ಕನ್ನಡ ಸುದ್ದಿ  /  Photo Gallery  /  Hindu Religion Maha Shivaratri 2024 Meaning Of Mrityunjaya Mantra Significance Of Mahamrityunjaya Mantram Mgb

Mrityunjaya Mantra: ಮೃತ್ಯುಂಜಯ ಮಂತ್ರದ ಅರ್ಥವೇನು? ಅದನ್ನು ಎಷ್ಟು ಬಾರಿ ಪಠಿಸಬೇಕು? ಇಲ್ಲಿದೆ ಉತ್ತರ

  • MahaMrityunjaya Mantra: ಶಿವನ ಆಶೀರ್ವಾದ ಪಡೆಯಲು ಹಾಗೂ ಮೃತ್ಯು ಭಯ ದೂರವಾಗಲು ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು ಎಂದು ಹಿಂದೂ ಧರ್ಮದ ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಮೃತ್ಯುಂಜಯ ಮಂತ್ರದ ಅರ್ಥವನ್ನು ತಿಳಿಯೋಣ..

ಭಗವಾನ್ ಶಿವನು ಇಷ್ಟಾರ್ಥಗಳನ್ನು ತ್ವರಿತವಾಗಿ ಪೂರೈಸುತ್ತಾನೆ ಎಂದು ಪುರಾಣಗಳು ಹೇಳುತ್ತವೆ. ಮಾರ್ಕಂಡೇಯ ಪುರಾಣ ಮತ್ತು ಶಿವಪುರಾಣದ ಪ್ರಕಾರ ಶಿವನಿಗೆ ಮರಣವನ್ನೂ ದೂರ ಮಾಡುವ ಶಕ್ತಿಯಿದೆ. ಯಾವುದೇ ವ್ಯಕ್ತಿ ಜೀವನದಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂತಹವರು ಶಿವನ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ರೋಗರುಜಿನಗಳು, ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. 
icon

(1 / 6)

ಮಹಾ ಮೃತ್ಯುಂಜಯ ಮಂತ್ರವನ್ನು ಯಾರು ಪಠಿಸುತ್ತಾರೋ ಮತ್ತು ಶಿವನಿಗೆ ಅಭಿಷೇಕವನ್ನು ಮಾಡುತ್ತಾರೋ ಅವರಿಗೆ ಶಿವನ ಆಶೀರ್ವಾದದಿಂದ ಮರಣಕ್ಕೆ ಸಂಬಂಧಿಸಿದ ಆಪತ್ತುಗಳು ದೂರವಾಗುತ್ತವೆ ಎಂದು ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.
icon

(2 / 6)

ಮಹಾಮೃತ್ಯುಂಜಯ ಮಂತ್ರ: ''ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಊರ್ವರೂಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌'' 
icon

(3 / 6)

ಮಹಾ ಮೃತ್ಯುಂಜಯ ಮಂತ್ರದ ಅರ್ಥ: ''ಜ್ಞಾನದ ದೃಷ್ಟಿ ಇರುವ ಮೂರು ಕಣ್ಣುಳ್ಳ ಭಗವಂತನು (ಶಿವನು) ನಮ್ಮಲ್ಲಿ ಅಧ್ಯಾತ್ಮ ಚಿಂತನೆಯನ್ನು ಪಕ್ವಗೊಳಿಸುವ ಮೂಲಕ ಮಾಗಿದ ಸೌತೆಕಾಯಿಯು ಬಳ್ಳಿಯಿಂದ ಕಳಚಿಕೊಳ್ಳುವಂತೆ ನಶ್ವರವಾದ ಸಂಸಾರದಿಂದ ನಮಗೆ ಮುಕ್ತಿಕೊಡಲಿ. ನಮ್ಮನ್ನು ಮೃತ್ಯು ಬಂಧದಿಂದ ಬಿಡುಗಡೆ ಮಾಡಲಿ'' ಎಂದರ್ಥ.
icon

(4 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 6)

*ಆರೋಗ್ಯ, ಸೌಂದರ್ಯ, ಜ್ಯೋತಿಷ್ಯ, ಹಬ್ಬ, ದೇಗುಲ... ಬದುಕಿನ ಸಂಭ್ರಮ ಹೆಚ್ಚಿಸುವ ಸಮಗ್ರ ಮಾಹಿತಿಗಾಗಿ "ಎಚ್‌ಟಿ ಕನ್ನಡ ಸಂಭ್ರಮ" ಕಮ್ಯುನಿಟಿಗೆ ಸೇರಲು ಲಿಂಕ್: https://chat.whatsapp.com/JD3PfTHJMw6E4n53xdjBdu
icon

(6 / 6)

IPL_Entry_Point

ಇತರ ಗ್ಯಾಲರಿಗಳು