ಶಸ್ತ್ರಚಿಕಿತ್ಸೆಗೆ ಅಮೆರಿಕಕ್ಕೆ ಹೊರಟ ಶಿವರಾಜ್ ಕುಮಾರ್‌ಗೆ ಕಿಚ್ಚ ಸುದೀಪ್ ಅಪ್ಪುಗೆ; ಅಭಿಮಾನಿಗಳನ್ನು ಭಾವುಕಗೊಳಿಸಿದ ಫೋಟೋಗಳಿವು
- ಶಿವರಾಜ್ ಕುಮಾರ್ ಇಂದು (ಡಿಸೆಂಬರ್ 18) ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್̧ ಬಿಸಿ ಪಾಟೀಲ್, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
- ಶಿವರಾಜ್ ಕುಮಾರ್ ಇಂದು (ಡಿಸೆಂಬರ್ 18) ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್̧ ಬಿಸಿ ಪಾಟೀಲ್, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
(1 / 7)
ಶಿವರಾಜ್ ಕುಮಾರ್ ಇಂದು (ಡಿಸೆಂಬರ್ 18) ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್̧ ̧ ಬಿಸಿ ಪಾಟೀಲ್, ಮಧು ಬಂಗಾರಪ್ಪ ಮುಂತಾದವರು ಶಿವಣ್ಣನ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣ ಹಗ್ ಮಾಡಿಕೊಂಡಿದ್ದಾರೆ. ಅವರ ಈ ಅಪ್ಪುಗೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(2 / 7)
ಶಿವರಾಜ್ ಕುಮಾರ್ ಅನಾರೋಗ್ಯದ ಕುರಿತು ಕಳೆದ ಕೆಲವು ಸಮಯದಿಂದ ವದಂತಿಗಳಿವೆ. ಇದೇ ಸಮಯದಲ್ಲಿ ತನ್ನ ಅನಾರೋಗ್ಯದ ಕುರಿತು ಪರೋಕ್ಷವಾಗಿ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ತಮ್ಮ ಕಾಯಿಲೆಗೆ ಸಂಬಂಧಪಟ್ಟಂತೆ ಅತ್ಯುತ್ತಮ ಚಿಕಿತ್ಸೆ ಪಡೆಯುವ ಸಲುವಾಗಿ ಶಿವಣ್ಣ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
(3 / 7)
ಶಿವ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಪ್ಪಿಕೊಂಡ ಫೊಟೋಗಳು ಸೋಷಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿವೆ. ""ಇಂದು ನಮ್ಮ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ನಿವಾಸಕ್ಕೆ ಕಿಚ್ಚ ಸುದೀಪ್ ಮತ್ತು ಬಿಸಿ ಪಾಟೀಲ್ ಅವರು ಭೇಟಿ ನೀಡಿ ಅರೋಗ್ಯ ವಿಚಾರಿಸಿದರು. ಇಂದು ಯುಎಸ್‌ಗೆ ಶಿವಣ್ಣ ತೆರಳುತ್ತಿದ್ದು ನಾವೆಲ್ಲರೂ ಶಿವಣ್ಣ ಅವರು ಬೇಗ ಗುಣಮುಖರಾಗಿ ಮತ್ತೆ ನಮ್ಮನ್ನು ರಂಜಿಸಲಿ ಎಂದು ನಮ್ಮ ಕುಲದೇವರಲ್ಲಿ ಪ್ರಾರ್ಥಿಸೋಣ" ಎಂದು ಅಭಿಮಾನಿಗಳು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
(4 / 7)
ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಈ ಹಿಂದೆಯೇ ತಿಳಿಸಿದ್ದರು. ಭೈರತಿ ರಣಗಲ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ್ದರು.
(5 / 7)
ಕೆಲವು ತಿಂಗಳ ಹಿಂದೆ ನನ್ನ ಅನಾರೋಗ್ಯದ ಬಗ್ಗೆ ತಿಳಿಯಿತು. ಈ ಸಮಯದಲ್ಲಿಯೇ ಶೂಟಿಂಗ್ ಮುಗಿಸಿದೆ. ಸಾಹಸ ಸನ್ನಿವೇಶ ಕೂಡ ಮಾಡಿದ್ದೆ. ಡ್ಯಾನ್ಸ್ ಕರ್ನಾಟಕ ಶೋನಲ್ಲೂ ಭಾಗವಹಿಸಿದ್ದೆ. ನಾನು ಎಲ್ಲಾ ನಿರ್ಮಾಪಕರಿಗೂ ಈ ಕುರಿತು ಮಾಹಿತಿ ನೀಡಿದ್ದೇನೆ. ಯಾರಲ್ಲಿಯೂ ಅನಾರೋಗ್ಯದ ಕುರಿತು ವಿಷಯ ಮುಚ್ಚಿಟ್ಟಿಲ್ಲ" ಎಂದು ಶಿವಣ್ಣ ಹೇಳಿದ್ದರು.
(6 / 7)
"ನನ್ನ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆ ನಡೆಯುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಸಾಕು. ನನಗೆ ನಾಲ್ಕು ಹಂತಗಳಲ್ಲಿ ಟ್ರೀಟ್ ಮೆಂಟ್ ನಡೆಯಲಿದೆ. ಇನ್ನೆರಡು ಸೆಷನ್ ಬಾಕಿ ಇದೆ. ಒಂದು ಶಸ್ತ್ರಚಿಕಿತ್ಸೆ ಕೂಡ ಆಗಬೇಕಿದೆ. ಇದಕ್ಕಾಗಿ ಡಿಸೆಂಬರ್ ತಿಂಗಳಿನಲ್ಲಿ ಅಮೆರಿಕಕ್ಕೆ ಹೋಗಬೇಕಿದೆ. ಅಲ್ಲಿ ಒಂದು ತಿಂಗಳ ಕಾಲ ಟ್ರೀಟ್‌ಮೆಂಟ್ ಪಡೆಯಬೇಕಿದೆ" ಎಂದು ಶಿವಣ್ಣ ಮಾಹಿತಿ ನೀಡಿದ್ದರು.
(7 / 7)
"ಮುಂದಿನ ಸಂಕ್ರಾಂತಿ ತಿಂಗಳ ವೇಳೆಗೆ ಭಾರತಕ್ಕೆ ಮರಳುವ ಆಲೋಚನೆ ಇದೆ. ಫೆಬ್ರವರಿಯಿಂದ ನಿಮ್ಮೆಲ್ಲರ ಆಶೀರ್ವಾದದಿಂದ ಫುಲ್ ಫಾರ್ಮ್‌ನಲ್ಲಿರುವ ಶಿವಣ್ಣ ನಿಮ್ಮ ಮುಂದೆ ಇರಲಿದ್ದಾರೆ ಎಂದು ಆ ಸಮಯದಲ್ಲಿ ಹೇಳಿದ್ದರು. ಇನ್ನೊಂದು ತಿಂಗಳು ಶಿವಣ್ಣ ಅಮೆರಿಕದಲ್ಲಿ ಇರಲಿದ್ದಾರೆ. ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತ ಫೋಟೋಗಳನ್ನು ಹಂಚುತ್ತಿದ್ದಾರೆ.
ಇತರ ಗ್ಯಾಲರಿಗಳು