ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ, 27 ಎಸೆತಗಳಲ್ಲೇ 100 ರನ್; ಕ್ರಿಸ್ಗೇಲ್ ದಾಖಲೆ ಧ್ವಂಸಗೊಳಿಸಿದ ಸಾಹಿಲ್ ಚೌಹಾಣ್
- Sahil Chauhan T20 Cricket Record: ಟಿ20 ಕ್ರಿಕೆಟ್‌ನಲ್ಲಿ ಎಸ್ಟೋನಿಯಾ ಬ್ಯಾಟರ್ ಸಾಹಿಲ್ ಚೌಹಾಣ್ ಅವರು ವೇಗದ ಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
- Sahil Chauhan T20 Cricket Record: ಟಿ20 ಕ್ರಿಕೆಟ್‌ನಲ್ಲಿ ಎಸ್ಟೋನಿಯಾ ಬ್ಯಾಟರ್ ಸಾಹಿಲ್ ಚೌಹಾಣ್ ಅವರು ವೇಗದ ಶತಕ ಸಿಡಿಸುವ ಮೂಲಕ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
(1 / 6)
ಎಸ್ಟೋನಿಯಾ ಬ್ಯಾಟರ್ ಸಾಹಿಲ್ ಚೌಹಾಣ್ ಸೋಮವಾರ (ಜೂನ್ 17) ಸೈಪ್ರಸ್ ತಂಡದ ವಿರುದ್ಧ 27 ಎಸೆತಗಳಲ್ಲೇ ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
(2 / 6)
ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ ಅವರ ವಿಶ್ವದಾಖಲೆ ಹಿಂದಿಕ್ಕಿ ವೇಗದ ಶತಕ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. 2013ರ ಐಪಿಎಲ್ನಲ್ಲಿ ಆರ್ಸಿಬಿ ಪರ 30 ಎಸೆತಗಳಲ್ಲಿ ಶತಕ ಗಳಿಸಿದ್ದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
(3 / 6)
ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕವಾಗಿದೆ. ನೇಪಾಳ ವಿರುದ್ಧ ನಮೀಬಿಯಾದ ಜಾನ್-ನಿಕೋಲ್ ಲಾಫ್ಟಿ-ಈಟನ್ ಅವರು 33 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
(4 / 6)
ಚೌಹಾಣ್ 41 ಎಸೆತಗಳಲ್ಲಿ ಅಜೇಯ 144 ರನ್ ಗಳಿಸಿದ್ದಾರೆ. ಅವರ ಇನ್ನಿಂಗ್ಸ್ನಲ್ಲಿ 6 ಬೌಂಡರಿ, 18 ಸಿಕ್ಸರ್ ದಾಖಲಾಗಿವೆ. ಇದು ಟಿ20ಐ ಇನ್ನಿಂಗ್ಸ್ವೊಂದರಲ್ಲಿ ದಾಖಲಾದ ಗರಿಷ್ಠ ಸಿಕ್ಸರ್ಗಳಾಗಿವೆ. ಸ್ಟ್ರೈಕ್ ರೇಟ್ 351.21 ಆಗಿತ್ತು.
(5 / 6)
18 ಸಿಕ್ಸರ್ಗಳೊಂದಿಗೆ ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ ಮತ್ತು ನ್ಯೂಜಿಲೆಂಡ್ನ ಫಿನ್ ಅಲೆನ್ ದಾಖಲೆಗಳನ್ನು ಮುರಿದರು. 2019ರಲ್ಲಿ ಐರ್ಲೆಂಡ್ ವಿರುದ್ಧ ಝಜೈ ಮತ್ತು ಅಲೆನ್ 2024 ರಲ್ಲಿ ಪಾಕಿಸ್ತಾನದ ವಿರುದ್ಧ ತಲಾ 16 ಸಿಕ್ಸರ್ ಬಾರಿಸಿದ್ದರು.
ಇತರ ಗ್ಯಾಲರಿಗಳು