Ganesh Chaturthi 2022: ಗಣೇಶ ಚತುರ್ಥಿ ಬಗ್ಗೆ ಬಹುಶಃ ನಿಮಗೆ ಗೊತ್ತಿರದ 6 ಅಂಶಗಳಿವು…
- Ganesh Chaturthi 2022: ಗಣೇಶನ ಹಬ್ಬ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ಅನೇಕ ವಿಚಾರಗಳು ಗಮನಸೆಳೆಯುವುದು ಸಹಜ. ಆದಾಗ್ಯೂ ಕೆಲವು ಅಂಶಗಳು ಅದರಲ್ಲೂ ವಿಶೇಷವಾಗಿ ಬಹುಶಃ ಈ 6 ಅಂಶಗಳು ನಿಮಗೆ ಗೊತ್ತಿಲ್ಲದೇ ಇರುವುದು ಆಗಿರಬಹುದು ಗಮನಿಸಿ.
- Ganesh Chaturthi 2022: ಗಣೇಶನ ಹಬ್ಬ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ಅನೇಕ ವಿಚಾರಗಳು ಗಮನಸೆಳೆಯುವುದು ಸಹಜ. ಆದಾಗ್ಯೂ ಕೆಲವು ಅಂಶಗಳು ಅದರಲ್ಲೂ ವಿಶೇಷವಾಗಿ ಬಹುಶಃ ಈ 6 ಅಂಶಗಳು ನಿಮಗೆ ಗೊತ್ತಿಲ್ಲದೇ ಇರುವುದು ಆಗಿರಬಹುದು ಗಮನಿಸಿ.
(1 / 7)
ಗಣೇಶನಿಗೆ ಸಮರ್ಪಿತವಾದ 10 ದಿನಗಳ ಕಾಲ ಹಬ್ಬ ಗಣೇಶೋತ್ಸವ. ಇದರಲ್ಲಿ ಗಣೇಶ ಚತುರ್ಥಿಗೆ ಪ್ರಾಮುಖ್ಯತೆ ಹೆಚ್ಚು. ಈ ವರ್ಷ ಆಗಸ್ಟ್ 31 ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಚಂದ್ರನ ಚಲನೆಗೆ ಅನುಗುಣವಾದ ಕ್ಯಾಲೆಂಡರ್ ತಿಂಗಳ ಭಾದ್ರಪದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಇದು ಭಾರತದಲ್ಲಿ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನ ಬಗ್ಗೆ ನೀವು ತಿಳಿದುಕೊಳ್ಳಲು ಇಷ್ಟಪಡುವ ಆರು ವಿಚಾರಗಳು ಇಲ್ಲಿವೆ.(AFP)
(2 / 7)
ಗಣೇಶ ಚತುರ್ಥಿಯ ದಿನವೇ ವಿಘ್ನನಾಶಕ ಎಂದೇ ಗುರುತಿಸಲ್ಪಡುವ ಗಣನಾಯಕನ ದಿನವಾಗಿ ಗುರುತಿಸಲ್ಪಡುತ್ತಿದೆ. ಭಗವಾನ್ ಶಿವ ಮತ್ತು ಪಾರ್ವತಿ ದೇವಿಯರ ಪುತ್ರೀ ವಿನಾಯಕ. (ANI)
(3 / 7)
ಭಗವಾನ್ ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಎಂಬುದು ನಂಬಿಕೆ. ಆದ್ದರಿಂದ ಗಣೇಶ ಚತುರ್ಥಿಯ ಹಬ್ಬವನ್ನು ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ತಿಂಗಳ ಭಾದ್ರಪದದಲ್ಲಿ ಆಚರಿಸಲಾಗುತ್ತದೆ, ಇದು ಶುಕ್ಲ ಚತುರ್ಥಿಯಂದು ಪ್ರಾರಂಭವಾಗುತ್ತದೆ.(HT Photo/Sunil Ghosh)
