ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ನಿಮಗಾಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ನಿಮಗಾಗಿ

ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ನಿಮಗಾಗಿ

ರಜಾದಿನಗಳು ಹತ್ತಿರದಲ್ಲಿವೆ. ಪ್ರವಾಸ ಹೋಗುವ ಮೂಡ್‌ನಲ್ಲಿದ್ದರೆ ಪ್ರವಾಸ ಕೈಗೊಳ್ಳಿ. ಬಜೆಟ್ ಪ್ರವಾಸ ಬಯಸುತ್ತೀರಾದರೆ ರಜಾದಿನ ಬರುವ ಮೊದಲೇ ಅಥವಾ ರಜಾ ದಿನಗಳು ಮುಗಿದ ಕೂಡಲೇ ಪ್ರವಾಸ ಮಾಡಿ. ಪ್ರವಾಸ ಹೋಗಬೇಕು ಆದರೆ ಜೇಬಿಗೂ ಹೊರೆಯಾಗಬಾರದು ಅನ್ನೋ ಆಲೋಚನೆ ನಿಮ್ಮದಾದರೆ ಈ 15 ಟಿಪ್ಸ್ ಒಮ್ಮೆ ಓದಿಕೊಳ್ಳಿ. ಉಪಯೋಗಕ್ಕೆ ಬಂದೀತು. 

ಪ್ರವಾಸ ಹೋಗುವುದು ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಪ್ರವಾಸದ ವೆಚ್ಚವೇ ತಲೆನೋವು. ಹಾಗಾದರೆ ಬಜೆಟ್ ಪ್ರವಾಸ ಕೈಗೊಳ್ಳುವುದು ಹೇಗೆ? ಹಲವರು ಹಲವು ರೀತಿಯ ಐಡಿಯಾಗಳೊಂದಿಗೆ ಮುಂದುವರಿಯುತ್ತಿರಬಹುದು. ಏನಪ್ಪಾ ಮಾಡೋದು ಅಂತ ಅನೇಕರು ತಲೆಕೆರೆದುಕೊಳ್ಳುತ್ತಿರಬಹುದು. ಯಾವುದಕ್ಕೂ ಒಂದು 15 ಟಿಪ್ಸ್ ಇಲ್ಲಿದೆ ಓದಿ. ಇನ್ನೊಂದಿಷ್ಟು ಆಲೋಚನೆಗಳು ಐಡಿಯಾಗಳು ಹೊಳೆಯಬಹುದು. ಒಟ್ಟಿನಲ್ಲಿ ಬಜೆಟ್ ಪ್ರವಾಸ ಮಾಡಿ ನೋಡಿ.
icon

(1 / 16)

ಪ್ರವಾಸ ಹೋಗುವುದು ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಪ್ರವಾಸದ ವೆಚ್ಚವೇ ತಲೆನೋವು. ಹಾಗಾದರೆ ಬಜೆಟ್ ಪ್ರವಾಸ ಕೈಗೊಳ್ಳುವುದು ಹೇಗೆ? ಹಲವರು ಹಲವು ರೀತಿಯ ಐಡಿಯಾಗಳೊಂದಿಗೆ ಮುಂದುವರಿಯುತ್ತಿರಬಹುದು. ಏನಪ್ಪಾ ಮಾಡೋದು ಅಂತ ಅನೇಕರು ತಲೆಕೆರೆದುಕೊಳ್ಳುತ್ತಿರಬಹುದು. ಯಾವುದಕ್ಕೂ ಒಂದು 15 ಟಿಪ್ಸ್ ಇಲ್ಲಿದೆ ಓದಿ. ಇನ್ನೊಂದಿಷ್ಟು ಆಲೋಚನೆಗಳು ಐಡಿಯಾಗಳು ಹೊಳೆಯಬಹುದು. ಒಟ್ಟಿನಲ್ಲಿ ಬಜೆಟ್ ಪ್ರವಾಸ ಮಾಡಿ ನೋಡಿ.

