Rashid Khan: ಕೋಪದಿಂದ ಬ್ಯಾಟ್ ಎಸೆದು ದುರ್ವತನೆ ತೋರಿದ ರಶೀದ್ ಖಾನ್; ಛೀಮಾರಿ ಹಾಕಿದ ಐಸಿಸಿ
- Rashid Khan: ಟಿ20 ವಿಶ್ವಕಪ್ 2024 ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ರಶೀದ್ ಖಾನ್ಗೆ ಐಸಿಸಿ ಛೀಮಾರಿ ಹಾಕಿದೆ.
- Rashid Khan: ಟಿ20 ವಿಶ್ವಕಪ್ 2024 ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ರಶೀದ್ ಖಾನ್ಗೆ ಐಸಿಸಿ ಛೀಮಾರಿ ಹಾಕಿದೆ.
(1 / 6)
ಮೊಟ್ಟ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡವನ್ನು ಟಿ20 ವಿಶ್ವಕಪ್ ಸೆಮಿಫೈನಲ್ಗೇರಿಸಿದ್ದ ತಮ್ಮ ದೇಶದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರಶೀದ್ ಖಾನ್ ಅವರಿಗೆ ಐಸಿಸಿ ಛೀಮಾರಿ ಹಾಕಿದೆ. ಅಲ್ಲದೆ, ದಂಡವನ್ನೂ ವಿಧಿಸಿದೆ. ಆದರೆ ಸೆಮಿಫೈನಲ್ನಲ್ಲಿ ಸೌತ್ ಆಫ್ರಿಕಾ ಎದುರು ಸೋತು ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಚೊಚ್ಚಲ ಟ್ರೋಫಿಯ ಕನಸು ಭಗ್ನಗೊಂಡಿತು. ಸೆಮೀಸ್ಗೂ ಮುನ್ನ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ರಶೀದ್ ತೋರಿದ ವರ್ತನೆಗೆ ಐಸಿಸಿ ಬೇಸರ ವ್ಯಕ್ತಪಡಿಸಿದೆ.
(2 / 6)
ರಶೀದ್ ಖಾನ್ ನಾಯಕತ್ವದಲ್ಲಿ ಅಫ್ಘಾನಿಸ್ತಾನ ಗುಂಪು ಮತ್ತು ಸೂಪರ್-8 ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತು. ಆದರೆ, ಸೆಮೀಸ್ನಲ್ಲಿ ಕಳಾಹೀನ ಪ್ರದರ್ಶನ ನೀಡಿತು. ಗುಂಪು ಹಂತದಲ್ಲಿ ಬಲಿಷ್ಠ ನ್ಯೂಜಿಲೆಂಡ್ ಮತ್ತು ಸೂಪರ್-8 ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದ ಆಫ್ಘನ್, ಸೆಮೀಸ್ಗೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು.
(3 / 6)
ಅಫ್ಘಾನಿಸ್ತಾನ ತಂಡ ಜೂನ್ 27ರಂದು ಬೆಳಿಗ್ಗೆ 6 ಗಂಟೆಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 9 ವಿಕೆಟ್ಗಳ ಸೋಲನುಭವಿಸಿ ಟಿ20 ವಿಶ್ವಕಪ್ ಪ್ರಯಾಣ ಕೊನೆಗೊಳಿಸಿತು. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘನ್ 11.5 ಓವರ್ಗಳಲ್ಲಿ 56 ರನ್ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ 8.5 ಓವರ್ಗಳಲ್ಲಿ ಜಯದ ನಗೆ ಬೀರಿದ್ದಲ್ಲದೆ, ಚೊಚ್ಚಲ ಫೈನಲ್ಗೇರಿತು.
(4 / 6)
ಆದರೆ, ಸೂಪರ್-8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ರಶೀದ್ ಖಾನ್ಗೆ ಐಸಿಸಿ ಛೀಮಾರಿ ಹಾಕಿದೆ, ರಶೀದ್ ನಡೆ ಖಂಡಿಸಿರುವ ಐಸಿಸಿ, ದಂಡವನ್ನು ಹಾಕಿದೆ. ಆ ಪಂದ್ಯದಲ್ಲಿ ರಶೀದ್ ಬ್ಯಾಟ್ ಎಸೆದು ನಿಮಯ ಉಲ್ಲಂಘಿಸಿದ್ದರು.
(5 / 6)
ಮೊದಲ ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ರಶೀದ್ ತಂಡದ ಸಹ ಆಟಗಾರ ಕರೀಮ್ ಜನತ್ ಮೇಲೆ ಕೋಪ ತೋರಿಸಿದ ನಂತರ ಬ್ಯಾಟ್ ಎಸೆದರು. ಐಸಿಸಿ ನೀತಿ ಸಂಹಿತೆಯ ಪ್ರಕಾರ, ಇದನ್ನು ಲೆವೆಲ್ 1 ಅಪರಾಧವೆಂದು ಪರಿಗಣಿಸಲಾಗುತ್ತದೆ. ಲೆವೆಲ್ 1 ಅಪರಾಧಗಳಿಗೆ ಕನಿಷ್ಠ ದಂಡ ವಿಧಿಸಲಾಗುತ್ತದೆ. ಗರಿಷ್ಠ ದಂಡವು ಪಂದ್ಯದ ಶುಲ್ಕದ ಶೇಕಡಾ 50ರಷ್ಟು ಆಗಿರುತ್ತದೆ. ಕ್ರಿಕೆಟಿಗನ ಶಿಸ್ತು ದಾಖಲೆಗೆ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ.
(6 / 6)
ರಶೀದ್ ಖಾನ್ಗೆ ಕಡಿಮೆ ಶಿಕ್ಷೆ ವಿಧಿಸಲಾಯಿತು. ಕಳೆದ 24 ತಿಂಗಳಲ್ಲಿ ರಶೀದ್ ಮಾಡಿದ ಮೊದಲ ಲೆವೆಲ್ ಒನ್ ಅಪರಾಧ ಇದಾಗಿರುವುದರಿಂದ, ಅವರಿಗೆ ಛೀಮಾರಿ ಹಾಕಲಾಗಿದ್ದು, 1 ಡಿಮರಿಟ್ ಅಂಕ ಕೂಡ ನೀಡಲಾಗಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಆಫ್ಘನ್ ಇನ್ನಿಂಗ್ಸ್ನಲ್ಲಿ ಕೊನೆಯ ಓವರ್ನಲ್ಲಿ ರಶೀದ್ 2 ರನ್ ಗಳಿಸಲು ಪ್ರಯತ್ನಿಸಿದ್ದರು. ಆದರೆ, ಕರೀಮ್ 2 ರನ್ ತೆಗೆದುಕೊಳ್ಳಲು ನಿರಾಕರಿಸಿದರು. ಇದು ರಶೀದ್ಗೆ ಕೋಪ ತರಿಸಿತು. ಹಾಗಾಗಿ ತನ್ನ ಬ್ಯಾಟ್ ಎಸೆದು ತನ್ನ ಕೋಪವನ್ನು ವ್ಯಕ್ತಪಡಿಸಿದ್ದರು.
ಇತರ ಗ್ಯಾಲರಿಗಳು