(4 / 7)
ಷೋಡಶೋಪಚಾರವು ಗಣೇಶ ಚತುರ್ಥಿಯ ಒಂದು ಆಚರಣೆ. ಇದು ಗಣೇಶನಿಗೆ 16 ವಿಧದ ಗೌರವವನ್ನು ಸಲ್ಲಿಸುತ್ತದೆ. ಪೂಜಾ ಹಂತಗಳಲ್ಲಿ ಆವಾಹನ, ಪ್ರತಿಷ್ಠಾಪನ, ಆಸನ ಸಮರ್ಪಣ, ಅರ್ಘ್ಯ ಸಮರ್ಪಣ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ ಸಮಪಾನ, ಯಜ್ಞೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಮತ್ತು ತಾಂಬೂಲ ಸಮರ್ಪಣೆ ಇದರಲ್ಲಿ ಸೇರಿವೆ.(AFP)
(5 / 7)
ಗಣೇಶನಿಗೆ ಮೋದಕ ಎಂದರೆ ಅಚ್ಚುಮೆಚ್ಚು. ಹೀಗಾಗಿ ಪ್ರಸಾದ ರೂಪದಲ್ಲಿ ಭಕ್ತರು ಅದನ್ನೆ ಆತನಿಗೆ ನೈವೇದ್ಯ ಮಾಡುತ್ತಾರೆ. ಭಗವಂತನಿಗೆ 'ಭೋಗ್' ಎಂದು ಅರ್ಪಿಸುವ ಮತ್ತು ಪ್ರಸಾದವಾಗಿ ಬಡಿಸುವ ಮತ್ತೊಂದು ಜನಪ್ರಿಯ ಸಿಹಿತಿಂಡಿ ಪುರನ್ ಪೋಲಿ. (PTI)
(6 / 7)
ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಸ್ನಾನ ಮಾಡುವಾಗ ತನ್ನ ದೇಹದ ಮೇಲೆ ಸಿಕ್ಕ ಮಣ್ಣಿನಿಂದ ಗಣೇಶನನ್ನು ಸೃಷ್ಟಿಸಿದಳು. ಸ್ನಾನ ಮುಗಿಯುವವರೆಗೆ ತನ್ನ ಬಾಗಿಲನ್ನು ಕಾಯುವಂತೆ ಆತನಿಗೆ ಆದೇಶಿಸಿದ್ದಳು. ಶಿವನು ದೂರ ಹೋಗಿರುವುದು ಗಣೇಶನಿಗೆ ತಿಳಿದಿರಲಿಲ್ಲ, ಆದ್ದರಿಂದ ಶಿವ ವಾಪಸ್ ಬಂದಾಗ, ಮನೆ ಒಳಗೆ ಪ್ರವೇಶಕ್ಕೆ ಗಣೇಶ ಅನುಮತಿಸಲಿಲ್ಲ. ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಗಣೇಶನ ಶಿರಚ್ಛೇದ ಮಾಡಿ ಮನೆಯೊಳಗೆ ಪ್ರವೇಶಿಸಿದನು. ಇದನ್ನು ತಿಳಿದ ಪಾರ್ವತಿ ಕೋಪಗೊಂಡಳು. ಬಳಿಕ ಶಿವನು, ಉತ್ತರಕ್ಕೆ ತಲೆ ಇಟ್ಟು ಮಲಗಿದವರ ತಲೆ ತರುವಂತೆ ಗಣಗಳಿಗೆ ಹೇಳಿದ. ಆದರೆ ಅವರಿಗೆ ಉತ್ತರಕ್ಕೆ ತಲೆ ಇಟ್ಟು ಮಲಗಿದ ಆನೆಯ ಹೊರತು ವ್ಯಕ್ತಿಯ ತಲೆ ಸಿಗಲಿಲ್ಲ. ಕೊನೆಗೆ ಆನೆಯ ತಲೆಯನ್ನೇ ತಂದು ಕೂರಿಸಿ ಗಣೇಶನಿಗೆ ಮರುಜೀವ ನೀಡಲಾಯಿತು. (ANI)
ಇತರ ಗ್ಯಾಲರಿಗಳು