ಸ್ಯಾನಿಟರಿ ನ್ಯಾಪ್‌ಕಿನ್, ಟ್ಯಾಂಪೂನ್‌ಗೂ ಎಕ್ಸ್‌ಪೈರಿ ಡೇಟ್ ಇರುತ್ತಾ, ಅವಧಿ ಮುಗಿದ ಮೇಲೆ ಬಳಸಿದ್ರೆ ಎದುರಾಗುವ ಅಪಾಯಗಳಿವು
ಮಹಿಳೆಯರಿಗೆ ಅತ್ಯವಶ್ಯ ವಸ್ತುಗಳಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್, ಟ್ಯಾಂಪೂನ್‌ಗಳು ಕೂಡ ಒಂದು. ಮುಟ್ಟಿನ ದಿನಗಳಲ್ಲಿ ಬಳಸುವ ಈ ವಸ್ತುಗಳನ್ನು ಮನೆಯಲ್ಲಿ ದಿನಸಿ ಸಂಗ್ರಹಿಸಿದಂತೆ ತಂದು ಇಡುತ್ತಾರೆ. ಆದರೆ ಇವುಗಳಿಗೂ ಎಕ್ಸ್‌ಪೈರಿ ಡೇಟ್ ಇರುತ್ತಾ, ಅವಧಿ ಮುಗಿದ ಪ್ಯಾಡ್ ಅಥವಾ ಟ್ಯಾಂಪೂನ್ ಬಳಸುವುದರಿಂದ ಏನಾಗುತ್ತದೆ ನೋಡಿ.
(1 / 8)
ಮುಟ್ಟಿನ ದಿನಗಳಲ್ಲಿ ಮಹಿಳೆಯರು ಪ್ಯಾಡ್, ಟ್ಯಾಂಪೂನ್, ಮೆನ್ಸ್ಟ್ರವಲ್ ಕಪ್, ಪೀರಿಯಡ್ ಪ್ಯಾಂಟಿ ಮುಂತಾದವುಗಳನ್ನು ಬಳಸುವುದು ಸಾಮಾನ್ಯ. ಪೀರಿಯಡ್ಸ್ ಸಮಯದಲ್ಲಿ ಬಳಸುವ ಈ ವಸ್ತುಗಳು ರಕ್ತಸ್ರಾವವನ್ನು ಹೀರಿಕೊಳ್ಳಲು ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಮಹಿಳೆಯರಿಗೆ ಅವಶ್ಯ ವಸ್ತುಗಳಲ್ಲಿ ಒಂದು. ಆ ಕಾರಣಕ್ಕೆ ಬಹುತೇಕರು ಮನೆಯಲ್ಲಿ ತಂದು ಸಂಗ್ರಹಿಸುತ್ತಾರೆ. ಆದರೆ ಬೇರೆಲ್ಲಾ ವಸ್ತುಗಳಂತೆ ಇದಕ್ಕೂ ಎಕ್ಸ್‌ಪೈರಿ ಡೇಟ್ ಇದ್ಯಾ, ಅವಧಿ ಮುಗಿದ ಮೇಲೆ ಇವುಗಳನ್ನು ಬಳಸೋದು ಅಪಾಯನಾ, ಇದರಿಂದ ಏನಾದ್ರೂ ಅಡ್ಡಪರಿಣಾಮಗಳು ಇವೆಯೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. (shutterstock)
(2 / 8)
ಹೆಚ್ಚಿನ ಸಂದರ್ಭಗಳಲ್ಲಿ, ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ಆರೋಗ್ಯಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದರ ಹೊರತಾಗಿಯೂ, ಅನೇಕ ಅಧ್ಯಯನಗಳು ಇದನ್ನು ಎಚ್ಚರಿಕೆಯಿಂದ ಬಳಸಲು ಸಲಹೆ ನೀಡುತ್ತವೆ. ಕಾರಣ ಹೀಗಿದೆ.(shutterstock)
(3 / 8)
ಸ್ಯಾನಿಟರಿ ಪ್ಯಾಡ್‌ಗಳ ಎಕ್ಸ್‌ಪೈರಿ ದಿನಾಂಕ: ಪ್ಯಾಡ್ ತಯಾರಿಕೆ ಮತ್ತು ಮುಕ್ತಾಯ ದಿನಾಂಕವನ್ನು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್ ಮೇಲೆ ಬರೆಯಲಾಗುತ್ತದೆ. ಈ ದಿನಾಂಕವು ಉತ್ಪನ್ನವು ಪರಿಣಾಮಕಾರಿ, ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿ ಉಳಿಯಲು ಖಾತರಿಪಡಿಸುವ ಅವಧಿಯನ್ನು ಸೂಚಿಸುತ್ತದೆ. ಮಾರುಕಟ್ಟೆಯಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುವಾಗ ಅಥವಾ ಬಳಸುವಾಗ, ಪ್ಯಾಕೆಟ್ ಮೇಲಿರುವ ಮುಕ್ತಾಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿ. (shutterstock)
