ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುತ್ತೀದ್ದೀರಾ, ಮೈಸೂರು ಮಲ್ಲಿಗೆ ಕವಿ ಊರು, ಮೇಲುಕೋಟೆ ಪುತಿನ ಮನೆ, ನಾಗೇಗೌಡರ ಜನಪದ ಲೋಕಕ್ಕೆ ಭೇಟಿ ನೀಡಿ

  • ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಬರುವವರು ಅಲ್ಲಿನ ಪ್ರಮುಖ ಸಾಹಿತಿಗಳ ಹುಟ್ಟೂರು, ಸ್ಮಾರಕ. ಸಮೀಪದ ತಾಣಗಳನ್ನು ನೋಡಲು ಅವಕಾಶವಿದೆ. ಇದರ ಚಿತ್ರನೋಟ ಇಲ್ಲಿದೆ.

ಕನ್ನಡದ ಕಣ್ವ ಎಂದೇ ಹೆಸರಾದ ಸಾಹಿತಿ ಬಿ.ಎಂ.ಶ್ರೀಕಂಠಯ್ಯ ಅವರ ಹುಟ್ಟೂರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು. ಅಲ್ಲಿಯೇ ಅವರ ಮನೆಯೂ ಇದೆ. ಅಲ್ಲದೇ ಆದಿಚುಂಚನಗಿರಿ ಮಠವೂ ಸಮೀಪದಲ್ಲಿಯೇ ಇರುವುದರಿಂದ ಅಲ್ಲಿಗೂ ಹೋಗಲು ಅವಕಾಶವಿದೆ. ಇದು ಮಂಡ್ಯದಿಂದ ಅರವತ್ತು ಕಿ.ಮಿ ದೂರದಲ್ಲಿದೆ.
icon

(1 / 6)

ಸಾಹಿತ್ಯ ಲೋಕದಲ್ಲಿ ತಮ್ಮದೇ ವಿಶಿಷ್ಟ ಬರಹ, ಚಿಂತನೆ, ಬದುಕಿನಿಂದ ಗಮನ ಸೆಳೆದ ಪು ತಿ ನರಸಿಂಹಾಚಾರ್‌ ಅವರು ಮಂಡ್ಯ ಜಿಲ್ಲೆ ಮೇಲುಕೋಟೆಯವರು. ಅಲ್ಲಿಯೇ ಇರುವ ಅವರ ಮನೆ ಸ್ಮಾರಕವಾಗಿದೆ.ಮೇಲುಕೋಟೆಯ ದೇಗುಲ, ಅಕ್ಕತಂಗಿಯರ ಕೊಳ, ಧನುಷ್ಕೋಟಿ, ಸಂಸ್ಕೃತ ಅಕಾಡೆಮಿ,ಬೆಟ್ಟ ಸಾಲುಗಳನ್ನು ಮೇಲುಕೋಟೆಯಲ್ಲಿ ನೋಡಬಹುದು. ಅಲ್ಲದೇ ಗಾಂಧಿವಾದಿಯಾಗಿದ್ದ ಕೌಲಗಿ ಅವರ ನಿವಾಸವೂ ಇದೆ.  ಮೇಲುಕೋಟೆ ಮಂಡ್ಯದಿಂದ ಮೂವತ್ತು ಕಿ.ಮಿ. ದೂರದಲ್ಲಿದೆ.
icon

(2 / 6)

ಜನಪದ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ, ಐಎಎಸ್‌ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಎಚ್‌ ಎಲ್.‌ ನಾಗೇಗೌಡ ಅವರ ಹುಟ್ಟೂರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ. ಆದರೆ ಅವರು ರಾಮನಗರ ಸಮೀಪದಲ್ಲಿ ನಿರ್ಮಿಸಿದ ಜನಪದ ಲೋಕ ಅವರ ಕತೃತ್ವ ಶಕ್ತಿಗೆ ಸಾಕ್ಷಿಯಂತಿದೆ. ಜನಪದ ಲೋಕ ಮಂಡ್ಯದಿಂದ ಐವತ್ತು ಕಿ.ಮಿ ದೂರದಲ್ಲಿದೆ.
icon

(3 / 6)

ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹಿರಿಯ ಸಾಹಿತಿ ದೇವರು ಕೃತಿ ಖ್ಯಾತಿಯ ಎ.ಎನ್‌.ಮೂರ್ತಿರಾವ್‌ ಹುಟ್ಟೂರು. ಅವರ ನಿವಾಸವೂ ಇಲ್ಲಿದೆ. ಗ್ರಾಮದಲ್ಲಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನವೂ ಇದೆ.ಮಂಡ್ಯದಿಂದ ಅರವತ್ತು ಕಿ.ಮಿ.ದೂರದಲ್ಲಿದೆ ಅಕ್ಕಿಹೆಬ್ಬಾಳು.
icon

(4 / 6)

ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕಿನ ಕಿಕ್ಕೇರಿ. ಇಲ್ಲಿ ಕೆಎಸ್‌ನ ಮನೆಯಿದೆ,. ಕಿಕ್ಕೇರಿ ಹಲವು ಸಾಧಕರ ಊರು. ಚಿತ್ರನಿರ್ದೇಶಕ, ನಟರಾಗಿದ್ದ ಕೆಎಸ್‌ಎಲ್‌ ಸ್ವಾಮಿ, ಕಲಾವಿದ ಕಿಕ್ಕೇರಿ ಕೃಷ್ಣಮೂರ್ತಿ ಅವರ ಊರು. ಸಮೀಪದ ಹೊಸ ಹೊಳಲಿನಲ್ಲಿ ಐತಿಹಾಸಿಕ ದೇಗುಲವಿದೆ. ಮಂಡ್ಯದಿಂದ ನಲವತ್ತು ಕಿ.ಮಿ ದೂರದಲ್ಲಿದೆ ಕಿಕ್ಕೇರಿ.
icon

(5 / 6)

ಶ್ರೀರಂಗಪಟ್ಟಣ ಐತಿಹಾಸಿಕ ತಾಣ. ಕರ್ನಾಟಕದ ದ್ವೀಪ ನಗರ. ಹಿರಿಯ ಸಾಹಿತಿ ಪ್ರೊ.ಕರೀಮುದ್ದೀನ್‌ ಅವರು ಕಳೆದ ವರ್ಷ ವಿಧಿವಶರಾದರು. ಅವರ ನಿವಾಸವಿದೆ. ಇದಲ್ಲದೇ ಕಾವೇರಿ ತೀರಿದ ಪ್ರವಾಸಿ ತಾಣಗಳು, ಶ್ರೀರಂಗನಾಥ ದೇಗುಲ, ಟಿಪ್ಪು ಕಾಲದ ಸ್ಮಾರಕಗಳು, ನಿಮಿಷಾಂಬ ದೇಗುಲ ಶ್ರೀರಂಗಪಟ್ಟಣದಲ್ಲಿವೆ. ಕೆಆರ್‌ಎಸ್‌, ರಂಗನತಿಟ್ಟಿಗೂ ಹೋಗಿ ಬರಬಹುದು.
icon

(6 / 6)

ಇತರ ಗ್ಯಾಲರಿಗಳು