ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20ಐ ಕ್ರಿಕೆಟ್​ನಲ್ಲಿ 100 ವಿಕೆಟ್​ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್; ಈ ಸಾಧನೆಗೈದ ವಿಶ್ವದ ಮೊದಲ ವೇಗಿ

ಟಿ20ಐ ಕ್ರಿಕೆಟ್​ನಲ್ಲಿ 100 ವಿಕೆಟ್​ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ ಹ್ಯಾರಿಸ್ ರೌಫ್; ಈ ಸಾಧನೆಗೈದ ವಿಶ್ವದ ಮೊದಲ ವೇಗಿ

  • Haris Rauf Record: ಜೂನ್ 11ರಂದು ನಡೆದ ಕೆನಡಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೇಗಿ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳ ಸಾಧನೆಗೈದು ಹಲವು ದಾಖಲೆ ನಿರ್ಮಿಸಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಟಿ20 ಕ್ರಿಕೆಟ್​​ನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಕೆನಡಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ರೌಫ್, ಟಿ20ಐನಲ್ಲಿ 100 ವಿಕೆಟ್ ಪಡೆದ ಪಾಕಿಸ್ತಾನದ ಎರಡನೇ ಬೌಲರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
icon

(1 / 5)

ಜೂನ್ 11ರ ಮಂಗಳವಾರ ಕೆನಡಾ ವಿರುದ್ಧದ ಪಂದ್ಯದಲ್ಲಿ ರೌಫ್ 4 ಓವರ್​​ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರು. ಶ್ರೇಯಸ್ ಮೋಭಾ ಅವರನ್ನು ಔಟ್ ಮಾಡುವ ಮೂಲಕ ಟಿ20ಐನಲ್ಲಿ ತಮ್ಮ 100ನೇ ವಿಕೆಟ್ ಪೂರೈಸಿದರು. ಇದರೊಂದಿಗೆ ಹಲವು ದಾಖಲೆಯನ್ನು ನಿರ್ಮಿಸಿದರು.
icon

(2 / 5)

ಅತಿವೇಗವಾಗಿ 100 ಟಿ20ಐ ವಿಕೆಟ್ ಪಡೆದ ಮೊದಲ ಪಾಕಿಸ್ತಾನದ ಮೊದಲ ಹಾಗೂ ವಿಶ್ವದ ಮೊದಲ ಬೌಲರ್​ ಎನಿಸಿದ್ದಾರೆ, ಮೊದಲ ಎರಡು ಸ್ಥಾನಗಳಲ್ಲಿ ಸ್ಪಿನ್ನರ್​​ಗಳಾದ ರಶೀದ್ ಖಾನ್ ಹಾಗೂ ವನಿಂದು ಹಸರಂಗ ಇದ್ದಾರೆ. ಟಿ20ಐನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಮೊದಲ ಫಾಸ್ಟ್​ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
icon

(3 / 5)

ಹ್ಯಾರಿಸ್​ ರೌಫ್ 71 ಟಿ20 ಪಂದ್ಯಗಳಲ್ಲೇ 100 ವಿಕೆಟ್ ಪಡೆದಿದ್ದಾರೆ. ವಿಶ್ವದ ಯಾವ ವೇಗದ ಬೌಲರ್ ಕೂಡ ಈ ಸಾಧನೆ ಮಾಡಿಲ್ಲ. ಇದರೊಂದಿಗೆ ಐರ್ಲೆಂಡ್​​ನ ಮಾರ್ಕ್ ಅಡೈರ್ ಮತ್ತು ಒಮಾನ್​​ನ ಬಿಲಾಲ್ ಖಾನ್ ದಾಖಲೆ ಮುರಿದಿದ್ದಾರೆ. ಅಡೈರ್ ಮತ್ತು ಬಿಲಾಲ್ 72 ಟಿ20ಐಗಳಲ್ಲಿ ಈ ದಾಖಲೆ ಬರೆದಿದ್ದು, ಶ್ರೀಲಂಕಾದ ಲಸಿತ್ ಮಾಲಿಂಗ 76ನೇ ಟಿ20ಐಗಳಲ್ಲಿ 100 ವಿಕೆಟ್ ಕಬಳಿಸಿದ್ದು, ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ 81 ತೆಗೆದುಕೊಂಡಿದ್ದಾರೆ.
icon

(4 / 5)

ಶಾದಾಬ್ ಖಾನ್ (107) ನಂತರ ಪಾಕಿಸ್ತಾನ ಪರ ಟಿ20ಐನಲ್ಲಿ 100 ವಿಕೆಟ್ ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಾಕ್ ಪರ ಟಿ20ಐನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಕೂಡ ಹೌದು.
icon

(5 / 5)

ಇತರ ಗ್ಯಾಲರಿಗಳು