Sports Year Ender 2024: ಕೇಂದ್ರದಿಂದ ಸಿಗದ ನ್ಯಾಯ, ಒಲಿಂಪಿಕ್ಸ್ನಲ್ಲೂ ನಿರಾಸೆ; ರಾಜಕೀಯ ಪ್ರವೇಶಿಸಿ ಗೆದ್ದ ವಿನೇಶ್ ಫೋಗಟ್
- Vinesh Phogat: 2024ರ ಕ್ಯಾಲೆಂಡರ್ ವರ್ಷದಲ್ಲಿ ಸಾಕಷ್ಟು ಏಳು ಬೀಳು ಕಂಡ ಕುಸ್ತಿಪಟು ವಿನೇಶ್ ಪೋಗಟ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಗೆದ್ದು ಬೀಗಿದರು. ಕುಸ್ತಿಪಟುಗಳ ಮೇಲೆ ಆಗಿದ್ದ ಲೈಗಿಂಕ ದೌರ್ಜನ್ಯ ಖಂಡಿಸಿ ನಡೆಸಿದ್ದ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಪದಕ ಗೆಲ್ಲಲು ವಿಫಲರಾಗಿದ್ದರು.
- Vinesh Phogat: 2024ರ ಕ್ಯಾಲೆಂಡರ್ ವರ್ಷದಲ್ಲಿ ಸಾಕಷ್ಟು ಏಳು ಬೀಳು ಕಂಡ ಕುಸ್ತಿಪಟು ವಿನೇಶ್ ಪೋಗಟ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಗೆದ್ದು ಬೀಗಿದರು. ಕುಸ್ತಿಪಟುಗಳ ಮೇಲೆ ಆಗಿದ್ದ ಲೈಗಿಂಕ ದೌರ್ಜನ್ಯ ಖಂಡಿಸಿ ನಡೆಸಿದ್ದ ಪ್ರತಿಭಟನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಪದಕ ಗೆಲ್ಲಲು ವಿಫಲರಾಗಿದ್ದರು.
(1 / 10)
ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ನಲ್ಲಿ ಅಧಿಕ ತೂಕ ಹೊಂದಿದ್ದ ಕಾರಣ ವಿನೇಶ್ ಫೋಗಟ್ ಅನರ್ಹತೆಗೊಂಡಿದ್ದರು.(HT_PRINT)
(2 / 10)
ಅನರ್ಹತೆಯ ಕಾರಣ ಚಿನ್ನ/ಬೆಳ್ಳಿ ಯಾವುದೇ ಪದಕ ಇಲ್ಲದೆ ವಿನೇಶ್ ಫೋಗಟ್, ಭಾರತಕ್ಕೆ ಮರಳಿದರು. ಒಲಿಂಪಿಕ್ಸ್ ಆಡಳಿತ ಮಂಡಳಿಯ ನಡೆ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು.(HT_PRINT)
(3 / 10)
ಫೈನಲ್ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚು ತೂಕ ಇದ್ದ ಕಾರಣ ಅನರ್ಹ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹತೆ ರದ್ದುಗೊಳಿಸಿ ತನಗೆ ಬೆಳ್ಳಿ ಪದಕ ನೀಡಬೇಕೆಂದು ಒತ್ತಾಯಿಸಿದ್ದರು.(HT_PRINT)
(4 / 10)
ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ವಿನೇಶ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ ತನ್ನ ಪರ ನ್ಯಾಯ ಸಿಗಲಿಲ್ಲ. ಇದರ ಬೆನ್ನಲ್ಲೇ ಭಾರತಕ್ಕೆ ಮರಳಿದ ಬೆನ್ನಲ್ಲೇ ವಿನೇಶ್ ಫೋಗಟ್, ರಾಜಕೀಯಕ್ಕೆ ಸೇರಿದರು.(HT_PRINT)
(5 / 10)
ಕಾಂಗ್ರೆಸ್ ಸೇರಲು ಪ್ರತ್ಯೇಕವಾದ ಕಾರಣವೂ ಇದೆ. ಒಲಿಂಪಿಕ್ಸ್ನಲ್ಲಿ ತನಗೆ ಪದಕ ತಪ್ಪಿಸಲು ಪ್ರಧಾನಿ ಮೋದಿ ಅವರ ಕೈವಾಡವೂ ಇದೆ ಎಂದು ಸುದ್ದಿ ಹರಿದಾಡಿತ್ತು. ಇದು ಚರ್ಚೆಗೂ ಗ್ರಾಸವಾಗಿತ್ತು.(PTI)
(6 / 10)
ಇದಕ್ಕಿಂತ ಮುಖ್ಯವಾಗಿ ಮತ್ತೊಂದು ಕಾರಣ ಅಡಗಿದೆ. ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರು 7 ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ತಿಂಗಳುಗಟ್ಟಲೇ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು.(PTI)
(7 / 10)
ಆದರೆ ಪ್ರಧಾನಿ ಮೋದಿ ಅವರು ಸ್ಥಳಕ್ಕೆ ಆಗಮಿಸಿ ಕ್ರೀಡಾಪಟುಗಳ ಮನವಿ ಸ್ವೀಕರಿಸಿರಲಿಲ್ಲ. ಅಲ್ಲದೆ, ನೂತನ ಸಂಸತ್ ಉದ್ಘಾಟನೆ ವೇಳೆ ಮುತ್ತಿಗೆ ಹಾಕಲು ಹೊರಟಿದ್ದ ಕುಸ್ತಿಪಟುಗಳ ಪೊಲೀಸರ ಲಾಠಿ ಬೀಸಿದ್ದರು. ರಸ್ತೆಗಳಲ್ಲಿ ಎಳೆದಾಡಿದ್ದರು.
(8 / 10)
ಇದು ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ದೇಶಕ್ಕಾಗಿ ಪದಕ ಗೆದ್ದ ಕುಸ್ತಿಗಳೊಂದಿಗೆ ಹೀಗಾ ವರ್ತಿಸುವುದು ಎಂದು ಕ್ರೀಡಾ ಪ್ರೇಮಿಗಳು ಕಿಡಿಕಾರಿದ್ದರು. ಇಷ್ಟಾದರೂ ಮೋದಿ ಕುಸ್ತಿಪಟುಗಳ ಮನವಿ ಆಲಿಸಿರಲಿಲ್ಲ.
(9 / 10)
ಇದೆಲ್ಲದರಿಂದ ಬೇಸತ್ತ ವಿನೇಶ್ ಫೋಗಟ್ ಅವರು ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಸೇರಿದರು. ಬಳಿಕ ಚುನಾವಣೆಯಲ್ಲೂ ಕಣಕ್ಕಿಳಿದರು.
ಇತರ ಗ್ಯಾಲರಿಗಳು