ಚಪಾತಿ ಮಾಡುವಾಗ ಗೋಧಿಹಿಟ್ಟಿನೊಂದಿಗೆ ಈ ಪದಾರ್ಥಗಳನ್ನ ಮಿಶ್ರಣ ಮಾಡಿ, ಕೆಲವೇ ದಿನಗಳಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ-health tips remedies for cholesterol control mix this ingredients with wheat flour while making chapati rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಪಾತಿ ಮಾಡುವಾಗ ಗೋಧಿಹಿಟ್ಟಿನೊಂದಿಗೆ ಈ ಪದಾರ್ಥಗಳನ್ನ ಮಿಶ್ರಣ ಮಾಡಿ, ಕೆಲವೇ ದಿನಗಳಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ

ಚಪಾತಿ ಮಾಡುವಾಗ ಗೋಧಿಹಿಟ್ಟಿನೊಂದಿಗೆ ಈ ಪದಾರ್ಥಗಳನ್ನ ಮಿಶ್ರಣ ಮಾಡಿ, ಕೆಲವೇ ದಿನಗಳಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ

  • ಇತ್ತೀಚಿನ ದಿನಗಳಲ್ಲಿ ಜೀವನಶೈಲಿಗೆ ಸಂಬಂಧಿಸಿ ಒಂದಿಲ್ಲೊಂದು ಕಾಯಿಲೆಗಳು ಜನರನ್ನು ಕಾಡುತ್ತಿವೆ. ಅದಕ್ಕಾಗಿ ಹಲವರು ಡಯೆಟ್‌ ಪಾಲಿಸುತ್ತಿದ್ದಾರೆ. ಹೆಚ್ಚಿನವರು ತಮ್ಮ ಆಹಾರಕ್ರಮದಲ್ಲಿ ಚಪಾತಿಯನ್ನು ಸೇರಿಸುತ್ತಾರೆ. ಚಪಾತಿ ಮಾಡುವಾಗ ಈ ಪದಾರ್ಥಗಳನ್ನು ಸೇರಿಸಿದ್ರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತೆ, ಮಾತ್ರವಲ್ಲ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತೆ. 

ಜಡಜೀವನಶೈಲಿ ಹಾಗೂ ಅಸರ್ಮಪಕ ಆಹಾರ ಪದ್ಧತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗುವುದು ಅಪಾಯ. ಇದರಿಂದ ಹೃದ್ರೋಗ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು. 
icon

(1 / 13)

ಜಡಜೀವನಶೈಲಿ ಹಾಗೂ ಅಸರ್ಮಪಕ ಆಹಾರ ಪದ್ಧತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಏರಿಕೆಯಾಗುವುದು ಅಪಾಯ. ಇದರಿಂದ ಹೃದ್ರೋಗ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು. (PC: Canva)

ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗೆ ಡಯೆಟ್ ಹಾಗೂ ವ್ಯಾಯಾಮಗಳೇ ಮದ್ದು.ಕೊಲೆಸ್ಟ್ರಾಲ್, ಮಧುಮೇಹದಂತಹ ಆರೋಗ್ಯ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮದಲ್ಲಿ ಚಪಾತಿ ತಿನ್ನುವುದನ್ನು ರೂಢಿಸಿಕೊಂಡಿರುತ್ತಾರೆ.
icon

(2 / 13)

ನೀವು ಪ್ರತಿದಿನ ಚಪಾತಿ ಮಾಡುವಾಗ ಗೋಧಿಹಿಟ್ಟಿಗೆ ಈ ಕೆಲವು ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ  ಕೊಲೆಸ್ಟ್ರಾಲ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. 
icon

(3 / 13)

ಹಾಗಾದರೆ ಚಪಾತಿ ಹಿಟ್ಟಿಗೆ ಯಾವೆಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಬೇಕು ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ವಿವರ ಇಲ್ಲಿದೆ. 
icon

(4 / 13)

ಅಗಸೆ ಬೀಜದ ಪುಡಿ: ಹೆಚ್ಚುತ್ತಿರುವ ಕೊಲೆಸ್ಟ್ರಾಲ್  ನಿಯಂತ್ರಿಸಲು ಅಗಸೆ ಬೀಜದ ಪುಡಿ ತುಂಬಾ ಪ್ರಯೋಜನಕಾರಿ. ಅಗಸೆ ಬೀಜಗಳನ್ನು ಹುರಿದು ಒಣಗಿಸಿ. ಚಪಾತಿ, ಪೂರಿ, ದೋಸೆ, ಉಪ್ಪಿಟ್ಟುಗಳನ್ನು ಮಾಡುವಾಗ ಅಗಸೆ ಹಿಟ್ಟನ್ನು ಹಾಕಿ ಚೆನ್ನಾಗಿ ಕಲಸಿ. ಅವುಗಳ ಜೊತೆ ಚಪಾತಿ, ದೋಸೆ ಮಾಡಿ ತಿಂದರೆ ತುಂಬಾ ಒಳ್ಳೆಯದು.
icon

