ಜೀರೋಯಿಂದ ಹೀರೋ ಆದವರು; ಎಂಎಸ್ ಧೋನಿ, ಶಿಖರ್ ಧವನ್, ಲಕ್ಷ್ಮಣ್ ಸಾಲಿಗೆ ಸೇರಿದ ಅಭಿಷೇಕ್ ಶರ್ಮಾ
- Abhishek Sharma: ಭಾರತೀಯ ಕ್ರಿಕೆಟ್ ಪರ ಪದಾರ್ಪಣೆಗೈದ ಪಂದ್ಯದಲ್ಲೇ ಕೆಲ ಆಟಗಾರರು ಶೂನ್ಯಕ್ಕೆ ಔಟಾಗಿದ್ದಾರೆ. ಆದರೆ, ಡಕೌಟ್ ಆದ ಮರು ಪಂದ್ಯದಲ್ಲೇ ಹೀರೋ ಆಗಿದ್ದಾರೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.
- Abhishek Sharma: ಭಾರತೀಯ ಕ್ರಿಕೆಟ್ ಪರ ಪದಾರ್ಪಣೆಗೈದ ಪಂದ್ಯದಲ್ಲೇ ಕೆಲ ಆಟಗಾರರು ಶೂನ್ಯಕ್ಕೆ ಔಟಾಗಿದ್ದಾರೆ. ಆದರೆ, ಡಕೌಟ್ ಆದ ಮರು ಪಂದ್ಯದಲ್ಲೇ ಹೀರೋ ಆಗಿದ್ದಾರೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.
(1 / 8)
ಟೀಮ್ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಇನ್ನಿಂಗ್ಸ್‌ನಲ್ಲಿ ಡಕೌಟ್ ಆದರು. ಆದರೆ ಮರು ಪಂದ್ಯ ಅಂದರೆ ಎರಡನೇ ಇನ್ನಿಂಗ್ಸ್‌ನಲ್ಲೇ ಶತಕ ಗಳಿಸಿ ಹಲವು ದಾಖಲೆ ಬರೆದರು. ಡಕೌಟ್ನಲ್ಲೇ ವೃತ್ತಿಜೀವನ ಆರಂಭಿಸಿ ಮರು ಪಂದ್ಯದಲ್ಲೇ ಅಬ್ಬರಿಸಿದವರ ಪಟ್ಟಿ ಇಲ್ಲಿದೆ.
(2 / 8)
ಯುವಕರನ್ನೊಳಗೊಂಡ ಭಾರತ ತಂಡವು ಐದು ಪಂದ್ಯಗಳ ಟಿ20ಐ ಸರಣಿಗೆ ಜಿಂಬಾಬ್ವೆಗೆ ಪ್ರವಾಸ ಕೈಗೊಂಡಿದೆ. ಆರಂಭಿಕ ಪಂದ್ಯದಲ್ಲಿ ಡಕೌಟ್ ಆದ ಅಭಿಷೇಕ್, ಎರಡನೇ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಸಿಡಿಸಿದರು. 47 ಎಸೆತಗಳಲ್ಲಿ 100 ರನ್ ಬಾರಿಸಿದರು.
(3 / 8)
ಅಭಿಷೇಕ್ ಶರ್ಮಾಗೂ ಮೊದಲು ಡಕೌಟ್ನಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿ ನಂತರ ಅಬ್ಬರಿಸಿದ ಕೆಲವು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.
(4 / 8)
ಮೊಹಿಂದರ್ ಅಮರನಾಥ್ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಮರನಾಥ್ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗದೆ 16 ರನ್ ಗಳಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಔಟಾದರು.
(5 / 8)
ಚೊಚ್ಚಲ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾದ ಅಮರನಾಥ್ ನಂತರ ಟೀಮ್ಇಂಡಿಯಾದ ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದರು. ಅಮರನಾಥ್ 4378 ಟೆಸ್ಟ್ ಮತ್ತು 1924 ಏಕದಿನ ರನ್ಗಳನ್ನು ಗಳಿಸಿದ್ದಾರೆ.
(6 / 8)
ವಿವಿಎಸ್ ಲಕ್ಷ್ಮಣ್ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಡಕೌಟ್ ಆಗಿದ್ದರು. ನಂತರ ಟೀಮ್ ಇಂಡಿಯಾ ಪರ ಒಟ್ಟು 8781 ಟೆಸ್ಟ್ ಹಾಗೂ 2338 ಏಕದಿನ ರನ್ ಗಳಿಸಿದರು.
(7 / 8)
ಮಾಜಿ ನಾಯಕ ಎಂಎಸ್ ಧೋನಿ 2004ರಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಬಾಂಗ್ಲಾದೇಶ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲಿ ಎಂಎಸ್ ಧೋನಿ ಖಾತೆ ತೆರೆಯದೆ ರನೌಟ್ ಆಗಿದ್ದರು. ಧೋನಿ ಭಾರತ ಪರ 4876 ಟೆಸ್ಟ್, 10773 ಏಕದಿನ ಮತ್ತು 1617 ಟಿ20 ಅಂತರಾಷ್ಟ್ರೀಯ ರನ್ ಗಳಿಸಿದ್ದಾರೆ. ನಾಯಕನಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದರು.
ಇತರ ಗ್ಯಾಲರಿಗಳು