ಆಫ್‌ ಸೀಸನ್‌ ಟೂರ್‌ ಪ್ಲಾನ್ ಮಾಡಿ: ರಜಾದಿನ ಶುರುವಾಗುವ ಮೊದಲು ಅಥವಾ ನಂತರ ಪ್ರವಾಸಕ್ಕೆ ಹೊರಡಿ. ಈ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಲ್ಲಿ ಜನದಟ್ಟಣೆಯೂ ಕಡಿಮೆ, ಬೆಲೆಗಳೂ ಕಡಿಮೆ ಇರುತ್ತವೆ. 
icon

(2 / 16)

ಆಫ್‌ ಸೀಸನ್‌ ಟೂರ್‌ ಪ್ಲಾನ್ ಮಾಡಿ: ರಜಾದಿನ ಶುರುವಾಗುವ ಮೊದಲು ಅಥವಾ ನಂತರ ಪ್ರವಾಸಕ್ಕೆ ಹೊರಡಿ. ಈ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಲ್ಲಿ ಜನದಟ್ಟಣೆಯೂ ಕಡಿಮೆ, ಬೆಲೆಗಳೂ ಕಡಿಮೆ ಇರುತ್ತವೆ. (Meta AI)

ಪ್ರವಾಸಕ್ಕೆ ಸಾರ್ವಜನಿಕ ಸಾರಿಗೆ ಬಳಸಿ: ಪ್ರವಾಸ ಸ್ಥಳ ನಿಗದಿ ಮಾಡುವಾಗ ರೈಲು ಸಂಪರ್ಕ, ಬಸ್ ಸಂಪರ್ಕ ಹೇಗಿದೆ ನೋಡಿಕೊಳ್ಳಿ. ಸಾರ್ವಜನಿಕ ಸಾರಿಗೆ ಬಳಸಿಕೊಂಡು ಪ್ರವಾಸ ಮಾಡಿ. ಸಾಧ್ಯವಾದಷ್ಟೂ ರಾತ್ರಿ ಪ್ರಯಾಣಕ್ಕೆ ಒತ್ತುಕೊಡಿ. ಹೀಗೆ ಮಾಡುವುದರಿಂದ ವಸತಿಗೆ ಮಾಡಬೇಕಾದ ಖರ್ಚು ಉಳಿತಾಯವಾಗುತ್ತದೆ. 
icon

(3 / 16)

ಪ್ರವಾಸಕ್ಕೆ ಸಾರ್ವಜನಿಕ ಸಾರಿಗೆ ಬಳಸಿ: ಪ್ರವಾಸ ಸ್ಥಳ ನಿಗದಿ ಮಾಡುವಾಗ ರೈಲು ಸಂಪರ್ಕ, ಬಸ್ ಸಂಪರ್ಕ ಹೇಗಿದೆ ನೋಡಿಕೊಳ್ಳಿ. ಸಾರ್ವಜನಿಕ ಸಾರಿಗೆ ಬಳಸಿಕೊಂಡು ಪ್ರವಾಸ ಮಾಡಿ. ಸಾಧ್ಯವಾದಷ್ಟೂ ರಾತ್ರಿ ಪ್ರಯಾಣಕ್ಕೆ ಒತ್ತುಕೊಡಿ. ಹೀಗೆ ಮಾಡುವುದರಿಂದ ವಸತಿಗೆ ಮಾಡಬೇಕಾದ ಖರ್ಚು ಉಳಿತಾಯವಾಗುತ್ತದೆ. (Meta AI)

ವಾಸ್ತವ್ಯಕ್ಕೆ ಕಡಿಮೆ ಬಜೆಟ್‌ನ ಸೌಲಭ್ಯ: ಗಂಟೆ ಬಾಡಿಗೆ ಲೆಕ್ಕದ ರೂಮ್‌ಗಳೂ ಸಿಗಬಹುದು ಕೆಲವು ಕಡೆ. ಅದನ್ನು ಚೆಕ್ ಮಾಡಿ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಶೌಚಗೃಹ, ಸ್ನಾನ ಗೃಹಗಳಿರುತ್ತವೆ. ಅವುಗಳನ್ನೂ ಬಳಸಬಹುದು. ಲಗೇಜ್ ಇಡೋದಕ್ಕೆ ಲಗೇಜ್ ರೂಮ್ ಕೂಡ ಇರುತ್ತೆ. ಡೋರ್‌ಮೆಟ್ರಿ ಮುಂತಾದ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದಲ್ಲದೇ ಹೋದರೆ ಹೋಸ್ಟೆಲ್‌, ಗೆಸ್ಟ್‌ಹೌಸ್‌, ಹೋಮ್‌ಸ್ಟೇ ಕೊನೆಯ ಆಯ್ಕೆಯಾಗಿರಲಿ.
icon

