In pics | ನೌಕಾಪಡೆಗೆ ಸೇರಿದ ತಾರಾಗಿರಿ ಸಮರನೌಕೆಯ ಅಂದವನ್ನೊಮ್ಮೆ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  In Pics | ನೌಕಾಪಡೆಗೆ ಸೇರಿದ ತಾರಾಗಿರಿ ಸಮರನೌಕೆಯ ಅಂದವನ್ನೊಮ್ಮೆ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ

In pics | ನೌಕಾಪಡೆಗೆ ಸೇರಿದ ತಾರಾಗಿರಿ ಸಮರನೌಕೆಯ ಅಂದವನ್ನೊಮ್ಮೆ ಚಿತ್ರಗಳಲ್ಲಿ ಕಣ್ತುಂಬಿಕೊಳ್ಳಿ

ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ ನಿರ್ಮಿಸಿದ ತಾರಾಗಿರಿ ಎಂಬ ಮೂರನೇ ಸಮರ ನೌಕೆಯನ್ನು ಇಂದು ಮುಂಬೈನಲ್ಲಿ ಲಾಂಚ್‌ ಮಾಡಲಾಯಿತು. ಭಾರತೀಯ ನೌಕಾಪಡೆಗಾಗಿ ನಿರ್ಮಾಣಗೊಂಡ ಈ ಸಮರ ನೌಕೆಯ ಬಿಡುಗಡೆ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.

ಭಾರತೀಯ ನೌಕಾಪಡೆಯು ಇಂದು ತನ್ನ ಪ್ರಾಜೆಕ್ಟ್‌೧೭ಎನಡಿ ತಾರಾಗಿರಿ ಎಂಬ ಯುದ್ಧ ನೌಕೆಯನ್ನು (ಸ್ಟ್ರೀತ್‌ ಗೈಡೆಡ್‌ ಮಿಷಲ್‌ ಫ್ರಿಗೇಟ್‌) ಲಾಂಚ್‌ ಮಾಡಿದೆ. ಈ ಯುದ್ಧ ನೌಕೆಯನ್ನು ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ್‌) ನಿರ್ಮಿಸಿದೆ. ಇದು ಪ್ರಾಜೆಕ್ಟ್‌ 17ಎನಡಿ ನಿರ್ಮಿಸಲಾದ ಮೂರನೇ ಯುದ್ಧ ನೌಕೆ.
icon

(1 / 9)

ಭಾರತೀಯ ನೌಕಾಪಡೆಯು ಇಂದು ತನ್ನ ಪ್ರಾಜೆಕ್ಟ್‌೧೭ಎನಡಿ ತಾರಾಗಿರಿ ಎಂಬ ಯುದ್ಧ ನೌಕೆಯನ್ನು (ಸ್ಟ್ರೀತ್‌ ಗೈಡೆಡ್‌ ಮಿಷಲ್‌ ಫ್ರಿಗೇಟ್‌) ಲಾಂಚ್‌ ಮಾಡಿದೆ. ಈ ಯುದ್ಧ ನೌಕೆಯನ್ನು ಮಾಝಗಾಂವ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌ (ಎಂಡಿಎಲ್‌) ನಿರ್ಮಿಸಿದೆ. ಇದು ಪ್ರಾಜೆಕ್ಟ್‌ 17ಎನಡಿ ನಿರ್ಮಿಸಲಾದ ಮೂರನೇ ಯುದ್ಧ ನೌಕೆ.(@airnewsalerts/Twitter)

ತಾರಗಿರಿ ಅಥವಾ ತಾರಾಗಿರಿ ಲಾಂಚ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಯೋಜಿಸಲಾಗಿತ್ತು. ಆದರೆ, ಇಂಗ್ಲೆಂಡ್‌ ಎರಡನೇ ಎಲಿಜಬೆತ್‌ ನಿಧನದ ಬಳಿಕ ಇಂದು ದೇಶಾದ್ಯಂತ ಶೋಕಾಚರಣೆ ನಡೆಯುತ್ತಿರುವುದರಿಂದ ಕಾರ್ಯಕ್ರಮವಿಲ್ಲದೆ ತಾರಗಿರಿಯನ್ನು ಲಾಂಚ್‌ ಮಾಡಲಾಗಿದೆ. ಸಮುದ್ರದ ಉಬ್ಬರವಿಳಿತದ ತಾಂತ್ರಿಕ ಕಾರಣಗಳಿಂದ ಲಾಂಚ್‌ ಕಾರ್ಯಕ್ರಮವನ್ನು ಮುಂದೂಡಲು ಸಾಧ್ಯವಿರಲಿಲ್ಲ.
icon

(2 / 9)

