Volkswagen Tiguan: ರಸ್ತೆಗಿಳಿದ ಫೋಕ್ಸ್‌ವ್ಯಾಗನ್‌ನ ಪರಿಷ್ಕೃತ ಟಿಗುವಾನ್, ಹೊಸ ಎಸ್‌ಯುವಿಯಲ್ಲಿದೆ ಹಲವು ವಿಶೇಷ
- Volkswagen launches upgraded Tiguan SUV: ಫೋಕ್ಸ್‌ವ್ಯಾಗನ್ ಟಿಗುವಾನ್ ಕಾರಿನ ಪರಿಷ್ಕೃತ ಆವೃತ್ತಿ ರಸ್ತೆಗಿಳಿದಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ದರ 34.69 ಲಕ್ಷ ರೂಪಾಯಿ ಇದೆ. ಈ ಕಾರಿನ ವಿಶೇಷತೆಗಳ ಕುರಿತು ಚಿತ್ರ ವಿಮರ್ಶೆ ಇಲ್ಲಿದೆ.
- Volkswagen launches upgraded Tiguan SUV: ಫೋಕ್ಸ್‌ವ್ಯಾಗನ್ ಟಿಗುವಾನ್ ಕಾರಿನ ಪರಿಷ್ಕೃತ ಆವೃತ್ತಿ ರಸ್ತೆಗಿಳಿದಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ದರ 34.69 ಲಕ್ಷ ರೂಪಾಯಿ ಇದೆ. ಈ ಕಾರಿನ ವಿಶೇಷತೆಗಳ ಕುರಿತು ಚಿತ್ರ ವಿಮರ್ಶೆ ಇಲ್ಲಿದೆ.
(1 / 8)
ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ಇಂಡಿಯಾವು ಇತ್ತೀಚೆಗೆ ಟಿಗುವಾನ್ ಎಸ್‌ಯುವಿಯ ಪರಿಷ್ಕೃತ ಆವೃತ್ತಿಯನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ದರ 34.69 ಲಕ್ಷ ರೂಪಾಯಿ ಇದೆ. (Volkswagen)
(2 / 8)
ಪರಿಷ್ಕೃತ ಟಿಗುವಾನ್ ಎಸ್‌ಯುವಿಯಲ್ಲಿ ಈಗ ಪಾರ್ಕ್ ಅಸಿಸ್ಟ್ ಎಂಬ ಲೆವೆಲ್ 1 ಎಡಿಎಸ್ ಸಿಸ್ಟಮ್ ಇದೆ. ಈ ಫೀಚರ್ ನಿಮ್ಮ ಕಾರಿಗೆ ಪಾರ್ಕಿಂಗ್ ಪರಿಚಾಲಕನಂತೆ ಕಾರ್ಯನಿರ್ವಹಿಸಲಿದೆ. ಯಾವುದೇ ಚಿಂತೆಯಿಲ್ಲದೆ ಕಾರನ್ನು ಪಾರ್ಕಿಂಗ್ ಮಾಡಲು ಈ ಫೀಚರ್ ನೆರವಾಗುತ್ತದೆ. (Volkswagen)
(3 / 8)
