ಧೋನಿ ಚಾಣಾಕ್ಷತನ ನೆನಪಿಸಿದ ಸ್ಕೈ; ಲಂಕಾ ವಿರುದ್ಧ ಗೆಲ್ಲಲು ಸೂರ್ಯಕುಮಾರ್ ಯಾದವ್ 3 ಗೇಮ್ ಚೇಂಜಿಂಗ್ ನಿರ್ಧಾರಗಳು
- India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿತು. ಸೋಲುವ ಹಂತದಲ್ಲಿದ್ದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು. ನಾಯಕ ಸೂರ್ಯಕುಮಾರ್ ಯಾದವ್, ಡೆತ್ ಓವರ್‌ಗಳಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರ ಪಂದ್ಯದ ದಿಕ್ಕನ್ನೇ ಬದಲಿಸಿತು. ಹೀಗಾಗಿ ಲಂಕಾ ಸೋತು ಹೋಯಿತು.
- India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿತು. ಸೋಲುವ ಹಂತದಲ್ಲಿದ್ದ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತು. ನಾಯಕ ಸೂರ್ಯಕುಮಾರ್ ಯಾದವ್, ಡೆತ್ ಓವರ್‌ಗಳಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರ ಪಂದ್ಯದ ದಿಕ್ಕನ್ನೇ ಬದಲಿಸಿತು. ಹೀಗಾಗಿ ಲಂಕಾ ಸೋತು ಹೋಯಿತು.
(1 / 5)
ಭಾರತ ವಿರುದ್ಧದ ಸರಣಿಯ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಶ್ರೀಲಂಕಾದ ಬ್ಯಾಟಿಂಗ್ ಕ್ರಮಾಂಕ ಭಾರಿ ಕುಸಿತಕ್ಕೊಳಗಾಯ್ತು. ಆದರೆ, ಮೂರನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ಕೇವಲ 137 ರನ್ ಗುರಿ ಬೆನ್ನಟ್ಟಿತು. ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತ್ತು. ಕೈಯಲ್ಲಿ ಇನ್ನೂ 5 ಓವರ್ ಗಳು ಇದ್ದವು. ದ್ವೀಪ ರಾಷ್ಟ್ರದ ಗೆಲುವಿಗೆ 28 ರನ್‌ಗಳ ಅಗತ್ಯವಿತ್ತು. ಸುಸ್ಥಿತಿಯಲ್ಲಿದ್ದ ಶ್ರೀಲಂಕಾ ಪಂದ್ಯವನ್ನು ಕಳೆದುಕೊಳ್ಳುವ ಸುಳಿವು ಸ್ವಲ್ಪವೂ ಇರಲಿಲ್ಲ. ಆದರೆ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರ ಕೆಲವು ಕಠಿಣ ನಿರ್ಧಾರಗಳು ಪಂದ್ಯದ ಚಿತ್ರಣವನ್ನು ಬದಲಾಯಿಸಿದವು.(AFP)
(2 / 5)
ಪಂದ್ಯದ ಕೊನೆಯಲ್ಲಿ ಸೂರ್ಯ 3 ನಿರ್ಧಾರಗಳನ್ನು ತೆಗೆದುಕೊಂಡರು, ಇದು ಮಹೇಂದ್ರ ಸಿಂಗ್ ಧೋನಿಯ ಚಾಣಾಕ್ಷತನ ನೆನಪಿಸಿತು. ಸೂರ್ಯಕುಮಾರ್ ಯಾದವ್ ಕೂಡ ಶ್ರೀಲಂಕಾ ವಿರುದ್ಧದ ಸರಣಿಯ ಅಂತಿಮ ಟಿ20 ಪಂದ್ಯದಲ್ಲಿ ಅಚ್ಚರಿಯ ನಿರ್ಧಾರಕ್ಕೆ ಬಂದರು.(PTI)
(3 / 5)
