ಬಾಕ್ಸಿಂಗ್​​ ಡೇ ಟೆಸ್ಟ್​ಗೂ ಮುನ್ನ ಹೊಸ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಕಿಂಗ್ ನಯಾ ಸ್ಟೈಲ್​ಗೆ ಫ್ಯಾನ್ಸ್ ಫಿದಾ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಕ್ಸಿಂಗ್​​ ಡೇ ಟೆಸ್ಟ್​ಗೂ ಮುನ್ನ ಹೊಸ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಕಿಂಗ್ ನಯಾ ಸ್ಟೈಲ್​ಗೆ ಫ್ಯಾನ್ಸ್ ಫಿದಾ, Video

ಬಾಕ್ಸಿಂಗ್​​ ಡೇ ಟೆಸ್ಟ್​ಗೂ ಮುನ್ನ ಹೊಸ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಕಿಂಗ್ ನಯಾ ಸ್ಟೈಲ್​ಗೆ ಫ್ಯಾನ್ಸ್ ಫಿದಾ, VIDEO

Virat Kohli: ಮೆಲ್ಬೋರ್ನ್​​ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್​​​ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ಲುಕ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೇರ್​ಸ್ಟೈಲಿಸ್ಟ್​ ಜೋರ್ಡಾನ್ ತಬಕ್ಮನ್ ಅವರಿಂದ ಕೊಹ್ಲಿ ಹೊಸ ಹೇರ್ ಕಟ್ ಮಾಡಿಸಿಕೊಂಡಿದ್ದಾರೆ. ವಿರಾಟ್ ಸ್ಟೈಲಿಶ್ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಬಾಕ್ಸಿಂಗ್​​ ಡೇ ಟೆಸ್ಟ್​ಗೂ ಮುನ್ನ ಹೊಸ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಕಿಂಗ್ ನಯಾ ಸ್ಟೈಲ್​ಗೆ ಫ್ಯಾನ್ಸ್ ಫಿದಾ
ಬಾಕ್ಸಿಂಗ್​​ ಡೇ ಟೆಸ್ಟ್​ಗೂ ಮುನ್ನ ಹೊಸ ಲುಕ್​ನಲ್ಲಿ ವಿರಾಟ್ ಕೊಹ್ಲಿ; ಕಿಂಗ್ ನಯಾ ಸ್ಟೈಲ್​ಗೆ ಫ್ಯಾನ್ಸ್ ಫಿದಾ

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್​ ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ ಸೂಪರ್​ ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮೆಲ್ಬೋರ್ನ್ ಟೆಸ್ಟ್​ಗೂ ಮುನ್ನ ಹೊಸ ಹೇರ್​ಸ್ಟೈಲ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಬಿಜಿಟಿಯ 2024-25ರ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಆದರೆ, 2, 3ನೇ ಟೆಸ್ಟ್​​ನಲ್ಲಿ ರನ್ ಗಳಿಸಲು ಹೆಣಗಾಡಿದರು. ಭಾರತ ತಂಡ ಮೆಲ್ಬೋರ್ನ್ ತಲುಪಿದ್ದು, ಬಾಕ್ಸಿಂಗ್ ಡೇ ಟೆಸ್ಟ್​​​ಗೆ ಸಿದ್ಧತೆ  ಪ್ರಾರಂಭಿಸಿದೆ. ಆದರೆ, 4ನೇ ಪಂದ್ಯಕ್ಕೂ ಮುನ್ನ ಕೊಹ್ಲಿಯ ಹೊಸ ಲುಕ್ ಎಲ್ಲರ ಗಮನ ಸೆಳೆದಿದೆ.

