ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್ ಮತದಾನ; ಹಕ್ಕು ಚಲಾಯಿಸಿದ ಅನಿಲ್ ಕುಂಬ್ಳೆ

ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ಕೋಚ್ ರಾಹುಲ್‌ ದ್ರಾವಿಡ್ ಮತದಾನ; ಹಕ್ಕು ಚಲಾಯಿಸಿದ ಅನಿಲ್ ಕುಂಬ್ಳೆ

  • ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ದೇಶಾದ್ಯಂತ ಶುಕ್ರವಾರ 88 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 14 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಟೀಮ್‌ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್ ಮತದಾನ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಏಪ್ರಿಲ್‌ 26ರ ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇಂದು ಬೆಳಿಗ್ಗೆ ಮತದಾನ ಪ್ರಾರಂಭವಾದ ಸ್ವಲ್ಪ ಸಮಯದ ನಂತರ ಅವರು ಡಾಲರ್ಸ್ ಕಾಲೊನಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 
icon

(1 / 6)

ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, “ಮತದಾನವು ಸುಗಮವಾಗಿ ನಡೆಯಿತು. ಮತದಾನ ಪ್ರಕ್ರಿಯೆಯು ತುಂಬಾ ಸರಳವಾಗಿತ್ತು. ನಮ್ಮ ಪ್ರಜಾಪ್ರಭುತ್ವವನ್ನು ಮುಂದಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಪ್ರತಿಯೊಬ್ಬರೂ ಬಂದು ಮತ ಚಲಾಯಿಸಬೇಕು” ಎಂದು ಒತ್ತಾಯಿಸಿದರು.
icon

(2 / 6)

ಬೆಂಗಳೂರಿನಲ್ಲಿ ಈ ಬಾರಿ ಮತದಾನದ ಪ್ರಮಾಣ ಮೊದಲಿಗಿಂತ ಹೆಚ್ಚಾಗಲಿದೆ ಎಂದು ರಾಹುಲ್ ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದರು. “ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚಿನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಾರೆ ಎಂಬುದು ನನ್ನ ಭರವಸೆ. ಅನೇಕರು ಮೊದಲ ಬಾರಿಗೆ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಯುವಕರು ಮತ ಚಲಾಯಿಸಲು ಮುಂದೆ ಬಂದರೆ ತುಂಬಾ ಒಳ್ಳೆಯದು,” ಎಂದು ಅಭಿಪ್ರಾಯಪಟ್ಟರು.
icon

(3 / 6)

ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಬೆಂಗಳೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
icon

(4 / 6)

ನಾರಾಯಣ ಮೂರ್ತಿ ಅವರೊಂದಿಗೆ‌ ಅವರ ಪತ್ನಿ ಹಾಗೂ ಲೇಖಕಿ ಸುಧಾಮೂರ್ತಿ ಕೂಡ ಮತ ಚಲಾಯಿಸಿದರು.
icon

(5 / 6)

ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಮತದಾನದ ಹಕ್ಕು ಚಲಾಯಿಸಿದರು.
icon

(6 / 6)

ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಮತದಾನದ ಹಕ್ಕು ಚಲಾಯಿಸಿದರು.

IPL_Entry_Point

ಇತರ ಗ್ಯಾಲರಿಗಳು