(4 / 16)

ವಾಸ್ತವ್ಯಕ್ಕೆ ಕಡಿಮೆ ಬಜೆಟ್‌ನ ಸೌಲಭ್ಯ: ಗಂಟೆ ಬಾಡಿಗೆ ಲೆಕ್ಕದ ರೂಮ್‌ಗಳೂ ಸಿಗಬಹುದು ಕೆಲವು ಕಡೆ. ಅದನ್ನು ಚೆಕ್ ಮಾಡಿ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಶೌಚಗೃಹ, ಸ್ನಾನ ಗೃಹಗಳಿರುತ್ತವೆ. ಅವುಗಳನ್ನೂ ಬಳಸಬಹುದು. ಲಗೇಜ್ ಇಡೋದಕ್ಕೆ ಲಗೇಜ್ ರೂಮ್ ಕೂಡ ಇರುತ್ತೆ. ಡೋರ್‌ಮೆಟ್ರಿ ಮುಂತಾದ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದಲ್ಲದೇ ಹೋದರೆ ಹೋಸ್ಟೆಲ್‌, ಗೆಸ್ಟ್‌ಹೌಸ್‌, ಹೋಮ್‌ಸ್ಟೇ ಕೊನೆಯ ಆಯ್ಕೆಯಾಗಿರಲಿ.(Meta AI)

ಆಹಾರದ ವಿಚಾರದಲ್ಲಿ ಸ್ಥಳೀಯರಾಗಿ: ಲೋಕಲ್ ಸಿಗುವ ಆಹಾರವನ್ನು ಗಮನಿಸಿ. ಅಲ್ಲೆಲ್ಲ ವಿಚಾರಿಸಿ. ಬೆಸ್ಟ್‌ ಊಟೋಪಾಹಾರದ ಕ್ಯಾಂಟೀನ್‌, ಮೆಸ್‌ ಇತ್ಯಾದಿ. ಇದು ಜೇಬಿಗೆ ಹೊರೆಯಾಗದು. ಆದಾಗ್ಯೂ, ಅಲ್ಲಿನ ಸ್ವಚ್ಛತೆ ಬಗ್ಗೆ ಗಮನಕೊಡಿ. ಹೊಟ್ಟೆ ಕೆಡಿಸಿಕೊಳ್ಳಬೇಡಿ.
icon

(5 / 16)

ಆಹಾರದ ವಿಚಾರದಲ್ಲಿ ಸ್ಥಳೀಯರಾಗಿ: ಲೋಕಲ್ ಸಿಗುವ ಆಹಾರವನ್ನು ಗಮನಿಸಿ. ಅಲ್ಲೆಲ್ಲ ವಿಚಾರಿಸಿ. ಬೆಸ್ಟ್‌ ಊಟೋಪಾಹಾರದ ಕ್ಯಾಂಟೀನ್‌, ಮೆಸ್‌ ಇತ್ಯಾದಿ. ಇದು ಜೇಬಿಗೆ ಹೊರೆಯಾಗದು. ಆದಾಗ್ಯೂ, ಅಲ್ಲಿನ ಸ್ವಚ್ಛತೆ ಬಗ್ಗೆ ಗಮನಕೊಡಿ. ಹೊಟ್ಟೆ ಕೆಡಿಸಿಕೊಳ್ಳಬೇಡಿ.(Meta AI)

