ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

Summer Health: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡುವ 10 ಯೋಗಾಸನಗಳಿವು

  • ಎಲ್ಲಾ ಋತುಮಾನಗಳಲ್ಲಿಯೂ ನಮ್ಮ ದೇಹ ಫಿಟ್‌ ಆಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಬೇಸಿಗೆಯಲ್ಲಿ ಅತಿಯಾಗಿ ವರ್ಕೌಟ್‌ ಮಾಡುವುದು ಅಸಾಧ್ಯ. ಬೇಸಿಗೆಯಲ್ಲಿ ದೇಹವನ್ನು ಕೂಲ್‌ ಆಗಿರಿಸಿ, ಚೈತನ್ಯ ಹೆಚ್ಚುವಂತೆ ಮಾಡಲು ಕೆಲವು ಯೋಗಾಸನಗಳು ನಮಗೆ ಸಹಾಯ ಮಾಡುತ್ತವೆ. ಅಂತಹ 10 ಯೋಗಾಸನಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಆಸನಗಳ ಪ್ರಯೋಜನ ತಿಳಿಯಿರಿ. 

ಬಿರು ಬೇಸಿಗೆಯಲ್ಲಿ ದೇಹ ತಂಪಾಗಿಸುವ ಮಾರ್ಗಗಳನ್ನು ಹುಡುಕುವುದು ಆಹಾರ. ತಂಪು ಪಾನೀಯಗಳು, ಮಜ್ಜಿಗೆ, ಕಲ್ಲಂಗಡಿ ಹಣ್ಣು, ನಿಂಬೆ ಪಾನಕ ಮುಂತಾದವುಗಳ ಸೇವನೆಯಿಂದ ದೇಹ ತಂಪಾಗುವುದು ಸಹಜ. ಇದರೊಂದಿಗೆ ಈ ಕೆಲವು ಯೋಗಾಭ್ಯಾಸಗಳನ್ನೂ ರೂಢಿಸಿಕೊಳ್ಳಿ. ಇದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ವಿಶ್ರಾಂತ ಭಾವ ದೊರೆಯುವ ಜೊತೆಗೆ ಒತ್ತಡವೂ ಕಡಿಮೆಯಾಗುತ್ತದೆ. 
icon

(1 / 12)

ಮತ್ಸ್ಯಾಸನ: ಇದನ್ನು ಮೀನಿನ ಭಂಗಿ ಎಂದೂ ಕರೆಯುತ್ತಾರೆ. ಈ ಆಸನವು ದೇಹಕ್ಕೆ ಹಲವು ಬಗೆಯ ಪ್ರಯೋಜನಗಳನ್ನು ನೀಡುತ್ತದೆ. ಇದು ಒತ್ತಡವನ್ನು ನಿವಾರಿಸುತ್ತದೆ. ಕುತ್ತಿಗೆಯ ಭಾಗವನ್ನು ಹಿಗ್ಗಿಸುವ ಮೂಲಕ ದೇಹವನ್ನು ರಿಲ್ಯಾಕ್ಸ್‌ ಮಾಡುತ್ತದೆ. ಉಸಿರಾಟವನ್ನು ಉತ್ತಮವಾಗಿಸಿ, ದೇಹಕ್ಕೆ ವಿಶ್ರಾಂತಿ ಒದಗಿಸುತ್ತದೆ. 
icon

(2 / 12)

ವೃಕ್ಷಾಸನ: ಇದನ್ನು ಟ್ರೀ ಪೋಸ್‌ ಎಂದೂ ಕರೆಯುತ್ತಾರೆ. ಇದು ಒಟ್ಟಾರೆ ದೇಹಕ್ಕೆ ಪ್ರಯೋಜನ ನೀಡುತ್ತದೆ. ಈ ಭಂಗಿಯು ದೇಹದಲ್ಲಿ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ. ಕಾಲಿನ ಸ್ನಾಯು, ಒಳತೊಡೆಯ ಭಾಗವನ್ನು ಸದೃಢವಾಗಿಸುತ್ತದೆ. ಇದು ಮನಸ್ಸು ಶಾಂತವಾಗುವಂತೆ ಮಾಡಿ, ಗಮನಶಕ್ತಿ ಹೆಚ್ಚುವಂತೆ ಮಾಡುತ್ತದೆ. 
icon

(3 / 12)

ಶವಾಸನ: ಇದು ನೇರವಾಗಿ ನೆಲದ ಮೇಲೆ ಮಲಗುವ ಭಂಗಿಯಾಗಿದೆ. ಬೆನ್ನು ನೆಲಕ್ಕೆ ಊರಿ ಮಲಗಿ, ಕೈಗಳನ್ನು ಬದಿಗೆ ಇರಿಸುವುದು. ಇದು ಮನಸ್ಸನ್ನು ಶಾಂತಗೊಳಿಸುವ ಜೊತೆಗೆ ವಿಶ್ರಾಂತಿಗೂ ಸಹಾಯ ಮಾಡುತ್ತದೆ. ಈ ಭಂಗಿಯು ದೇಹವು ಒತ್ತಡವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
icon

(4 / 12)

