ಟಿ20 ವಿಶ್ವಕಪ್ 2024 ಗುಂಪು ಹಂತದ ಪಂದ್ಯಗಳು ಮುಕ್ತಾಯ; ಲೀಗ್ ಅಂಕಪಟ್ಟಿಯಲ್ಲಿ ಟಾಪರ್ಸ್ ಯಾರು ನೋಡಿ
- T20 World Cup Points Table: ಟಿ20 ವಿಶ್ವಕಪ್ 2024ರ ಗುಂಪು ಹಂತದ ಅಭಿಯಾನವು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಕೊನೆಗೊಂಡಿತು. ಸೂಪರ್ 8 ಪಂದ್ಯಗಳು ಆರಂಭಕ್ಕೂ ಮುನ್ನ 4 ಗುಂಪುಗಳ ಅಂತಿಮ ಪಾಯಿಂಟ್ಸ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.
- T20 World Cup Points Table: ಟಿ20 ವಿಶ್ವಕಪ್ 2024ರ ಗುಂಪು ಹಂತದ ಅಭಿಯಾನವು ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಕೊನೆಗೊಂಡಿತು. ಸೂಪರ್ 8 ಪಂದ್ಯಗಳು ಆರಂಭಕ್ಕೂ ಮುನ್ನ 4 ಗುಂಪುಗಳ ಅಂತಿಮ ಪಾಯಿಂಟ್ಸ್ ಟೇಬಲ್ ಹೇಗಿದೆ ಎಂಬುದನ್ನು ನೋಡೋಣ.
(1 / 5)
ಜೂನ್ 18ರ ಮಂಗಳವಾರ ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ನಡುವಿನ ಸಿ ಗುಂಪಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್ ಗುಂಪು ಹಂತದ ಪಂದ್ಯಗಳಿಗೆ ತೆರೆ ಎಳೆಯಿತು. ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಸುತ್ತಿಗೆ ಅರ್ಹತೆ ಪಡೆದಿವೆ. ಒಟ್ಟು 12 ತಂಡಗಳು ಗುಂಪು ಲೀಗ್ನಿಂದ ಹೊರಗುಳಿದಿವೆ. ಪಾಕಿಸ್ತಾನ-ನ್ಯೂಜಿಲೆಂಡ್ನಂತಹ ಪ್ರಮುಖ ತಂಡಗಳೇ ನಾಕೌಟ್ ಆಗಿವೆ.
(2 / 5)
'ಎ' ಗುಂಪಿನಲ್ಲಿ ಭಾರತ ತಂಡ (4 ಪಂದ್ಯ, 3 ಗೆಲುವು, 1 ರದ್ದು, 7 ಅಂಕ, ರನ್ ರೇಟ್ +1.137) ಅಗ್ರಸ್ಥಾನ ಪಡೆದಿದೆ. ಅಮೆರಿಕ ಎರಡನೇ (2 ಗೆಲುವು, 1 ಸೋಲು, 1 ರದ್ದು, 5 ಅಂಕ, ರನ್ರೇಟ್ +0.127) ಸ್ಥಾನದಲ್ಲಿದೆ. ಪಾಕಿಸ್ತಾನ 2 ಸೋಲು, 2 ಗೆಲುವು ಸಾಧಿಸಿ 4 ಅಂಕ ಪಡೆದಿದೆ. ಐರ್ಲೆಂಡ್ ಆಡಿದ ಪಂದ್ಯಗಳಲ್ಲಿ 1 ಗೆಲುವು, 2 ಸೋಲು, 1 ರದ್ದಾಗಿದ್ದು, 3 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿರುವ ಕೆನಡಾ 3 ಸೋಲು ಕಂಡಿದೆ. ತಾನಾಡಿದ 1 ಪಂದ್ಯ ರದ್ದಾಗಿದೆ.