ಸ್ಥಳೀಯ ಪ್ರವಾಸಿ ಆಕರ್ಷಣೆಗಳು: ಲೋಕಲ್ ಆಗಿ ಉದ್ಯಾನ, ಮ್ಯೂಸಿಯಂ, ಕೋಟೆ ಕೊತ್ತಲಗಳಿದ್ದರೆ ಅಲ್ಲಿಗೆ ಹೋಗಿ ಬನ್ನಿ. ಬೆಟ್ಟ ಇದ್ದರೆ ಚಾರಣ ಮಾಡಿ. ಕೆಲವು ಕಡೆ ಕಡಿಮೆ ಎಂಟ್ರಿ ಫೀಸ್ ಇರಬಹುದು. ಇನ್ನು ಕೆಲವು ಕಡೆ ಲೋಕಲ್‌ಗಳಿಗೆ ಎಂದು ಬೆಳಗ್ಗೆ 9 ಗಂಟೆ ತನಕ ಉಚಿತ ಪ್ರವೇಶ ಇರುತ್ತೆ. ಆ ಅವಕಾಶ ಬಳಸಿಕೊಳ್ಳಬಹುದು. 
icon

(6 / 16)

ಸ್ಥಳೀಯ ಪ್ರವಾಸಿ ಆಕರ್ಷಣೆಗಳು: ಲೋಕಲ್ ಆಗಿ ಉದ್ಯಾನ, ಮ್ಯೂಸಿಯಂ, ಕೋಟೆ ಕೊತ್ತಲಗಳಿದ್ದರೆ ಅಲ್ಲಿಗೆ ಹೋಗಿ ಬನ್ನಿ. ಬೆಟ್ಟ ಇದ್ದರೆ ಚಾರಣ ಮಾಡಿ. ಕೆಲವು ಕಡೆ ಕಡಿಮೆ ಎಂಟ್ರಿ ಫೀಸ್ ಇರಬಹುದು. ಇನ್ನು ಕೆಲವು ಕಡೆ ಲೋಕಲ್‌ಗಳಿಗೆ ಎಂದು ಬೆಳಗ್ಗೆ 9 ಗಂಟೆ ತನಕ ಉಚಿತ ಪ್ರವೇಶ ಇರುತ್ತೆ. ಆ ಅವಕಾಶ ಬಳಸಿಕೊಳ್ಳಬಹುದು. (Meta AI)

ಬಾರ್ಗೇನ್‌ ಮಾಡಿ: ಬೆಲೆಗಳ ಮತ್ತು ದರಗಳ ವಿಚಾರದಲ್ಲಿ ಚೌಕಾಸಿ ಮಾಡಿ. ಉತ್ತಮ ಬೆಲೆಗೆ ಖರೀದಿ ಮಾಡುವುದಕ್ಕೆ ಅಥವಾ ಸೇವೆ ಪಡೆಯಲು ಚೌಕಾಸಿ ಮಾಡೋದ್ರಲ್ಲಿ ತಪ್ಪೇನಿಲ್ಲ. 
icon

(7 / 16)

ಬಾರ್ಗೇನ್‌ ಮಾಡಿ: ಬೆಲೆಗಳ ಮತ್ತು ದರಗಳ ವಿಚಾರದಲ್ಲಿ ಚೌಕಾಸಿ ಮಾಡಿ. ಉತ್ತಮ ಬೆಲೆಗೆ ಖರೀದಿ ಮಾಡುವುದಕ್ಕೆ ಅಥವಾ ಸೇವೆ ಪಡೆಯಲು ಚೌಕಾಸಿ ಮಾಡೋದ್ರಲ್ಲಿ ತಪ್ಪೇನಿಲ್ಲ. (Meta AI)

ಟ್ರಾವೆಲ್ ಆಪ್‌ ಬಳಸಿ: ಲೋಕಲ್ ಆಗಿ ಓಡಾಡಲು ಟ್ರಾವೆಲ್ ಆಪ್ಲಿಕೇಶನ್‌ಗಳನ್ನು ಬಳಸಿ. ಇದು ಸುರಕ್ಷಿತ ಮತ್ತು ನಿಖರ ದರದಲ್ಲಿ ಸಂಚಾರ ಸೇವೆ ಒದಗಿಸಲು ಸಹಕಾರಿ. ಸ್ಥಳೀಯವಾಗಿ ಬಸ್ ಟಿಕೆಟ್ ಬುಕ್ ಮಾಡಲು, ಸಮೀಪದ ರೆಸ್ಟೋರೆಂಟ್ ಮತ್ತು ಇತರೆ ಸೌಕರ್ಯಗಳನ್ನು ಹುಡುಕಾಡಲು ನೆರವಾಗುತ್ತದೆ.
icon