ತಾರಗಿರಿ ಅಥವಾ ತಾರಾಗಿರಿ ಲಾಂಚ್‌ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಯೋಜಿಸಲಾಗಿತ್ತು. ಆದರೆ, ಇಂಗ್ಲೆಂಡ್‌ ಎರಡನೇ ಎಲಿಜಬೆತ್‌ ನಿಧನದ ಬಳಿಕ ಇಂದು ದೇಶಾದ್ಯಂತ ಶೋಕಾಚರಣೆ ನಡೆಯುತ್ತಿರುವುದರಿಂದ ಕಾರ್ಯಕ್ರಮವಿಲ್ಲದೆ ತಾರಗಿರಿಯನ್ನು ಲಾಂಚ್‌ ಮಾಡಲಾಗಿದೆ. ಸಮುದ್ರದ ಉಬ್ಬರವಿಳಿತದ ತಾಂತ್ರಿಕ ಕಾರಣಗಳಿಂದ ಲಾಂಚ್‌ ಕಾರ್ಯಕ್ರಮವನ್ನು ಮುಂದೂಡಲು ಸಾಧ್ಯವಿರಲಿಲ್ಲ.(PTI)

ಈ ವಾರ್‌ಶಿಪ್‌ ಅಥವಾ ಯುದ್ಧ ನೌಕೆಗೆ ತಾರಗಿರಿ ಎಂದು ಹೆಸರಿಟ್ಟಿರುವುದು ಚಾರು ಸಿಂಗ್‌. ಇವರು ನೌಕಾಪಡೆಯ ವಿಧವೆಯರ ಕಲ್ಯಾಣ ಸಂಘ (ವೆಸ್ಟರ್ನ್‌ ವಿಭಾಗ)ದ ಅಧ್ಯಕ್ಷರು ಮತ್ತು ವೈಸ್‌ ಅಡ್ಮಿರಲ್‌ ಅಜೇಂದ್ರ ಬಹುದ್ದರ್‌ ಸಿಂಗ್‌ ಅವರ ಪತ್ನಿ.
icon

(3 / 9)

ಈ ವಾರ್‌ಶಿಪ್‌ ಅಥವಾ ಯುದ್ಧ ನೌಕೆಗೆ ತಾರಗಿರಿ ಎಂದು ಹೆಸರಿಟ್ಟಿರುವುದು ಚಾರು ಸಿಂಗ್‌. ಇವರು ನೌಕಾಪಡೆಯ ವಿಧವೆಯರ ಕಲ್ಯಾಣ ಸಂಘ (ವೆಸ್ಟರ್ನ್‌ ವಿಭಾಗ)ದ ಅಧ್ಯಕ್ಷರು ಮತ್ತು ವೈಸ್‌ ಅಡ್ಮಿರಲ್‌ ಅಜೇಂದ್ರ ಬಹುದ್ದರ್‌ ಸಿಂಗ್‌ ಅವರ ಪತ್ನಿ.(@airnewsalerts/Twitter)

ಸ್ವದೇಶಿ ನಿರ್ಮಾಣ ತಂತ್ರಗಳನ್ನು ಬಳಸಿಕೊಂಡು ಈ ವಾರ್‌ಶಿಪ್‌ ನಿರ್ಮಾಣ ಮಾಡಿರುವುದಾಗಿ ಎಂಡಿಎಲ್‌ ತಿಳಿಸಿದೆ. ಲಾಂಚ್‌ ಮಾಡಿದ ಸಮಯದಲ್ಲಿ ಈ ಹಡಗಿನ ತೂಕ 3510 ಟನ್‌ಗಳಿವೆ. ಭಾರತೀಯ ನೌಕಾಪಡೆಯ ನಾವಲ್‌ ಡಿಸೈನ್‌ ಈ ಹಡಗಿನ ವಿನ್ಯಾಸ ಮಾಡಿದೆ. ಇದರೊಂದಿಗೆ ವಾರ್‌ಶಿಪ್‌ ಓವರ್‌ಸೀಯಿಂಗ್‌ ಟೀಮ್‌ ಕೂಡ ಈ ಯುದ್ಧ ನೌಕೆಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದೆ.
icon

(4 / 9)

ಸ್ವದೇಶಿ ನಿರ್ಮಾಣ ತಂತ್ರಗಳನ್ನು ಬಳಸಿಕೊಂಡು ಈ ವಾರ್‌ಶಿಪ್‌ ನಿರ್ಮಾಣ ಮಾಡಿರುವುದಾಗಿ ಎಂಡಿಎಲ್‌ ತಿಳಿಸಿದೆ. ಲಾಂಚ್‌ ಮಾಡಿದ ಸಮಯದಲ್ಲಿ ಈ ಹಡಗಿನ ತೂಕ 3510 ಟನ್‌ಗಳಿವೆ. ಭಾರತೀಯ ನೌಕಾಪಡೆಯ ನಾವಲ್‌ ಡಿಸೈನ್‌ ಈ ಹಡಗಿನ ವಿನ್ಯಾಸ ಮಾಡಿದೆ. ಇದರೊಂದಿಗೆ ವಾರ್‌ಶಿಪ್‌ ಓವರ್‌ಸೀಯಿಂಗ್‌ ಟೀಮ್‌ ಕೂಡ ಈ ಯುದ್ಧ ನೌಕೆಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದೆ.(@MazagonDockLtd/Twitter)