ಪದ್ಮಾಸನ: ಇದನ್ನು ಕಮಲದ ಭಂಗಿ ಎಂದೂ ಕರೆಯುತ್ತಾರೆ. ಇದು ದೇಹದ ಮೂಲ ಚಕ್ರವನ್ನ ಸಮತತೋಲನಗೊಳಿಸಲು ಉತ್ತಮ ಆಸನವಾಗಿದೆ. ಇದು ಸ್ಥಿರತೆ ಮತ್ತು ಭದ್ರತೆಯ ಭಾವನೆಗಳೊಂದಿಗೆ ಸಂಪರ್ಕ ಹೊಂದಿದೆ. ಇದು ದೇಹದಲ್ಲಿ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಆ ಮೂಲಕ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಾನಸಿಕ ಯೋಗಕ್ಷೇಮ ವೃದ್ಧಿಗೂ ಸಹಕಾರಿ. 
icon

(5 / 12)

ಸುಖಾಸನ: ಇದು ಸುಲಭವಾಗಿ ಹಾಗೂ ಸರಳವಾಗಿ ಮಾಡಬಹುದಾದ ಆಸನ. ಇದಕ್ಕೆ ಸುಲಭ ಭಂಗಿ ಎಂದೂ ಕರೆಯಲಾಗುತ್ತದೆ. ಧ್ಯಾನ ಮಾಡಲು ಬಳಸುವ ಭಂಗಿ ಇದಾಗಿದೆ. ಈ ಭಂಗಿಯು ದೇಹಕ್ಕೆ ವಿಶ್ರಾಂತಿ ಒದಗಿಸುವುದು ಮಾತ್ರವಲ್ಲ ಏಕಾಗ್ರತೆ ಹೆಚ್ಚಲು ಕೂಡ ಸಹಾಯ ಮಾಡುತ್ತದೆ. 
icon

(6 / 12)

ಮಾರ್ಜರಿಯಾಸನ: ಮಾರ್ಜಿರಿಯಾಸನವನ್ನು ಬೆಕ್ಕಿನ ಭಂಗಿ ಎಂದೂ ಕರೆಯುತ್ತಾರೆ. ಇಂದು ಎಂಡಾರ್ಫಿನ್‌ ಹಾರ್ಮೋನ್‌ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸನ್ನು ಶಾಂತಗೊಳಿಸುತ್ತದೆ. ಈ ಆಸನವು ಕುತ್ತಿಗೆಯ ಭಾಗದಿಂದ ಒತ್ತಡವನ್ನು ನಿವಾರಿಸುತ್ತದೆ. ದೇಹದ ಉಷ್ಣತೆ ನಿಯಂತ್ರಿಸುವ ಈ ವ್ಯಾಯಾಮವು ಬೇಸಿಗೆಗೆ ಹೇಳಿ ಮಾಡಿಸಿದ ಭಂಗಿ.
icon

(7 / 12)

ಬುದ್ಧಕೋನಾಸನ: ಚಿಟ್ಟೆ ಭಂಗಿ ಎಂದೂ ಈ ಭಂಗಿಯನ್ನು ಕರೆಯಲಾಗುತ್ತದೆ. ಇದು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವಾಗಿದೆ. ಬೆನ್ನುಮೂಳೆಯನ್ನು ಹಿಗ್ಗಿಸಲು ಇದು ಸಹಾಯ ಮಾಡುತ್ತದೆ. ಇದು ದೇಹದಿಂದ ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. 
icon

(8 / 12)

ಉಸ್ತ್ರಾಸನ: ಇದನ್ನು ಒಂಟೆ ಭಂಗಿ ಎಂದೂ ಕರೆಯಲಾಗುತ್ತದೆ. ಇದು ಶಕ್ತಿಯುತ ಭಂಗಿಯಾಗಿದ್ದು, ಕೆಳಬೆನ್ನಿನ ಬಿಗಿತವನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡದ ಆರೋಗ್ಯ ಸುಧಾರಣೆ ಮಾತ್ರವಲ್ಲ, ಒಟ್ಟಾರೆ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮ ಸುಧಾರಿಸಲು ಸಹಕಾರಿ. 
icon

(9 / 12)

ನೌಕಾಸನ: ಪರಿಪೂರ್ಣ ನವಾಸನ ಅಥವಾ ದೋಣಿ ಭಂಗಿ ಎಂದು ಇದನ್ನು ಕರೆಯುತ್ತಾರೆ. ಇದು ದೇಹ ಹಾಗೂ ಮನಸ್ಸು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ಇದು ಕೋರ್‌ ಸ್ನಾಯುಗಳನ್ನು ಗುರಿಯಾಗಿಸುವ ಭಂಗಿಯಾಗಿದೆ. ಇದು ಕಾಲಾಂತರದಲ್ಲಿ ದೇಹದ ಸ್ನಾಯುಗಳು ಟೋನ್‌ ಆಗಲು ಸಹಾಯ ಮಾಡುತ್ತದೆ. 
icon

(10 / 12)

ವೀರಭದ್ರಾಸನ: ಈ ಆಸನವನ್ನು ಯೋಧ ಭಂಗಿ ಎಂದೂ ಕರೆಯಲಾಗುತ್ತದೆ. ಇದು ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಸ್ನಾಯುಗಳನ್ನು ಟೋನ್‌ ಮಾಡುವ ಜೊತೆಗೆ ಹೊಟ್ಟೆಯ ಪ್ರದೇಶದಲ್ಲಿ ಕೋರ್‌ ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹದ ಸಮತೋಲನವನ್ನು ಉತ್ತೇಜಿಸಲು ಇದು ಉತ್ತಮ ಆಸನ. 
icon

(11 / 12)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

IPL_Entry_Point

ಇತರ ಗ್ಯಾಲರಿಗಳು