(8 / 16)

ಟ್ರಾವೆಲ್ ಆಪ್‌ ಬಳಸಿ: ಲೋಕಲ್ ಆಗಿ ಓಡಾಡಲು ಟ್ರಾವೆಲ್ ಆಪ್ಲಿಕೇಶನ್‌ಗಳನ್ನು ಬಳಸಿ. ಇದು ಸುರಕ್ಷಿತ ಮತ್ತು ನಿಖರ ದರದಲ್ಲಿ ಸಂಚಾರ ಸೇವೆ ಒದಗಿಸಲು ಸಹಕಾರಿ. ಸ್ಥಳೀಯವಾಗಿ ಬಸ್ ಟಿಕೆಟ್ ಬುಕ್ ಮಾಡಲು, ಸಮೀಪದ ರೆಸ್ಟೋರೆಂಟ್ ಮತ್ತು ಇತರೆ ಸೌಕರ್ಯಗಳನ್ನು ಹುಡುಕಾಡಲು ನೆರವಾಗುತ್ತದೆ.(Meta AI)

ಗ್ರೂಪ್ ಟೂರ್ ಮತ್ತು ಶೇರ್ಡ್‌ ರೈಡ್: ಪ್ರವಾಸಿ ಸ್ಥಳದಲ್ಲಿ ಹೋಗುವ ಗ್ರೂಪ್ ಟೂರ್ ಅಥವಾ ಶೇರ್ಡ್ ರೈಡ್‌ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ
icon

(9 / 16)

ಗ್ರೂಪ್ ಟೂರ್ ಮತ್ತು ಶೇರ್ಡ್‌ ರೈಡ್: ಪ್ರವಾಸಿ ಸ್ಥಳದಲ್ಲಿ ಹೋಗುವ ಗ್ರೂಪ್ ಟೂರ್ ಅಥವಾ ಶೇರ್ಡ್ ರೈಡ್‌ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇದು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ(Meta AI)

ಪ್ರವಾಸಿಗರನ್ನು ವಂಚಿಸುವವರ ಬಗ್ಗೆ ಎಚ್ಚರ: ಪ್ರವಾಸಿಗರು ಎಂದು ಗೊತ್ತಾದ ಕೂಡಲೇ ವಂಚಿಸುವವರು ಇರುತ್ತಾರೆ. ಅಂಥವರ ಬಗ್ಗೆ ಬಹಳ ಎಚ್ಚರದಿಂದ ಇರಿ. ಇಂತಹ ಸನ್ನಿವೇಶಗಳು ಬೇರೆ ಬೇರೆ ರೀತಿ ಎದುರಾಗಬಹುದು. ನಿಮ್ಮ ಫೋಟೋ ಕ್ಲಿಕ್ಕಿಸಿಕೊಡುತ್ತೇನೆ ಎಂದು ಫೋನ್ ಕಸಿದುಕೊಂಡು ಹೋಗಬಹುದು. ಸೇವೆ ಮತ್ತು ಸೌಲಭ್ಯಗಳಿಗೆ ಹೆಚ್ಚು ದರ ವಸೂಲಿ ಮಾಡಬಹುದು. ಈ ಬಗ್ಗೆ ಎಚ್ಚರ ವಹಿಸಿ. 
icon

(10 / 16)