149 ಮೀಟರ್‌ ಉದ್ದ ಮತ್ತು 17.8 ಮೀಟರ್‌ ಅಗಲದ ಈ ಯುದ್ಧ ನೌಕೆಯು ಎರಡು ಗ್ಯಾಸ್‌ ಟರ್ಬೈನ್‌ ಮತ್ತು ಎರಡು ಮುಖ್ಯ ಡೀಸೆಲ್‌ ಎಂಜಿನ್‌ ಹೊಂದಿದೆ. ಇದರ ನಿರ್ಮಾಣಕ್ಕೆ ಸ್ವದೇಶಿ ನಿರ್ಮಿತ ಡಿಎಂಆರ್‌ 249ಎ ಉಕ್ಕು ಬಳಸಲಾಗಿದೆ. ಈ ಉಕ್ಕನ್ನು ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ ನಿರ್ಮಿಸಿದೆ.
icon

(5 / 9)

149 ಮೀಟರ್‌ ಉದ್ದ ಮತ್ತು 17.8 ಮೀಟರ್‌ ಅಗಲದ ಈ ಯುದ್ಧ ನೌಕೆಯು ಎರಡು ಗ್ಯಾಸ್‌ ಟರ್ಬೈನ್‌ ಮತ್ತು ಎರಡು ಮುಖ್ಯ ಡೀಸೆಲ್‌ ಎಂಜಿನ್‌ ಹೊಂದಿದೆ. ಇದರ ನಿರ್ಮಾಣಕ್ಕೆ ಸ್ವದೇಶಿ ನಿರ್ಮಿತ ಡಿಎಂಆರ್‌ 249ಎ ಉಕ್ಕು ಬಳಸಲಾಗಿದೆ. ಈ ಉಕ್ಕನ್ನು ಸ್ಟೀಲ್‌ ಅಥಾರಿಟಿ ಆಫ್‌ ಇಂಡಿಯಾ ಲಿಮಿಟೆಡ್‌ ನಿರ್ಮಿಸಿದೆ.(@MazagonDockLtd/Twitter)

ತಾರಾಗಿರಿಯಲ್ಲಿ ಸ್ವದೇಶಿ ನಿರ್ಮಿತ ಯುದ್ಧ ಶಸ್ತ್ರಾಸ್ತ್ರಗಳು, ಸೆನ್ಸಾರ್‌ಗಳು, ಅಡ್ವಾನ್ಸಡ್‌ ಆಕ್ಕಸನ್‌ ಇನ್‌ಫಾರ್ಮೆಷನ್‌ ಸಿಸ್ಟಮ್‌, ಇಂಟಿಗ್ರೇಟೆಡ್‌ ಪ್ಲಾಟ್‌ಫಾರ್ಮ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌, ಮಾಡ್ಯುಲರ್‌ ಲಿವಿಂಗ್‌ ಸ್ಪೇಸ್‌ಗಳು ಸೇರಿದಂತೆ ಹಲವು ಫೀಚರ್‌ಗಳನ್ನು ಈ ಯುದ್ಧ ನೌಕೆ ಹೊಂದಿದೆ.
icon

(6 / 9)

ತಾರಾಗಿರಿಯಲ್ಲಿ ಸ್ವದೇಶಿ ನಿರ್ಮಿತ ಯುದ್ಧ ಶಸ್ತ್ರಾಸ್ತ್ರಗಳು, ಸೆನ್ಸಾರ್‌ಗಳು, ಅಡ್ವಾನ್ಸಡ್‌ ಆಕ್ಕಸನ್‌ ಇನ್‌ಫಾರ್ಮೆಷನ್‌ ಸಿಸ್ಟಮ್‌, ಇಂಟಿಗ್ರೇಟೆಡ್‌ ಪ್ಲಾಟ್‌ಫಾರ್ಮ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌, ಮಾಡ್ಯುಲರ್‌ ಲಿವಿಂಗ್‌ ಸ್ಪೇಸ್‌ಗಳು ಸೇರಿದಂತೆ ಹಲವು ಫೀಚರ್‌ಗಳನ್ನು ಈ ಯುದ್ಧ ನೌಕೆ ಹೊಂದಿದೆ.(@airnewsalerts/Twitter)

