ಸಂಗಾತಿಯಿಂದ ಸರ್ಪ್ರೈಸ್ ಸಿಗಲಿದೆ, ಭಾವನಾತ್ಮಕ ನಿರ್ಧಾರಗಳಿಂದ ಹಣಕಾಸಿನ ವಿಚಾರದಲ್ಲಿ ತೊಂದರೆಗೆ ಸಿಲುಕುವ ಸಾಧ್ಯತೆ; ನಾಳಿನ ದಿನಭವಿಷ್ಯ
ನವೆಂಬರ್ 21, ಗುರುವಾರದ ದಿನಭವಿಷ್ಯದ ಪ್ರಕಾರ 12 ರಾಶಿಯವರಿಗೆ ಮಿಶ್ರಫಲಗಳಿವೆ. ಸಂಗಾತಿಯಿಂದ ಸರ್ಪ್ರೈಸ್ ಸಿಗಲಿದೆ. ಈ ರಾಶಿಯವರು ಉದ್ಯೋಗದಲ್ಲಿ ಭಡ್ತಿ ನಿರೀಕ್ಷಿಸಬಹುದು. ಭಾವನಾತ್ಮಕ ನಿರ್ಧಾರಗಳಿಂದ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ನಾಳಿನ (ನವೆಂಬರ್ 21) ದ್ವಾದಶ ರಾಶಿಗಳ ದಿನಭವಿಷ್ಯದಲ್ಲಿ ಏನೇನಿದೆ ನೋಡಿ.
(1 / 15)
ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ನವೆಂಬರ್ 21ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ
(2 / 15)
ಮೇಷ ರಾಶಿ: ಇಂದು ನಿಮಗೆ ಉತ್ತಮ ದಿನವಾಗಲಿದೆ. ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಎದುರಾಗಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಶುರುವಾಗುತ್ತದೆ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ತಂದೆಯಿಂದ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯವಹಾರ ವಿಸ್ತರಣೆಗೆ ಅವಕಾಶವಿರಬಹುದು.
(3 / 15)
ವೃಷಭ ರಾಶಿ: ಇಂದು ಬಿಡುವಿಲ್ಲದ ದಿನವಾಗಿರಬಹುದು. ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಸೋಮಾರಿತನವನ್ನು ಬಿಡಿ. ಕೆಲಸದ ಸ್ಥಳದಲ್ಲಿ ದೊಡ್ಡ ಸಾಧನೆಗಳನ್ನು ಮಾಡುತ್ತೀರಿ. ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ. ಉದ್ಯೋಗದಲ್ಲಿರುವವರು ಕಚೇರಿ ರಾಜಕೀಯಕ್ಕೆ ಬಲಿಯಾಗಬೇಕಾಗಬಹುದು.
(4 / 15)
ಮಿಥುನ ರಾಶಿ: ಇಂದು ಲಾಭದಾಯಕ ದಿನವಾಗಲಿದೆ. ಕುಟುಂಬದ ಸದಸ್ಯರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ಮಕ್ಕಳಿಂದ ಬೆಂಬಲ ಸಿಗಲಿದೆ. ಸಂಗಾತಿಯು ನಿಮಗೆ ಸರ್ಪ್ರೈಸ್ ನೀಡಬಹುದು. ಕೆಲಸವನ್ನು ಪೂರ್ಣಗೊಳಿಸುವ ಸಲುವಾಗಿ ನೀವು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಬೇಕಾಗಬಹುದು. ವ್ಯವಹಾರದಲ್ಲಿ ತೊಂದರೆಗಳು ಎದುರಾಗಬಹುದು.
(5 / 15)
ಕಟಕ ರಾಶಿ: ಇಂದು ಹೂಡಿಕೆ ಮಾಡಲು ಯೋಗ್ಯ ದಿನವಲ್ಲ. ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಲಾಭವನ್ನು ಪಡೆಯುವಿರಿ. ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ. ಪ್ರವಾಸಕ್ಕೆ ತೆರಳುವ ಸಾಧ್ಯತೆಗಳಿವೆ. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವ್ಯಾಪಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕೆಲವು ವಿಷಯಗಳಲ್ಲಿ ಮನಸ್ಸಿನಲ್ಲಿ ಏರಿಳಿತಗಳಿರುತ್ತವೆ.
(6 / 15)
ಸಿಂಹ ರಾಶಿ: ತೊಂದರೆಯ ದಿನವಾಗಿರುತ್ತದೆ. ಸಂದರ್ಭಗಳು ಪ್ರತಿಕೂಲವಾಗಿವೆ. ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಹಣದ ವಿಷಯದಲ್ಲಿ ಜಾಗರೂಕರಾಗಿರಿ, ಇಲ್ಲದಿದ್ದರೆ ಆರ್ಥಿಕ ನಷ್ಟ ಸಂಭವಿಸಬಹುದು. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ.