ಪ್ರವಾಸಿಗರನ್ನು ವಂಚಿಸುವವರ ಬಗ್ಗೆ ಎಚ್ಚರ: ಪ್ರವಾಸಿಗರು ಎಂದು ಗೊತ್ತಾದ ಕೂಡಲೇ ವಂಚಿಸುವವರು ಇರುತ್ತಾರೆ. ಅಂಥವರ ಬಗ್ಗೆ ಬಹಳ ಎಚ್ಚರದಿಂದ ಇರಿ. ಇಂತಹ ಸನ್ನಿವೇಶಗಳು ಬೇರೆ ಬೇರೆ ರೀತಿ ಎದುರಾಗಬಹುದು. ನಿಮ್ಮ ಫೋಟೋ ಕ್ಲಿಕ್ಕಿಸಿಕೊಡುತ್ತೇನೆ ಎಂದು ಫೋನ್ ಕಸಿದುಕೊಂಡು ಹೋಗಬಹುದು. ಸೇವೆ ಮತ್ತು ಸೌಲಭ್ಯಗಳಿಗೆ ಹೆಚ್ಚು ದರ ವಸೂಲಿ ಮಾಡಬಹುದು. ಈ ಬಗ್ಗೆ ಎಚ್ಚರ ವಹಿಸಿ. (Meta AI)

ಸಂಪರ್ಕದಲ್ಲಿ ಇರಿ: ಎಲ್ಲೇ ಪ್ರವಾಸ ಹೋದರೂ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ.
icon

(11 / 16)

ಸಂಪರ್ಕದಲ್ಲಿ ಇರಿ: ಎಲ್ಲೇ ಪ್ರವಾಸ ಹೋದರೂ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ.(Meta AI)

 ರಿಯಾಯಿತಿ ಪಡೆಯಿರಿ: ವಿದ್ಯಾರ್ಥಿಗಳಾಗಿದ್ದರೆ ಅದಕ್ಕೆ ಸಂಬಂಧಿಸಿದ ವಿನಾಯಿತಿಗಳು, ರಿಯಾಯಿತಿಗಳು ಇದ್ದೇ ಇರುತ್ತವೆ. ಅಂತಹ ಸೌಲಭ್ಯಗಳನ್ನು ಬಳಸಿಕೊಳ್ಳಿ.
icon

(12 / 16)

 ರಿಯಾಯಿತಿ ಪಡೆಯಿರಿ: ವಿದ್ಯಾರ್ಥಿಗಳಾಗಿದ್ದರೆ ಅದಕ್ಕೆ ಸಂಬಂಧಿಸಿದ ವಿನಾಯಿತಿಗಳು, ರಿಯಾಯಿತಿಗಳು ಇದ್ದೇ ಇರುತ್ತವೆ. ಅಂತಹ ಸೌಲಭ್ಯಗಳನ್ನು ಬಳಸಿಕೊಳ್ಳಿ.(Pexel)

ಸ್ಮಾರ್ಟ್‌ ಆಗಿ ಪ್ಯಾಕ್ ಮಾಡಿ: ಪ್ರವಾಸ ಹೊರಡುವಾಗ ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ. ಲಗೇಜ್ ಎಷ್ಟು ಕಡಿಮೆ ಇದೆಯೋ ಅಷ್ಟು ಒಳ್ಳೆಯದು. ನೀರಿನ ಬಾಟಲಿ, ಅಗತ್ಯ ಆಹಾರ, ಫಸ್ಟ್ ಏಯ್ಡ್ ಕಿಟ್‌ ಮರೆಯಬೇಡಿ.
icon

(13 / 16)

ಸ್ಮಾರ್ಟ್‌ ಆಗಿ ಪ್ಯಾಕ್ ಮಾಡಿ: ಪ್ರವಾಸ ಹೊರಡುವಾಗ ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ. ಲಗೇಜ್ ಎಷ್ಟು ಕಡಿಮೆ ಇದೆಯೋ ಅಷ್ಟು ಒಳ್ಳೆಯದು. ನೀರಿನ ಬಾಟಲಿ, ಅಗತ್ಯ ಆಹಾರ, ಫಸ್ಟ್ ಏಯ್ಡ್ ಕಿಟ್‌ ಮರೆಯಬೇಡಿ.(Meta AI)