(4 / 8)
ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಟ್ಯಾಂಪೂನ್‌ಗಳು ಸಾಮಾನ್ಯವಾಗಿ ಐದು ವರ್ಷಗಳ ಕಾಲ ಬಳಸಬಹುದು, ಅಂದರೆ ಇದಕ್ಕೆ 5 ವರ್ಷಗಳ ಏಕ್ಸ್‌ಪೈರಿ ಡೇಟ್ ಇರುತ್ತದೆ. ಆದರೆ ಮುಟ್ಟಿನ ಕಪ್‌ಗಳು ಕೆಲವು ವರ್ಷಗಳವರೆಗೆ ಬಳಕೆ ಬರುತ್ತದೆ. ಆದರೆ ಪ್ರತಿ 1 ಅಥವಾ 2 ವರ್ಷಗಳಿಗೊಮ್ಮೆ ಕಪ್ ಅನ್ನು ಬದಲಿಸಲು ಸಲಹೆ ನೀಡಲಾಗುತ್ತದೆ. ವಿಶೇಷವಾಗಿ ಅದರಲ್ಲಿ ಯಾವುದೇ ರಂಧ್ರಗಳು ಅಥವಾ ಬಿರುಕುಗಳು ಇದ್ದಲ್ಲಿ ತಪ್ಪದೇ ಬದಲಿಸಬೇಕು. ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಹಳೆಯ ಅವಧಿ ಮುಗಿದ ಉತ್ಪನ್ನಗಳನ್ನ ಬಳಸುವುದು ತಪ್ಪು. (shutterstock)
(5 / 8)
ಅವಧಿ ಮೀರಿದ ಪ್ಯಾಡ್ ಅಥವಾ ಟ್ಯಾಂಪೂನ್ ಬಳಸಿದ್ರೆ ಅಂಡಾಶಯದಲ್ಲಿ ಕ್ಯಾನ್ಸರ್, ಬಂಜೆತನ, ಹಾರ್ಮೋನ್ ಅಪಸಾಮಾನ್ಯ ಕ್ರಿಯೆ, ದದ್ದುಗಳು, ಯೋನಿ ಅಲರ್ಜಿಗಳು, ಶ್ರೋಣಿಯ ಪ್ರದೇಶದಲ್ಲಿ ಊತ, ಥೈರಾಯ್ಡ್ ಅಪಸಾಮಾನ್ಯ ಕ್ರಿಯೆ, ಎಂಡೊಮೆಟ್ರಿಯಮ್‌ಗೆ ಸಂಬಂಧಿಸಿದ ಕಾಯಿಲೆಗಳು ಉದ್ಭವಿಸಬಹುದು. (shutterstock)
(6 / 8)
ಡಯಾಕ್ಸಿನ್ ಎಂಬ ರಾಸಾಯನಿಕವನ್ನು ಸ್ಯಾನಿಟರಿ ಪ್ಯಾಡ್‌ಗಳಿಗೆ ಬ್ಲೀಚಿಂಗ್ ಮಾಡಲು ಬಳಸಲಾಗುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಹದಗೆಡಿಸುವುದರಿಂದ ಹಿಡಿದು ಚರ್ಮದ ಕಪ್ಪಾಗುವಿಕೆ, ಶ್ರೋಣಿಯ ಉರಿಯೂತ, ಹಾರ್ಮೋನುಗಳ ಅಪಸಾಮಾನ್ಯ ಕ್ರಿಯೆ, ಮಧುಮೇಹ, ಅಂಡಾಶಯದ ಕ್ಯಾನ್ಸರ್ ಮತ್ತು ಪ್ರತಿರಕ್ಷಣಾ ಸಂಬಂಧಿತ ಸಮಸ್ಯೆಗಳವರೆಗೆ ಸಮಸ್ಯೆಗಳನ್ನು ಉಂಟುಮಾಡಬಹುದು.(shutterstock)
(7 / 8)
ಪಿರಿಯಡ್ಸ್ ಸಮಯದಲ್ಲಿ ಈ ಕೆಲಸಗಳನ್ನು ತಪ್ಪದೇ ಮಾಡಬೇಕು. ಖಾಸಗಿ ಭಾಗಗಳನ್ನು ಒಣಗಿಸಿ. ಪ್ರತಿ 5-6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸಿ. ಮೂತ್ರದ ಸೋಂಕನ್ನು ತಪ್ಪಿಸಲು ಮುಟ್ಟಿನ ದಿನಗಳಲ್ಲಿ ಸಾಕಷ್ಟು ನೀರು ಕುಡಿಯಿರಿ. ನಿಯಮಿತವಾಗಿ ಒಳ ಉಡುಪುಗಳನ್ನು ಸ್ವಚ್ಛಗೊಳಿಸಿ. ಒಳಉಡುಪುಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಒದ್ದೆ ಬಟ್ಟೆಗಳನ್ನು ಧರಿಸದಿರಿ. (shutterstock)
ಇತರ ಗ್ಯಾಲರಿಗಳು