ಹೌದು, ಮೆಲ್ಬೋರ್ನ್ ಟೆಸ್ಟ್​​ಗೂ ಮುನ್ನ ವಿರಾಟ್ ಹೊಸ ಲುಕ್ ಪಡೆದುಕೊಂಡಿದ್ದಾರೆ. ಹೇರ್​ಸ್ಟೈಲಿಸ್ಟ್​ ಜೋರ್ಡಾನ್ ತಬಕ್ಮನ್ ಇತ್ತೀಚೆಗೆ ಹಂಚಿಕೊಂಡ ವಿಡಿಯೋದಲ್ಲಿ, ಕೊಹ್ಲಿ ಅದ್ಭುತವಾದ ಹೇರ್ ಮೇಕ್ಓವರ್ ಪಡೆಯುತ್ತಿರುವುದನ್ನು ಕಾಣಬಹುದು. ವಿರಾಟ್ ಆಗಾಗ್ಗೆ ಮುಂಬೈನಲ್ಲಿ ತಮ್ಮ ನೆಚ್ಚಿನ ಹೇರ್​ ಸ್ಟೈಲಿಸ್ಟ್​ ಆಲಿಮ್ ಹಕೀಮ್ ಅವರಿಂದ ಹೇರ್ ಕಟ್ ಮಾಡಿಸಿಕೊಳ್ಳುವುದನ್ನು ನಾವು ಕಂಡಿದ್ದೇವೆ. ಆದರೆ, ಈ ಬಾರಿ ಅವರು ಮೆಲ್ಬೋರ್ನ್​​ನ ಬಾರ್ಬರ್ ಕ್ಲಬ್ ಪೋರ್ಟ್​ಗೆ ಪ್ರವೇಶಿಸಿ ಸ್ಟೈಲಿಸ್ಟ್ ಜೋರ್ಡಾನ್ ತಬಕ್ಮನ್ ಅವರಿಂದ ಹೇರ್ ಕಟ್ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಹೊಸ ಕೇಶವಿನ್ಯಾಸಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೊಹ್ಲಿ ಹೊಸ ಲುಕ್​ಗೆ ಫ್ಯಾನ್ಸ್ ಫಿದಾ

"ಇದು ರಾಜನ  ಹೊಸ ಕಿರೀಟ, ವಿರಾಟ್ ಕೊಹ್ಲಿಯನ್ನು ಭೇಟಿಯಾಗುವುದು ಯಾವಾಗಲೂ ಉತ್ತಮ ಅನುಭವ ನೀಡುತ್ತದೆ" ಎಂದು ಜೋರ್ಡಾನ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೊಹ್ಲಿಯ ಹೊಸ ಲುಕ್ ಅನ್ನು ಶ್ಲಾಘಿಸಿದ್ದು, ನಾವು ಸಹ ಇದೇ ರೀತಿ ಹೇರ್​ಕಟ್ ಮಾಡಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಮೆಲ್ಬೋರ್ನ್​​ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು, 4ನೇ ಟೆಸ್ಟ್ ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯ 5 ಇನ್ನಿಂಗ್ಸ್​​ಗಳಲ್ಲಿ ಶತಕ ಸಹಿತ ಕೊಹ್ಲಿ 126 ರನ್ ಗಳಿಸಿದ್ದಾರೆ.

ಕೊಹ್ಲಿ ಪಬ್​ಗೆ ನೋಟಿಸ್

ಎಂಜಿ ರಸ್ತೆ ಸಮೀಪ ಕಸ್ತೂರ್ ​​ಬಾ ರಸ್ತೆಯಲ್ಲಿರುವ ರತ್ನಮ್ಸ್ ಕಾಂಪ್ಲೆಕ್ಸ್​​ನ 6ನೇ ಮಹಡಿಯಲ್ಲಿರುವ ಬ್ಯಾಟಿಂಗ್ ಸೂಪರ್​ ಸ್ಟಾರ್​​ ವಿರಾಟ್ ಕೊಹ್ಲಿ ಸಹಮಾಲೀಕತ್ವದ ಒನ್ 8 ಕಮ್ಯೂನ್​ ಬಾರ್ ಆ್ಯಂಡ್​ ರೆಸ್ಟೋರೆಂಟ್​ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್ ಜಾರಿಗೊಳಿಸಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸದ ಕಾರಣ ಒನ್ 8 ಕಮ್ಯೂನ್​ ಪಬ್​ಗೆ​​ (One 8 Commune Pub) ಕಾನೂನು ಉಲ್ಲಂಘನೆ ಮಾಡಿದೆ ಎಂದು ಬಿಬಿಎಂಪಿ ನೋಟಿಸ್ ನೀಡಿದೆ. ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆದಿಲ್ಲ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿದೆ. ಇದೀಗ 7 ದಿನಗಳ ಒಳಗೆ ಉತ್ತರ ಕೊಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Whats_app_banner