ವೊಲಂಟಿಯರ್ ಆಥವಾ ವರ್ಕ್‌ ಎಕ್ಸ್‌ಚೇಂಜ್: ಕಚೇರಿ ಕಡೆಯಿಂದ ಅಥವಾ ಶಿಕ್ಷಣ ಸಂಸ್ಥೆಗಳ ಕಡೆಯಿಂದ ವೊಲಂಟಿಯರ್ ಆಗಿ ಅಥವಾ ವರ್ಕ್‌ ಎಕ್ಸ್‌ಚೇಂಜ್‌ಗೆ ಹೋಗುವ ಅವಕಾಶ ಸಿಕ್ಕರೆ ಬಿಡಬೇಡಿ.
icon

(14 / 16)

ವೊಲಂಟಿಯರ್ ಆಥವಾ ವರ್ಕ್‌ ಎಕ್ಸ್‌ಚೇಂಜ್: ಕಚೇರಿ ಕಡೆಯಿಂದ ಅಥವಾ ಶಿಕ್ಷಣ ಸಂಸ್ಥೆಗಳ ಕಡೆಯಿಂದ ವೊಲಂಟಿಯರ್ ಆಗಿ ಅಥವಾ ವರ್ಕ್‌ ಎಕ್ಸ್‌ಚೇಂಜ್‌ಗೆ ಹೋಗುವ ಅವಕಾಶ ಸಿಕ್ಕರೆ ಬಿಡಬೇಡಿ.(Meta AI)

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೆ ಅಂತಹ ಕಾರ್ಯಕ್ರಮಗಳು ಭಾರತದ ಸಂಸ್ಕೃತಿ ವೈವಿಧ್ಯವನ್ನು ಪರಿಚಯವಾಗುತ್ತದೆ. ಅದನ್ನೂ ಮಿಸ್‌ ಮಾಡದೇ ಬಳಸಿಕೊಳ್ಳಿ.
icon

(15 / 16)

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೆ ಅಂತಹ ಕಾರ್ಯಕ್ರಮಗಳು ಭಾರತದ ಸಂಸ್ಕೃತಿ ವೈವಿಧ್ಯವನ್ನು ಪರಿಚಯವಾಗುತ್ತದೆ. ಅದನ್ನೂ ಮಿಸ್‌ ಮಾಡದೇ ಬಳಸಿಕೊಳ್ಳಿ.(Meta AI)

ಯಾವುದಕ್ಕೂ ಪರ್ಸ್ ಮುಟ್ಟಿ ನೋಡಿಕೊಳ್ಳುತ್ತಿರಿ: ಹೌದು ಎಲ್ಲೇ ಪ್ರವಾಸ ಹೋದರೂ ಪರ್ಸ್ ಮುಟ್ಟಿ ನೋಡುತ್ತಿರಿ. ಎಷ್ಟು ದುಡ್ಡಿದೆ ಎಂಬುದರ ಕಡೆಗೆ ಗಮನ ಇರಲಿ. ಖರ್ಚಿನ ಮೇಲೆ ಹಿಡಿತ ಸಾಧಿಸುವುದಕ್ಕೆ ಇದು ಸಹಕಾರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂಬ ಆಡು ನುಡಿ ಮರೆಯಬೇಡಿ.
icon

(16 / 16)

ಯಾವುದಕ್ಕೂ ಪರ್ಸ್ ಮುಟ್ಟಿ ನೋಡಿಕೊಳ್ಳುತ್ತಿರಿ: ಹೌದು ಎಲ್ಲೇ ಪ್ರವಾಸ ಹೋದರೂ ಪರ್ಸ್ ಮುಟ್ಟಿ ನೋಡುತ್ತಿರಿ. ಎಷ್ಟು ದುಡ್ಡಿದೆ ಎಂಬುದರ ಕಡೆಗೆ ಗಮನ ಇರಲಿ. ಖರ್ಚಿನ ಮೇಲೆ ಹಿಡಿತ ಸಾಧಿಸುವುದಕ್ಕೆ ಇದು ಸಹಕಾರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂಬ ಆಡು ನುಡಿ ಮರೆಯಬೇಡಿ.(Pexel)


ಇತರ ಗ್ಯಾಲರಿಗಳು