Virat Kohli: ಪಾಕಿಸ್ತಾನ ವಿರುದ್ಧ ಕೇವಲ 4 ರನ್; ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲು
- Virat Kohli: ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಒಂದಂಕಿಗೆ ಔಟಾಗಿದ್ದಾರೆ.
- Virat Kohli: ಟಿ20 ವಿಶ್ವಕಪ್ ಇತಿಹಾಸದಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಒಂದಂಕಿಗೆ ಔಟಾಗಿದ್ದಾರೆ.
(1 / 5)
ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತದ ಎರಡನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದರು. ಐರ್ಲೆಂಡ್ ಎದುರು 1 ರನ್ಗೆ ಔಟ್ ಆಗಿದ್ದ ಕೊಹ್ಲಿ, ಪಾಕ್ ವಿರುದ್ಧ 3 ಎಸೆತಗಳಲ್ಲಿ 4 ರನ್ ಸಿಡಿಸಿ ನಿರಾಸೆ ಮೂಡಿಸಿದರು.
(2 / 5)
ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಎಂದೂ ಒಂದಂಕಿಗೆ ಔಟಾದವರಲ್ಲ. ಚುಟುಕು ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಕೊಹ್ಲಿ ಒಂದಂಕಿಗೆ ಔಟಾಗಿದ್ದಾರೆ.
(3 / 5)
2014ರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಅಜೇಯ 36 ರನ್ ಬಾರಿಸಿದ್ದರು. 2022ರ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅಜೇಯ 82 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರ್ ಗಳಿಸಿದ್ದರು. ಇದಲ್ಲದೆ, ಕೊಹ್ಲಿ 2012, 2016 ಮತ್ತು 2021 ರ ವಿಶ್ವಕಪ್ನಲ್ಲಿ ಕ್ರಮವಾಗಿ 78, ಅಜೇಯ 55 ಮತ್ತು 57 ರನ್ ಗಳಿಸಿದ್ದರು.
(4 / 5)
ಒಟ್ಟಾರೆ ಟಿ20 ಕ್ರಿಕೆಟ್ನಲ್ಲಿ ಪಾಕಿಸ್ತಾನ ವಿರುದ್ಧ ಎರಡನೇ ಬಾರಿಗೆ ಒಂದಂಕಿಗೆ ಔಟಾಗಿದ್ದಾರೆ. 2012ರಲ್ಲಿ ಬೆಂಗಳೂರಿನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 11 ಎಸೆತಗಳಲ್ಲಿ 9 ರನ್ ಗಳಿಸಿ ಔಟಾಗಿದ್ದರು. ಆದರೆ, ಟಿ20 ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಒಂದಂಕಿಗೆ ಔಟಾಗದ್ದಾರೆ.
ಇತರ ಗ್ಯಾಲರಿಗಳು