WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲು, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ
- WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲಿನ ನಂತರ, ಪಾಕಿಸ್ತಾನವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಭಾರತವು ಅಗ್ರಸ್ಥಾನದಲ್ಲಿ ಮುಂದುವರೆದಿದೆ.
- WTC Points Table: ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಸೋಲಿನ ನಂತರ, ಪಾಕಿಸ್ತಾನವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಭಾರತವು ಅಗ್ರಸ್ಥಾನದಲ್ಲಿ ಮುಂದುವರೆದಿದೆ.
(1 / 6)
WTC Points Table: ಪಾಕಿಸ್ತಾನ ತಂಡವು ತವರಿನಲ್ಲಿ ಮತ್ತೊಂದು ಹೀನಾಯ ಸೋಲಿಗೆ ಶರಣಾಗಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಪಾಕ್ ಇನ್ನಿಂಗ್ಸ್ ಮತ್ತು 47 ರನ್ಗಳಿಂದ ಸೋಲು ಕಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದರೂ, ಇನ್ನಿಂಗ್ಸ್ ಸೋಲು ಕಂಡ ವಿಶ್ವದ ಮೊದಲ ಕ್ರಿಕೆಟ್ ತಂಡ ಎಂಬ ಕುಖ್ಯಾತಿಗೆ ಪಾಕ್ ಪಾತ್ರವಾಗಿದೆ.(REUTERS)
(2 / 6)
WTC Points Table: ಈ ಸೋಲಿನೊಂದಿಗೆ ಪಾಕಿಸ್ತಾನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಪ್ರಸ್ತುತ ತಂಡವು 3ನೇ ಆವೃತ್ತಿಯಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ 2ರಲ್ಲಿ ಗೆದ್ದಿದ್ದು, ಆರರಲ್ಲಿ ಸೋತಿದೆ. 16 ಅಂಕ ಮತ್ತು 16.67ರಷ್ಟು ಶೇಕಡವಾರು ಗೆಲುವಿನೊಂದಿಗೆ 9ನೇ ಸ್ಥಾನದಲ್ಲಿದೆ.(REUTERS)
(3 / 6)
WTC Points Table: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ 556 ರನ್ ಗಳಿಸಿತ್ತು. ಆದಾಗ್ಯೂ, ಇಂಗ್ಲೆಂಡ್ ತಿರುಗೇಟು ನೀಡಿತು. ಅಲ್ಲದೆ, ಬೃಹತ್ 823 ರನ್ ಗಳಿಸುವ ಮೂಲಕ ದಾಖಲೆ ಬರೆಯಿತು. ಇದರೊಂದಿಗೆ 267 ರನ್ಗಳ ಮುನ್ನಡೆ ಸಾಧಿಸಿತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನ 220 ರನ್ಗಳಿಗೆ ಪತನಗೊಂಡ ಕಾರಣ ಇನ್ನಿಂಗ್ಸ್ ಮತ್ತು 47 ರನ್ಗಳ ಸೋಲನುಭವಿಸಿತು.(AP)
(4 / 6)
WTC Points Table: ತವರಿನಲ್ಲಿ ಪಾಕಿಸ್ತಾನ ತಂಡವು ಮತ್ತೊಂದು ಹೀನಾಯ ಸೋಲು ಕಂಡ ಹಿನ್ನೆಲೆ ಡಬ್ಲ್ಯುಟಿಸಿ ಫೈನಲ್ ರೇಸ್ನಿಂದ ಹೊರ ಬಿತ್ತು,(REUTERS)
(5 / 6)
WTC Points Table: ಈ ಗೆಲುವಿನೊಂದಿಗೆ ಇಂಗ್ಲೆಂಡ್ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನಕ್ಕೇರಿತು. 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 9ರಲ್ಲಿ ಗೆಲುವು, 7ರಲ್ಲಿ ಸೋಲು ಕಂಡಿದೆ. ಮತ್ತೊಂದು ಟೆಸ್ಟ್ ಡ್ರಾ ಆಗಿತ್ತು. 93 ಅಂಕಗಳು ಮತ್ತು ಗೆಲುವಿನ ಶೇಕಡವಾರು 45.59 ರಷ್ಟಿದೆ.(AFP)
ಇತರ ಗ್ಯಾಲರಿಗಳು