ಸಂಭಾವ್ಯ ಖರೀದಿದಾರರಿಗೆ ಟಿಗುವಾನ್ ಎಸ್‌ಯುವಿಯನ್ನು ಐದು ಬಣ್ಣಗಳಲ್ಲಿ ತಮಗೆ ಇಷ್ಟವಾದ ಬಣ್ಣದಲ್ಲಿ ಆಯ್ಕೆ ಮಾಡಬಹುದು. ಅಂದರೆ, ಟಿಗುವಾನ್ ಕಾರು ಇದೀಗ ನೈಟ್‌ಶೇಡ್ ಬ್ಲೂ, ಒರಿಕ್ಸ್ ವೈಟ್ ಪರ್ಲ್ ಎಫೆಕ್ಟ್, ಡೀಪ್ ಬ್ಲ್ಯಾಕ್, ಡಾಲ್ಫಿನ್ ಗ್ರೇ ಮತ್ತು ರೆಫ್ಲಿಕ್ಸ್ ಸಿಲ್ವರ್ ಬಣ್ಣಗಳಲ್ಲಿ ದೊರಕುತ್ತದೆ. (Volkswagen)
(4 / 8)
ಈ ಎಸ್‌ಯುವಿಯಲ್ಲಿ ಈಗ ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್ ಫೀಚರ್ ಇದೆ. ಇದರಿಂದ ಕಾರಿನೊಳಗೆ ಇರುವ ಪ್ರಯಾಣಿಕರು ವೈರ್‌ನ ನೆರವಿಲ್ಲದೆ ತಮ್ಮ ಮೊಬೈಲನ್ನು ಚಾರ್ಜ್ ಮಾಡಬಹುದಾಗಿದೆ. (Volkswagen)
(5 / 8)
ಈ ಎಸ್‌ಯುವಿಯಲ್ಲಿ ಆರು ಏರ್‌ಬ್ಯಾಗ್ ಸೇರಿದಂತೆ ಹಲವು ಸುರಕ್ಷತೆಯ ಫೀಚರ್‌ಗಳಿವೆ. ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಸಿಎಸ್), ಆಂಟಿ ಸ್ಲಿಪ್ಟ್ ರೆಗ್ಯುಲೇಷನ್ (ಎಎಸ್‌ಆರ್), ಎಲೆಕ್ಟ್ರಾನಿಕ್ ಡಿಫ್ರೆನೆನ್ಷಿಯಲ್ ಲಾಕ್ (ಇಡಿಎಲ್), ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಂಜಿನ್ ಡ್ರಾಗ್ ಟಾರ್ಕ್ ಕಂಟ್ರೋಲ್, ಆಕ್ಟಿವ್ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ , ಹಿಂಭಾಗದಲ್ಲಿ ಮೂರು ಹೆಡ್‌ರೆಸ್ಟ್, ಮೂರು ಪಾಯಿಂಟ್‌ನ ಸೀಟ್ ಬೆಲ್ಟ್‌ಗಳು, ಐಎಸ್‌ಒ ಫಿಕ್ಸ್ ಚೈಲ್ಡ್ ಸೀಟ್ ಆಖಂರ್ಸ್, ಡ್ರೈವರ್ ಅಲಾರ್ಟ್ ಸಿಸ್ಟಮ್ಸ್ ಇತ್ಯಾದಿ ಸೇಫ್ಟಿ ಫೀಚರ್‌ಗಳು ಇವೆ. (Volkswagen)
(6 / 8)
ಈ ಎಸ್‌ಯುವಿಯ ಎಲಿಗೆನ್ಸ್ ಆವೃತ್ತಿಯಲ್ಲಿ ಸಾಕಷ್ಟು ಸುಧಾರಿತ ತಂತ್ರಜ್ಞಾನದ ಫೀಚರ್‌ಗಳು ಇವೆ. ಇಂಟಲಿಜೆಂಟ್ ಮತ್ತು ಅಡಾಪ್ಟಿವ್ ಐಕ್ಯೂ ಫೀಚರ್‌ಗಳಿವೆ. (Volkwagen)
(7 / 8)
ಇದರಲ್ಲಿ ಹಲವು ಪರಿಷ್ಕೃತ ಟೆಕ್ ಮತ್ತು ಸೇಫ್ಟಿ ಫೀಚರ್‌ಗಳಿವೆ. ಇದರೊಂದಿಗೆ ಕಾರಿನ ಇಂಟೀರಿಯರ್ ಕೂಡ ಅಪ್‌ಡೇಟ್ ಆಗಿದೆ. (Volkwagen)
ಇತರ ಗ್ಯಾಲರಿಗಳು