್ ಅನ್ನು ಭಾರತದಲ್ಲಿ ಜೋಡಿಸದೆ ನೇರವಾಗಿ ವಿದೇಶದಲ್ಲಿಯೇ ನಿರ್ಮಿಸಿ ತರಲಾಗುತ್ತದೆ. ಸಿಬಿಯು ಯೂನಿಟ್ ಆಗಿರುವ ಕಾರಣ ದರ ಕೊಂಚ ಹೆಚ್ಚಾಗಿದೆ. ಸಿಬಿಯು ಹಾದಿಯಲ್ಲಿ ಭಾರತಕ್ಕೆ ತರುವ ಕಾರಣ ಅತ್ಯಧಿಕ ತೆರಿಗೆ ಪಾವತಿಸಬೇಕಿರುತ್ತದೆ.
(4 / 8)
ಮೊದಲ ನೋಟಕ್ಕೆ ಇದು ಕವಾಸಕಿ ಬೈಕೇ ಎಂದು ಗೊಂದಲ ಆಗಬಹುದು. ಇದರ ನಾಲ್ಕು ಸಿಲಿಂಡರ್ ಎಂಜಿನ್ ನೋಡಲು ಕೊಂಚ ವಿಶೇಷವಾಗಿ ಕಾಣಿಸುತ್ತದೆ. ಭಾರತದಲ್ಲಿ ಮೆಟಾಲಿಕ್ ಸ್ಪಾರ್ಕ್ ಬ್ಲಾಕ್ ಬಣ್ಣದಲ್ಲಿ ಮಾತ್ರ ಈ ಬೈಕನ್ನು ಕಂಪನಿ ಮಾರಾಟ ಮಾಡುತ್ತಿದೆ.
(5 / 8)
ಈ ಬೈಕ್ 4.3 ಇಂಚಿನ ಟಿಎಫ್‌ಟಿ ಸ್ಕ್ರೀನ್ ಹೊಂದಿದೆ. ಇದು ಬ್ಲೂಟೂಥ್ ಕನೆಕ್ಟಿವಿಟಿ, ಡೆಡಿಕೇಟೆಡ್ ಆಗಿರುವ ಟ್ರ್ಯಾಕ್ ಮೋಡ್ ಇತ್ಯಾದಿಗಳನ್ನು ಹೊಂದಿದೆ. ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ನೋಟಿಫಿಕೇಷನ್ ಫೀಚರನ್ನು ಹೊಂದಿದೆ. ಸ್ಪೋರ್ಟ್, ರೋಡ್, ರೈನ್ ಮತ್ತು ರೈಡರ್ ಎಂಬ ನಾಲ್ಕು ಡ್ರೈವಿಂಗ್ ಆಯ್ಕೆಗಳು ಇದರಲ್ಲಿವೆ.
(6 / 8)
ನೂತನ ಬೈಕ್‌ನಲ್ಲಿ 399 ಸಿಸಿಯ ಲಿಕ್ವಿಡ್ ಕೂಲ್ಡ್ ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಇದೆ. ಇದು 75 ಅಶ್ವಶಕ್ತಿ ಹೊಂದಿದ್ದು, ಸುಮಾರು 14,500 ಆರ್‌ಪಿಎಂ ಬಿಡುಗಡೆ ಮಾಡಲಿದೆ. ಇದರ ಪೀಕ್ ಟಾರ್ಕ್ 13 ಸಾವಿರ ಆವರ್ತನ ಇರಲಿದೆ. ಇದರಲ್ಲಿ 6 ಸ್ಪೀಡ್‌ನ ಗಿಯರ್‌ಬಾಕ್ಸ್ ಇದೆ. ಇದು ಸ್ಲಿಪ್ಲರ್ ಕ್ಲಚ್ ಮತ್ತು ಕ್ವಿಕ್ ಶಿಫ್ಟರ್ ಹೊಂದಿದೆ.
ಇತರ ಗ್ಯಾಲರಿಗಳು