ಶ್ರೀಲಂಕಾ ತಂಡ 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. 16ನೇ ಓವರ್‌ನಲ್ಲಿ ಸೂರ್ಯ ಚೆಂಡನ್ನು ಮೊಹಮ್ಮದ್ ಸಿರಾಜ್ ಬದಲಿಗೆ ರವಿ ಬಿಷ್ಣೋಯ್‌ಗೆ ಹಸ್ತಾಂತರಿಸಿದರು. ಅದಾಗಲೇ ಸಿರಾಜ್‌ಗಿಂತ ದುಬಾರಿಯಾಗಿದ್ದ ಬಿಷ್ಣೋಯ್‌ಗೆ ಬೌಲಿಂಗ್ ನೀಡಿದ ಸೂರ್ಯನ ನಿರ್ಧಾರವು ಅನೇಕರನ್ನು ಆಶ್ಚರ್ಯಗೊಳಿಸಿತು. ಆದರೆ, 16ನೇ ಓವರ್ನ ಎರಡನೇ ಎಸೆತದಲ್ಲಿ ಬಿಷ್ಣೋಯ್ 43 ರನ್ ಗಳಿಸಿದ್ದ ಕುಸಾಲ್ ಮೆಂಡಿಸ್ ಅವರನ್ನು ಔಟ್ ಮಾಡಿದರು. ಶ್ರೀಲಂಕಾದ ಇನ್ನಿಂಗ್ಸ್ ಆ ಬಳಿಕ ಕುಸಿಯಲು ಪ್ರಾರಂಭಿಸಿತು.(AFP)
(4 / 5)
ಕೊನೆಯ 2 ಓವರ್‌ಗಳಲ್ಲಿ ಶ್ರೀಲಂಕಾ ಗೆಲುವಿಗೆ 9 ರನ್‌ಗಳ ಅವಶ್ಯಕತೆಯಿತ್ತು. ತಂಡದ ಬಳಿ 6 ವಿಕೆಟ್‌ಗಳಿದ್ದವು. ಮೊಹಮ್ಮದ್ ಸಿರಾಜ್ ಮತ್ತು ಖಲೀಲ್ ಅಹ್ಮದ್ ಅವರ ತಲಾ ಒಂದು ಓವರ್ ಬಾಕಿ ಉಳಿದಿದ್ದರು. ಶಿವಂ ದುಬೆ ಅವರ ಬೌಲಿಂಗ್ ಆಯ್ಕೆಯೂ ಭಾರತದ ಕೈಯಲ್ಲಿತ್ತು. ವಿಶೇಷವಾಗಿ ಸಿರಾಜ್ ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ್ದರು. ಈ ಸಂದರ್ಭದಲ್ಲಿ, ಸೂರ್ಯಕುಮಾರ್ ಸಿರಾಜ್ ಬದಲಿಗೆ ರಿಂಕು ಸಿಂಗ್ ಅವರಲ್ಲಿ 19ನೇ ಓವರ್ ಎಸೆಯಲು ಹೇಳಿದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲಿಂಗ್ ರಿಂಕು ಬೌಲಿಂಗ್ ಮಾಡಿದರು. ರಿಂಕು 3 ರನ್ ಬಿಟ್ಟುಕೊಟ್ಟು ಎರಡು ವಿಕೆಟ್ ಪಡೆದರು. ಆ ಮೂಲಕ ನಾಯಕನ ವಿಶ್ವಾಸವನ್ನು ಉಳಿಸಿಕೊಂಡರು.(PTI)
(5 / 5)
ಮೂರನೆಯದಾಗಿ, ಸೂರ್ಯ ಕೊನೆಯ ಓವರ್‌ನಲ್ಲಿ ಸಿರಾಜ್ ಅವರ ಬದಲಿಗೆ ಖುದ್ದು ತಾವೇ ಬೌಲಿಂಗ್ ಮಾಡಲು ಮುಂದಾದರು. ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿದೆ ಎಂದು ಅವರು ಅರ್ಥಮಾಡಿಕೊಂಡಿದ್ದರು. ಕೊನೆಯ ಓವರ್‌ನಲ್ಲಿ ಶ್ರೀಲಂಕಾ ಗೆಲುವಿಗೆ 6 ರನ್ ಅವಶ್ಯಕತೆಯಿತ್ತು. ಈ ಪರಿಸ್ಥಿತಿಯಲ್ಲಿ, ಸೂರ್ಯಕುಮಾರ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಚೆಂಡನ್ನು ತೆಗೆದುಕೊಂಡರು, ಅವರು 5 ರನ್ ಮಾತ್ರವೇ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಪಂದ್ಯವು ಸಮಬಲಗೊಂಡಿತು. ನಂತರ ಸೂಪರ್ ಓವರ್ ಗೆಲ್ಲಲು ಭಾರತಕ್ಕೆ ಸ್ವಲ್ಪವೂ ಕಷ್ಟವಾಗಲಿಲ್ಲ. ಹೀಗಾಗಿ ನಾಯಕ ಸೂರ್ಯಕುಮಾರ್ ಅವರ ನಿರ್ಧಾರದಿಂದಾಗಿ, ಟೀಮ್ ಇಂಡಿಯಾ ಸೋಲುವ ಪಂದ್ಯವನ್ನು ಗೆದ್ದುಕೊಂಡಿತು.(PTI)
ಇತರ ಗ್ಯಾಲರಿಗಳು