(5 / 13)

ಅಗಸೆಬೀಜದ ಪುಡಿಯನ್ನು ನಿಮ್ಮ ಆಹಾರದ ಭಾಗವಾಗಿ ಸೇರಿಸಿಕೊಳ್ಳುವುದರಿಂದ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಇವು ರಕ್ತನಾಳಗಳು ಮುಚ್ಚಿಹೋಗದಂತೆ ತಡೆಯುತ್ತದೆ.
icon

(6 / 13)

ಇಸಬ್ಗೋಲ್ ಹಿಟ್ಟು: ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಣದಲ್ಲಿಡಬಹುದು ಎಂದು ವೈದ್ಯರು ಹೇಳುತ್ತಾರೆ. ನಾರಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆಯಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದಕ್ಕೆ ಉತ್ತಮ ಆಯ್ಕೆ ಇಸಬ್ಗೋಲ್ ಪುಡಿ.
icon

(7 / 13)

ಇಸಬ್ಗೋಲ್ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆನ್‌ಲೈನ್ ಮಾರುಕಟ್ಟೆಯಲ್ಲೂ ಲಭ್ಯವಿದೆ. ಚಪಾತಿ ಮಾಡುವ ಮುನ್ನ ಗೋಧಿ‌ಹಿಟ್ಟಿಗೆ ಇದನ್ನು ಒಂದು ಚಮಚ ಸೇರಿಸಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ.
icon

(8 / 13)

ಓಟ್ಸ್‌ ಪುಡಿ: ಓಟ್ಸ್ ಅನ್ನು ಹುರಿದು ಪುಡಿ ಮಾಡಿ ಇಟ್ಟುಕೊಳ್ಳಿ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗೋಧಿ ಹಿಟ್ಟು ಮತ್ತು ದೋಸೆ ಹಿಟ್ಟಿಗೆ ಓಟ್ಸ್ ಪುಡಿಯನ್ನು ಬೆರೆಸುವುದು ಉತ್ತಮ ವಿಧಾನ. ಇದು ನಿಮ್ಮ ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. 
icon

(9 / 13)

ಓಟ್ಸ್ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಮಧುಮೇಹ, ಬಿಪಿ ಮತ್ತು ಬೊಜ್ಜು ಮುಂತಾದ ರೋಗಗಳನ್ನು ತಡೆಗಟ್ಟುವಲ್ಲಿ ಇದು ತುಂಬಾ ಪ್ರಯೋಜನಕಾರಿ.
icon

(10 / 13)

ಹುರುಳಿ ಹಿಟ್ಟು: ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಗೋಧಿಹಿಟ್ಟಿಗೆ ಹುರುಳಿ ಹಿಟ್ಟನ್ನು ಕೂಡ ಸೇರಿಸಬಹುದು . ಹಿಟ್ಟಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಗೋಧಿಹಿಟ್ಟಿಗೆ ಸ್ವಲ್ಪ ಹುರುಳಿ ಹಿಟ್ಟನ್ನು ಸೇರಿಸುವುದರಿಂದ ರೊಟ್ಟಿ ಅಥವಾ ಚಪಾತಿ ರುಚಿಯಾಗಿ ಮತ್ತು ಹೆಚ್ಚು ಪೌಷ್ಟಿಕವಾಗಿ ತಿನ್ನಲು ಯೋಗ್ಯವಾಗಿರುತ್ತದೆ. ಈ ಚಪಾತಿ ಮತ್ತು ರೊಟ್ಟಿಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
icon

(11 / 13)

ಅಗಸೆ ಬೀಜದ ಪುಡಿ, ಹುರುಳಿಹಿಟ್ಟನ್ನು ನೇರವಾಗಿ ತಿನ್ನಲು ಕಷ್ಟವಾಗುತ್ತದೆ. ಇದು ಬಾಯಿಗೂ ರುಚಿಸುವುದರಿಂದ ಆ ಕಾರಣಕ್ಕೆ ಇದನ್ನು ದೋಸೆ ಹಿಟ್ಟು ಅಥವಾ ಚಪಾತಿ ಮಾಡುವಾಗ ಗೋಧಿಹಿಟ್ಟಿಗೆ ಮಿಶ್ರಣ ಮಾಡುವುದು ಉತ್ತಮ. 
icon

(12 / 13)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(13 / 13)

ಇತರ ಗ್ಯಾಲರಿಗಳು