ಈ ಯುದ್ಧ ನೌಕೆಯು ಮೇಲ್ಮೈನಿಂದ ಮೇಲ್ಮೈಗೆ ಸಾಗುವ ಸೂಪರ್‌ಸೋನಿಕ್‌ ಕ್ಷಿಪಣಿ ವ್ಯವಸ್ಥೆಗಳನ್ನೂ ಹೊಂದಿದೆ. ಸಾಗರದ ವೈರಿಗಳ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳ ಕ್ರೂಷ್‌ ಕ್ಷಿಪಣಿಗಳಿಗೆ ಪ್ರತ್ಯುತ್ತರ ನೀಡುವಂತೆ ಈ ನೌಕೆಯನ್ನು ನಿರ್ಮಿಸಲಾಗಿದೆ. 
icon

(7 / 9)

ಈ ಯುದ್ಧ ನೌಕೆಯು ಮೇಲ್ಮೈನಿಂದ ಮೇಲ್ಮೈಗೆ ಸಾಗುವ ಸೂಪರ್‌ಸೋನಿಕ್‌ ಕ್ಷಿಪಣಿ ವ್ಯವಸ್ಥೆಗಳನ್ನೂ ಹೊಂದಿದೆ. ಸಾಗರದ ವೈರಿಗಳ ಯುದ್ಧ ವಿಮಾನಗಳು ಮತ್ತು ಯುದ್ಧ ನೌಕೆಗಳ ಕ್ರೂಷ್‌ ಕ್ಷಿಪಣಿಗಳಿಗೆ ಪ್ರತ್ಯುತ್ತರ ನೀಡುವಂತೆ ಈ ನೌಕೆಯನ್ನು ನಿರ್ಮಿಸಲಾಗಿದೆ. (PTI)

ಇದರಲ್ಲಿ 30 ಎಂಎಂ ರಾಪಿಡ್‌ ಫೈರ್‌ ಗನ್‌ ವ್ಯವಸ್ಥೆಯೂ ಇದ್ದು, ಹತ್ತಿರಕ್ಕೆ ಬರುವ ವೈರಿಗಳನ್ನು ಸುಟ್ಟು ಹಾಕಲಿದೆ. ಇದರಲ್ಲಿ ರಾಕೆಟ್‌ ಲಾಂಚರ್‌ಗಳು, ಸಬ್‌ ಮೆರಿನ್‌ಗಳಿಂದ ತೊಂದರೆಯಾಗದಂತಹ ವ್ಯವಸ್ಥೆಗಳೂ ಈ ನೌಕೆಯಲ್ಲಿದೆ.
icon

(8 / 9)

ಇದರಲ್ಲಿ 30 ಎಂಎಂ ರಾಪಿಡ್‌ ಫೈರ್‌ ಗನ್‌ ವ್ಯವಸ್ಥೆಯೂ ಇದ್ದು, ಹತ್ತಿರಕ್ಕೆ ಬರುವ ವೈರಿಗಳನ್ನು ಸುಟ್ಟು ಹಾಕಲಿದೆ. ಇದರಲ್ಲಿ ರಾಕೆಟ್‌ ಲಾಂಚರ್‌ಗಳು, ಸಬ್‌ ಮೆರಿನ್‌ಗಳಿಂದ ತೊಂದರೆಯಾಗದಂತಹ ವ್ಯವಸ್ಥೆಗಳೂ ಈ ನೌಕೆಯಲ್ಲಿದೆ.(@MazagonDockLtd/Twitter)

ಭಾರತೀಯ ನೌಕಾಪಡೆಯ ನಾವಲ್‌ ಡಿಸೈನ್‌ ಈ ಹಡಗಿನ ವಿನ್ಯಾಸ ಮಾಡಿದೆ. ಇದರೊಂದಿಗೆ ವಾರ್‌ಶಿಪ್‌ ಓವರ್‌ಸೀಯಿಂಗ್‌ ಟೀಮ್‌ ಕೂಡ ಈ ಯುದ್ಧ ನೌಕೆಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದೆ.
icon

(9 / 9)

ಭಾರತೀಯ ನೌಕಾಪಡೆಯ ನಾವಲ್‌ ಡಿಸೈನ್‌ ಈ ಹಡಗಿನ ವಿನ್ಯಾಸ ಮಾಡಿದೆ. ಇದರೊಂದಿಗೆ ವಾರ್‌ಶಿಪ್‌ ಓವರ್‌ಸೀಯಿಂಗ್‌ ಟೀಮ್‌ ಕೂಡ ಈ ಯುದ್ಧ ನೌಕೆಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದೆ.(PTI)


ಇತರ ಗ್ಯಾಲರಿಗಳು