Citroen Basalt: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ ಸಿಟ್ರೊಯಿನ್ ಬಸಾಲ್ಟ್ ಕೂಪೆ ಎಸ್‌ಯುವಿ; ವೈಶಿಷ್ಟ್ಯಗಳು ಹೀಗಿವೆ
- Citroen Basalt: ಸಿಟ್ರನ್ ಬಸಾಲ್ಟ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಇದು 1.2-ಲೀಟರ್ ಟರ್ಬೋಚಾರ್ಜ್ಡ್ ಇಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಕೂಪೆ ಎಸ್‌ಯುವಿಯ ಮತ್ತಷ್ಟು ವೈಶಿಷ್ಟ್ಯಗಳ ವಿವರ ಇಲ್ಲಿದೆ.
- Citroen Basalt: ಸಿಟ್ರನ್ ಬಸಾಲ್ಟ್ ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆ. ಇದು 1.2-ಲೀಟರ್ ಟರ್ಬೋಚಾರ್ಜ್ಡ್ ಇಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಕೂಪೆ ಎಸ್‌ಯುವಿಯ ಮತ್ತಷ್ಟು ವೈಶಿಷ್ಟ್ಯಗಳ ವಿವರ ಇಲ್ಲಿದೆ.
(1 / 5)
ಸಿಟ್ರೊಯಿ ಇಂಡಿಯಾ ಕಂಪನಿಯು ತನ್ನ ಸಿ-ಕ್ಯೂಬ್ ಪ್ರೊಗ್ರಾಂ ಅಡಿಯಲ್ಲಿ ಮೂರನೇ ವಾಹನವನ್ನು ಅನಾವರಣಗೊಳಿಸಿದೆ. ಬಸಾಲ್ಟ್ ಎಂದು ಕರೆಯಲ್ಪಡುವ ಈ ಕಾರು 2024 ರ ದ್ವಿತೀಯಾರ್ಧದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಸಿ 3 ಮತ್ತು ಸಿ 3 ಏರ್ ಕ್ರಾಸ್ ಸಹ ಸಿ-ಕ್ಯೂಬ್ ಪ್ರೊಗ್ರಾಂ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಜಾಗತಿಕ ಮಾರುಕಟ್ಟೆಗಳಿಗೆ ಕೈಗೆಟುಕುವ, ಪರಿಣಾಮಕಾರಿ ವಾಹನಗಳನ್ನು ತಯಾರಿಸುವುದು ಸೀ ಕ್ಯೂಬ್ ಪ್ರೊಗ್ರಾಂನ ಉದ್ದೇಶವಾಗಿದೆ.
(2 / 5)
ಸಿಟ್ರೊಯಿನ್ ಬಸಾಲ್ಟ್ ಅನ್ನು ಮೊದಲು ಭಾರತದಲ್ಲಿ ಆನಂತರ ದಕ್ಷಿಣ ಅಮೆರಿಕದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಸಾಲ್ಟ್ ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಎಸ್ ಯುವಿ ಕೂಪೆಯಾಗಲಿದೆ. ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿರುವ ಮತ್ತೊಂದು ಎಸ್‌ಯುವಿ ಟಾಟಾ ಕರ್ವ್ ಆಗಿದೆ.
(3 / 5)
ಬಸಾಲ್ಟ್ ಪವರ್ ಟ್ರೇನ್‌ನ ವಿವರಗಳನ್ನು ಸಿಟ್ರನ್ ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಇದು ಸಿ 3 ಏರ್ ಕ್ರಾಸ್‌ನಲ್ಲಿ ಬಳಸಿದ ಅದೇ ಇಂಜಿನ್ ಅನ್ನು ಬಳಸುವ ಸಾಧ್ಯತೆಯಿದೆ. ಇದು 1.2-ಲೀಟರ್, 3-ಸಿಲಿಂಡರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಆಗಿದ್ದು, ಇದು 5,500 ಆರ್‌ಪಿಎಂನಲ್ಲಿ 108 ಬಿಹೆಚ್‌ಪಿ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.
(4 / 5)
6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ 190 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇದು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ನೊಂದಿಗೆ 205 ಎನ್ಎಂಗೆ ಹೆಚ್ಚಾಗುತ್ತದೆ.
ಇತರ ಗ್ಯಾಲರಿಗಳು