(3 / 5)
'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ ನಾಲ್ಕಕ್ಕೆ 4 ಗೆದ್ದು ಅಗ್ರಸ್ಥಾನ ಪಡೆದಿದೆ. 8 ಅಂಕ ಪಡೆದಿದೆ (ರನ್ ರೇಟ್ +2.791). ಇಂಗ್ಲೆಂಡ್ 4 ಪಂದ್ಯಗಳಲ್ಲಿ 5 ಅಂಕ ಗಳಿಸಿ 2ನೇ (ರನ್ ರೇಟ್ +3.611) ಸ್ಥಾನದಲ್ಲಿದೆ. ಈ ಎರಡು ತಂಡಗಳು ಸೂಪರ್-8ರ ಘಟ್ಟಕ್ಕೆ ಪ್ರವೇಶಿಸಿವೆ. ಸ್ಕಾಟ್ಲೆಂಡ್ 4 ಮ್ಯಾಚ್ಗಳಲ್ಲಿ 5 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ರನ್ ರೇಟ್ +1.255 ಆಗಿದೆ. ನಮೀಬಿಯಾ 4 ಪಂದ್ಯಗಳಲ್ಲಿ 2 ಅಂಕ ಪಡೆದರೆ, ಓಮನ್ ಒಂದೂ ಅಂಕ ಗಳಿಸದೆ 4 ಮತ್ತು 5ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿವೆ.
(4 / 5)
'ಸಿ' ಗುಂಪಿನಲ್ಲಿ ವೆಸ್ಟ್ ಇಂಡೀಸ್ ಆಡಿರುವ 4 ಪಂದ್ಯಗಳನ್ನು ಗೆದ್ದು 8 ಅಂಕ ಗಳಿಸಿದೆ. ರನ್ ರೇಟ್ +3.257. ವಿಂಡೀಸ್ ಜೊತೆಗೆ ಅಫ್ಘಾನಿಸ್ತಾನ ನಾಲ್ಕರಲ್ಲಿ 3 ಗೆಲುವು ಸಾಧಿಸಿ ಸೂಪರ್ 8ಕ್ಕೆ ಪ್ರವೇಶಿಸಿದೆ. ರನ್ ರೇಟ್ +1.835 ಆಗಿದೆ. ನ್ಯೂಜಿಲೆಂಡ್ 4 ಪಂದ್ಯಗಳಲ್ಲಿ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಉಗಾಂಡಾ 4 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಪಪುವಾ ನ್ಯೂ ಗಿನಿಯಾ 4 ಪಂದ್ಯಗಳನ್ನು ಆಡಿದ ನಂತರವೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
(5 / 5)
'ಡಿ' ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ಆಡಿರುವ 4 ಪಂದ್ಯಗಳನ್ನು ಗೆದ್ದು 8 ಅಂಕ ಗಳಿಸಿದೆ. ರನ್ ರೇಟ್ +0.470. ದಕ್ಷಿಣ ಆಫ್ರಿಕಾದೊಂದಿಗೆ ಡಿ-ಗುಂಪಿನಿಂದ ಬಾಂಗ್ಲಾದೇಶ ಸೂಪರ್ 8ರ ಹಂತ ತಲುಪಿದೆ. ನಾಲ್ಕು ಪಂದ್ಯಗಳಿಂದ 6 ಅಂಕ ಗಳಿಸಿರುವ ಬಾಂಗ್ಲಾ, ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾ ರನ್ ರೇಟ್ +0.616. ಶ್ರೀಲಂಕಾ 4 ಪಂದ್ಯಗಳಲ್ಲಿ 3 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ನೆದರ್ಲೆಂಡ್ಸ್ 4 ಪಂದ್ಯಗಳಲ್ಲಿ 2 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ನೇಪಾಳ 4 ಪಂದ್ಯಗಳಿಂದ 1 ಅಂಕ ಗಳಿಸಿ 5ನೇ ಕ್ರಮಾಂಕ ಪಡೆದಿದೆ.
ಇತರ ಗ್ಯಾಲರಿಗಳು