ನೆಲಮಂಗಲ ಅಪಘಾತ; ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೇನರ್‌, ಕಾರಿನಲ್ಲಿದ್ದ 6 ಜನ ದುರ್ಮರಣ, ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿ, ಫೋಟೋಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೆಲಮಂಗಲ ಅಪಘಾತ; ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೇನರ್‌, ಕಾರಿನಲ್ಲಿದ್ದ 6 ಜನ ದುರ್ಮರಣ, ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿ, ಫೋಟೋಸ್‌

ನೆಲಮಂಗಲ ಅಪಘಾತ; ವೋಲ್ವೋ ಕಾರಿನ ಮೇಲೆ ಬಿದ್ದ ಕಂಟೇನರ್‌, ಕಾರಿನಲ್ಲಿದ್ದ 6 ಜನ ದುರ್ಮರಣ, ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿ, ಫೋಟೋಸ್‌

Nelamangala Accident: ನೆಲಮಂಗಲ ಸಮೀಪ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಕಂಟೇನರ್ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ನಂದಿನಿ ಟ್ರಕ್‌, ಬೈಕ್‌ಗೆ ಡಿಕ್ಕಿ ಹೊಡೆದು ಬಿದ್ದಾಗ ಅದರ ಅಡಿಗೆ ವೋಲ್ವೋ ಕಾರು ಸಿಲುಕಿದೆ. ಈ ಭೀಕರ ದುರಂತದಲ್ಲಿ ಒಂದೇ ಕುಟುಂಬದ 6 ಜನ ದುರ್ಮರಣಕ್ಕೀಡದರು. ಘಟನಾ ಸ್ಥಳದ ಕೆಲವು ಫೋಟೋಸ್.

ನೆಲಮಂಗಲ ಅಪಘಾತ; ನೆಲಮಂಗಲ ಸಮೀಪ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ  ವೋಲ್ವೋ ಕಾರಿನ ಮೇಲೆ ಕಂಟೇನರ್‌ ಬಿದ್ದ ಕಾರಣ ಕಾರಿನಲ್ಲಿದ್ದ 6 ಜನ ದುರ್ಮರಣಕ್ಕೀಡಾದ ಕಳವಳಕಾರಿ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿಯಾಗಿದೆ
icon

(1 / 9)

ನೆಲಮಂಗಲ ಅಪಘಾತ; ನೆಲಮಂಗಲ ಸಮೀಪ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ  ವೋಲ್ವೋ ಕಾರಿನ ಮೇಲೆ ಕಂಟೇನರ್‌ ಬಿದ್ದ ಕಾರಣ ಕಾರಿನಲ್ಲಿದ್ದ 6 ಜನ ದುರ್ಮರಣಕ್ಕೀಡಾದ ಕಳವಳಕಾರಿ ಘಟನೆ ವರದಿಯಾಗಿದೆ. ಈ ದುರಂತದಲ್ಲಿ ಕೆಎಂಎಫ್‌ ನಂದಿನಿ ಟ್ರಕ್‌ ಕೂಡ ಪಲ್ಟಿಯಾಗಿದೆ(X)

ನೆಲಮಂಗಲ ಅಪಘಾತ; ಡಾಬಸ್‌ಪೇಟೆ ಕೈಗಾರಿಕಾ ಪ್ರದೇಶದಿಂದ ಅಲ್ಯುಮಿನಿಯಂ ಸಾಮಗ್ರಿ ತುಂಬಿಕೊಂಡು ಬೆಂಗಳೂರು ಕಡೆಗೆ ಹೊರಟಿದ್ದ ಕಂಟೇನರ್‌ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಎದುರು ಬಂದ ಕಾರನ್ನು ತಪ್ಪಿಸಲು ಹೋದಾಗ ಕಂಟೇನರ್ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿತು ಎಂದು ಕಂಟೇನರ್ ಚಾಲಕ ಹೇಳಿಕೆ ನೀಡಿದ್ಧಾನೆ.
icon

