ಕ್ವಿಂಟನ್ ಡಿ ಕಾಕ್ ವಿಕೆಟ್ ಪಡೆದು ವಿಶ್ವಕಪ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಫಜಲ್ಹಕ್ ಫಾರೂಕಿ; ವನಿಂದು ಹಸರಂಗ ದಾಖಲೆ ಉಡೀಸ್
- Fazalhaq Farooqi World Cup Record : ಸೌತ್ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವೇಗಿ ಫಜಲ್ಹಕ್ ಫಾರೂಕಿ ಅವರು ವನಿಂದು ಹಸರಂಗ ಅವರ ಅದ್ಭುತ ವಿಶ್ವದಾಖಲೆಯನ್ನು ಮುರಿದಿದ್ದಾರೆ.
- Fazalhaq Farooqi World Cup Record : ಸೌತ್ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ವೇಗಿ ಫಜಲ್ಹಕ್ ಫಾರೂಕಿ ಅವರು ವನಿಂದು ಹಸರಂಗ ಅವರ ಅದ್ಭುತ ವಿಶ್ವದಾಖಲೆಯನ್ನು ಮುರಿದಿದ್ದಾರೆ.
(1 / 5)
ಟ್ರಿನಿಡಾಡ್ನಲ್ಲಿ ಜೂನ್ 27ರ ಗುರುವಾರ ಬೆಳಿಗ್ಗೆ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಬಿತ್ತು. ಸೆಮೀಸ್ನಲ್ಲಿ ಸೋತರೂ ಈ ವರ್ಷದ ಟಿ20 ವಿಶ್ವಕಪ್ ಆಫ್ಘನ್ ಪಾಲಿಗೆ ಐತಿಹಾಸಿಕವಾಗಿದೆ. ಏಕೆಂದರೆ ಆಫ್ಘನ್ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದು ಇದೇ ಮೊದಲು. ಇದಲ್ಲದೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೊಡ್ಡ ತಂಡಗಳ ವಿರುದ್ಧ ಗೆಲುವು ಕೂಡ ಸಾಧಿಸಿದೆ.
(2 / 5)
ಹಲವು ಐತಿಹಾಸಿಕ ಸಾಧನೆಗಳ ನಡುವೆ ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಕೂಡ ಅಫ್ಘಾನಿಸ್ತಾನದವರೇ ಎಂಬುದು ವಿಶೇಷ. ಸೆಮಿಫೈನಲ್ ಪಂದ್ಯದಲ್ಲಿ 1 ವಿಕೆಟ್ ಪಡೆದ ಫಜಲ್ಹಕ್ ಫಾರೂಕಿ, ಹಾಲಿ ಟೂರ್ನಿಯಲ್ಲಿ 17 ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್ ಉರುಳಿಸಿ ಇತಿಹಾಸ ಪುಟಗಳಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ.
(3 / 5)
ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ನಲ್ಲಿ ಫಜಲ್ಹಕ್ ಫಾರೂಕಿ ಎರಡು ಓವರ್ಗಳಲ್ಲಿ ಒಂದು ವಿಕೆಟ್ ಪಡೆದರು. ಇದರ ಪರಿಣಾಮವಾಗಿ ಅವರು ಟಿ20 ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಫಾರೂಕಿ ಶ್ರೀಲಂಕಾದ ವನಿಂದು ಹಸರಂಗ ಅವರ ವಿಶ್ವ ದಾಖಲೆಯನ್ನು ಮುರಿದರು. ಈ ವರ್ಷದ ಟಿ20 ವಿಶ್ವಕಪ್ನಲ್ಲಿ ಫಜಲ್ಹಕ್ 8 ಪಂದ್ಯಗಳಲ್ಲಿ 17 ವಿಕೆಟ್ಗಳನ್ನು ಪಡೆದಿದ್ದಾರೆ.
(4 / 5)
ಶ್ರೀಲಂಕಾದ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ 2021ರ ಟಿ20 ವಿಶ್ವಕಪ್ನಲ್ಲಿ 8 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ಗಳನ್ನು ಪಡೆದಿದ್ದರು. ಇದು ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾರ್ವಕಾಲಿಕ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಫಜಲ್ಹಕ್ ಫಾರೂಕಿ ಅವರು ಹಸರಂಗ ದಾಖಲೆಯನ್ನು ಕಸಿದುಕೊಂಡಿದ್ದಾರೆ.
ಇತರ ಗ್ಯಾಲರಿಗಳು