Shaik Jani Basha: ಹೀರೋ ಆಗಿ ಪ್ರಮೋಷನ್ ಪಡೆದ ಜಾನಿ ಮಾಸ್ಟರ್...ಯಾರೆಲ್ಲಾ ಸ್ಟಾರ್ ನಟರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ ನೋಡಿ
- ಚಿತ್ರರಂಗದಲ್ಲಿ ನಟರಾಗಿ ಹೆಸರು ಮಾಡಿದವರು ನಿರ್ದೇಶನ, ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಾಯಕರಾಗಿರುವವರು ನಾಯಕರಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರು ಕೂಡಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಕೂಡಾ ನಾಯಕನಾಗುತ್ತಿದ್ದಾರೆ.
- ಚಿತ್ರರಂಗದಲ್ಲಿ ನಟರಾಗಿ ಹೆಸರು ಮಾಡಿದವರು ನಿರ್ದೇಶನ, ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಗಾಯಕರಾಗಿರುವವರು ನಾಯಕರಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕರು ಕೂಡಾ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಕೂಡಾ ನಾಯಕನಾಗುತ್ತಿದ್ದಾರೆ.
(1 / 11)
ಅನೇಕ ಸ್ಟಾರ್ ನಟರಿಗೆ ಡ್ಯಾನ್ಸ್ ಹೇಳಿಕೊಟ್ಟಿರುವ ಜಾನಿ ಮಾಸ್ಟರ್ ಈಗ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು ಸೆಪ್ಟೆಂಬರ್ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.(PC: Jani Master Facebook)
(2 / 11)
ಜಾನಿ ಮಾಸ್ಟರ್ ಮೂಲ ಹೆಸರು ಶಾಯಿಕ್ ಜಾನಿ ಬಾಷಾ, ಇವರು ಮೂಲತ: ಆಂಧ್ರದ ನೆಲ್ಲೂರಿನವರು.(PC; Jani master Facebook)
(3 / 11)
ಕೊರಿಯೋಗ್ರಾಫರ್ ಆಗಿ ಹೆಸರು ಮಾಡಿರುವ ಜಾನಿ ಮಾಸ್ಟರ್‌ಗೆ ಹೀರೋ ಆಗಬೇಕೆಂಬ ಆಸೆ ಇರಲಿಲ್ಲವಂತೆ. ಆದರೆ ಸ್ನೇಹಿತರ ಒತ್ತಾಯದ ಮೇರೆಗೆ ಅವರು ಈಗ ನಾಯಕನಾಗುತ್ತಿದ್ದಾರೆ. ಈಗಾಗಲೇ ಜಾನಿ ಮಾಸ್ಟರ್ ಪಯಣಿ ಎಂಬ ಆಲ್ಬಂ ಹಾಡಿನಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಾಡನ್ನು ರಜನಿಕಾಂತ್ ಪುತ್ರಿ ಐಶ್ವರ್ಯ ನಿರ್ಮಿಸಿದ್ದರು.(PC; Jani master Facebook)
(4 / 11)
ಜಾನಿ ಮಾಸ್ಟರ್ ನಟಿಸುತ್ತಿರುವ ಯಥಾ ರಾಜ ತಥಾ ಪ್ರಜಾ ಸಿನಿಮಾ ಕನ್ನಡ, ತಮಿಳು, ತೆಲುಗು ಮೂರೂ ಭಾಷೆಗಳಲ್ಲಿ ತಯಾರಾಗಲಿದೆ.(PC; Jani master Facebook)
(5 / 11)
ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಜಾನಿ ಮಾಸ್ಟರ್ ಅನೇಕ ಸಿನಿಮಾಗಳಿಗೆ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನರಾದಾಗ ಅವರೊಂದಿಗಿನ ಫೋಟೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಯುವರತ್ನ, ಲಕ್ಕಿಮ್ಯಾನ್ ಸೇರಿ ಪುನೀತ್ ನಟಿಸಿರುವ ಅನೇಕ ಸಿನಿಮಾ ಹಾಡುಗಳಲ್ಲಿ ಜಾನಿ ಮಾಸ್ಟರ್ ಡ್ಯಾನ್ಸ್ ಇದೆ.(PC: Jani master Facebook)
(7 / 11)
ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್ ಹಾಗೂ ಸ್ಯಾಂಡಲ್‌ವುಡ್ ಕಿಚ್ಚನೊಂದಿಗೆ ಜಾನಿ ಮಾಸ್ಟರ್. ಇತ್ತೀಚೆಗೆ ತೆರೆ ಕಂಡ ವಿಕ್ರಾಂತ್ ರೋಣ ಚಿತ್ರದ ರಾ ರಾ ರಕ್ಕಮ್ಮ ಸೇರಿ ಸುದೀಪ್ ಅವರ ಕೆಲವು ಸಿನಿಮಾಗಳಿಗೂ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.(PC: Jani master Facebook)
(8 / 11)
ತಮಿಳು ನಟ ಸೂರ್ಯ ಜೊತೆ ಜಾನಿ ಮಾಸ್ಟರ್. ಸೂರ್ಯ ಸಿನಿಮಾಗಳಲ್ಲಿ ಕೂಡಾ ಜಾನಿ ಮಾಸ್ಟರ್ ಕೆಲಸ ಮಾಡಿದ್ದಾರೆ. (PC: Jani master Facebook)
(9 / 11)
ತಮನ್ನಾ, ರಾಮ್‌ಚರಣ್ ತೇಜ ನಟಿಸಿರುವ 'ರಚ್ಚ' ಚಿತ್ರದ ವಾನ ವಾನ..ಸೇರಿ ರಾಮ್ ಚರಣ್ ಚಿತ್ರದ ಬಹಳಷ್ಟು ಹಾಡುಗಳಲ್ಲಿ ಜಾನಿ ಮಾಸ್ಟರ್ ಡ್ಯಾನ್ಸ್ ಇದೆ.(PC: Jani master Facebook)
(10 / 11)
ಜಾನಿ ಮಾಸ್ಟರ್‌ಗೆ ಸಿನಿಮಾ ನಿರ್ದೇಶನ ಮಾಡುವ ಕನಸು ಇದ್ದು ಪವನ್ ಕಲ್ಯಾಣ್ ಅವರಿಗೆ ಡೈರೆಕ್ಷನ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದರ ಬಗ್ಗೆ ಅಧಿಕೃತವಾಗಿ ಘೊಷಣೆಯಾಗಿಲ್ಲ.(PC: Jani master Facebook)
ಇತರ ಗ್ಯಾಲರಿಗಳು