(2 / 9)

ನೆಲಮಂಗಲ ಅಪಘಾತ; ನಿಯಂತ್ರಣ ತಪ್ಪಿದ ಕಂಟೇನರ್‌ ಡಿವೈಡರ್‌ ಮೇಲೇರಿ ಪಕ್ಕದ ರಸ್ತೆಗೆ ಹಾರಿದೆ, ಆಗ ಅಲ್ಲಿ ಹೋಗುತ್ತಿದ್ದ ನಂದಿನಿ ಟ್ರಕ್‌, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ನಂದಿನಿ ಟ್ರಕ್‌ ರಸ್ತೆಯಿಂದಾಚೆಗೆ ಉರುಳಿದೆ. ಅದರ ಪಕ್ಕದಲ್ಲೇ ಸಾಗುತ್ತಿದ್ದ ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದಿದೆ.
icon

(3 / 9)

ನೆಲಮಂಗಲ ಅಪಘಾತ; ಅಪಘಾತ ಸ್ಥಳದಲ್ಲಿ ಕಾರಿನ ಮೇಲೆ ಇದ್ದ ಕಂಟೇನರ್‌ ಅನ್ನು ತೆರವುಗೊಳಿಸಲು ಮೂರು ಕ್ರೇನ್‌ಗಳನ್ನು ಬಳಸಬೇಕಾಯಿತು.
icon

(4 / 9)

ನೆಲಮಂಗಲ ಅಪಘಾತ; ಕಂಟೇನರ್ ಅನ್ನು ಕಾರಿನ ಮೇಲಿಂದ ತೆರವುಗೊಳಿಸಿದ ಬಳಿಕ, ಕಾರಿನ ಒಳಗೆ ಇದ್ದವರನ್ನು ಹೊರ ತೆಗೆದಯಲು ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟರು.
icon

(5 / 9)

ಸಂಪೂರ್ಣ ನಜ್ಜುಗುಜ್ಜಾಗಿದ್ದ ವೋಲ್ವೋ ಕಾರಿನೊಳಗಿದ್ದವರನ್ನು ಹೊರ ತೆಗೆಯುವ ಕಾರ್ಯಾಚರಣೆಯ ದೃಶ್ಯ.
icon

(6 / 9)

ನೆಲಮಂಗಲ ಅಪಘಾತ; ಕಂಟೇನರ್ ಬಿದ್ದ ಕಾರಣ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.
icon

(7 / 9)

ನೆಲಮಂಗಲ ಅಪಘಾತ; ಕಂಟೇನರ್ ಬಿದ್ದ ಕಾರಣ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.

ವೋಲ್ವೋ ಕಾರಿನ ಒಳಗಿದ್ದವರನ್ನು ಐಎಎಸ್‌ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿ ಮುಖ್ಯಸ್ಥ ಚಂದ್ರಮ್‌ ಯಾಗಪ್ಪಗೌಳ್‌( 48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯಾ (6) ಎಂದು ಗುರುತಿಸಲಾಗಿದೆ. 
icon

(8 / 9)

ನೆಲಮಂಗಲ ಅಪಘಾತ; ಕಂಟೇನರ್ ಡಿವೈಡರ್ ಹಾರಿ ಡಿಕ್ಕಿ ಹೊಡೆದ ರಭಸಕ್ಕೆ ಟ್ರಕ್‌ನ ಹಿಂಬದಿ ಚಕ್ರಗಳು ಪ್ರತ್ಯೆಕವಾಗಿವೆ. ಇನ್ನೊಂದೆಡೆ ಅದು ಡಿಕ್ಕಿ ಹೊಡೆದ ನಂದಿನಿ ಟ್ರಕ್ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಕಂಟೇನರ್ ಅಡಿಯಲ್ಲಿ ವೋಲ್ವೋ ಕಾರು ಸಿಲುಕಿದೆ.
icon

(9 / 9)

ಇತರ ಗ್ಯಾಲರಿಗಳು