(7 / 15)
ಕನ್ಯಾ ರಾಶಿ: ಇಂದು ಉತ್ತಮ ದಿನವಾಗಲಿದೆ. ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸುವರು. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತವೆ. ಕೆಲವರ ಮದುವೆಯೂ ನಿಶ್ಚಯವಾಗಬಹುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ.
(8 / 15)
ತುಲಾ ರಾಶಿ: ಇಂದು ಅದೃಷ್ಟದ ದಿನವಾಗಿರುತ್ತದೆ. ಕಳೆದಕೊಂಡ ಹಣವನ್ನು ಮರಳಿ ಪಡೆಯಬಹುದು. ಕೋಪವನ್ನು ನಿಯಂತ್ರಿಸಿ. ಭೂಮಿ, ಕಟ್ಟಡ, ವಾಹನ ಖರೀದಿ ಸಾಧ್ಯ. ಪೂರ್ವಿಕರ ಆಸ್ತಿಯಿಂದಲೂ ಲಾಭ ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ವ್ಯಾಪಾರದ ಪರಿಸ್ಥಿತಿ ಉತ್ತಮವಾಗಿರುತ್ತದೆ.
(9 / 15)
ವೃಶ್ಚಿಕ ರಾಶಿ: ನಿಮ್ಮ ಗೌರವ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹೂಡಿಕೆಗೆ ಸಂಬಂಧಿಸಿ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇಂದು ಚರ್ಚೆಯಿಂದ ಅಂತರ ಕಾಯ್ದುಕೊಳ್ಳಿ, ಇಲ್ಲದಿದ್ದರೆ ನೀವು ನ್ಯಾಯಾಲಯಕ್ಕೆ ಹೋಗಬೇಕಾಗಬಹುದು. ನೀವು ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತೀರಿ. ಸ್ನೇಹಿತರ ಸಹಾಯದಿಂದ, ಆದಾಯವನ್ನು ಹೆಚ್ಚಿಸುವ ವಿಧಾನಗಳನ್ನು ಕಂಡುಕೊಳ್ಳಬಹುದು.
(10 / 15)
ಧನು ರಾಶಿ: ಇಂದು ಒಳ್ಳೆಯ ಸುದ್ದಿ ಸಿಗಬಹುದು. ಕುಟುಂಬದಲ್ಲಿ ನಡೆಯುತ್ತಿರುವ ಯಾವುದೇ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಹಿರಿಯರಿಂದ ಆಶೀರ್ವಾದ ಪಡೆಯುವಿರಿ. ಉದ್ಯೋಗದಲ್ಲಿರುವವರಿಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಪ್ರೀತಿಯ ಜೀವನವು ಮೊದಲಿಗಿಂತ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುತ್ತದೆ.
(11 / 15)
ಮಕರ ರಾಶಿ: ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸದಲ್ಲಿ ನಿರತರಾಗಿರುವುದರಿಂದ ಸಂಸಾರಕ್ಕೆ ಸಮಯ ಸಿಗುವುದು ಸ್ವಲ್ಪ ಕಷ್ಟವಾಗುತ್ತದೆ. ಉದ್ಯೋಗ ಸಂದರ್ಶನ ಇತ್ಯಾದಿಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಸರ್ಕಾರದಿಂದ ಬೆಂಬಲ ಸಿಗಲಿದೆ.
(12 / 15)
ಕುಂಭ ರಾಶಿ: ಇಂದು ಸಂತೋಷದಿಂದ ಕೂಡಿದ ದಿನವಾಗಿರುತ್ತದೆ. ಆರ್ಥಿಕ ಲಾಭವಿರುತ್ತವೆ. ಕೆಲವರಿಗೆ ಮದುವೆಗೆ ಪ್ರಸ್ತಾಪಗಳು ಬರಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೌಶಲಗಳನ್ನು ಪ್ರಶಂಸಿಸಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ನೀವು ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಗದ್ದಲ ಇರುತ್ತದೆ.
(13 / 15)
ಮೀನ ರಾಶಿ: ಇಂದು ನಿಮಗೆ ಮಿಶ್ರ ಫಲಿತಾಂಶ ಸಿಗಲಿದೆ. ವ್ಯಾಪಾರ, ವ್ಯವಹಾರ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ನಿಮ್ಮ ಪ್ರೀತಿಯ ಜೀವನದ ಬಗ್ಗೆ ಜಾಗರೂಕರಾಗಿರಿ, ಇಲ್ಲದಿದ್ದರೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಈಗ ಹಣದ ಹೂಡಿಕೆಯನ್ನು ಮುಂದೂಡಿ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ಬರಬಹುದು.
(14 / 15)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು