ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮಂಗಗಳಿಗೂ ಓಣಂ ಹಬ್ಬದ ಊಟ; ಇಲ್ಲಿವೆ ನೋಡಿ ಕೆಲವು ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮಂಗಗಳಿಗೂ ಓಣಂ ಹಬ್ಬದ ಊಟ; ಇಲ್ಲಿವೆ ನೋಡಿ ಕೆಲವು ಫೋಟೋಸ್

ಕೇರಳದ ಈ ಪುರಾತನ ದೇವಸ್ಥಾನದಲ್ಲಿ ಮಂಗಗಳಿಗೂ ಓಣಂ ಹಬ್ಬದ ಊಟ; ಇಲ್ಲಿವೆ ನೋಡಿ ಕೆಲವು ಫೋಟೋಸ್

ಕೇರಳದ ಪುರಾತನ ಐದು ಶಾಸ್ತಾ ದೇವಾಲಯಗಳ ಪೈಕಿ ಒಂದಾದ ಶಾಸ್ತಾಂಕೋಟ್ಟ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಓಣಂ ಹಬ್ಬದ ಸಂದರ್ಭದಲ್ಲಿ ವಾನರ ಭೋಜನ ಸೇವೆ ನಡೆಯುವುದು ವಾಡಿಕೆ. ಈ ಬಾರಿಯೂ  ಈ ಭೋಜನ ಕೂಟ ನಡೆಯಿತು. ಇಲ್ಲಿದೆ ಫೋಟೋ ವರದಿ. 

ಕೇರಳದಲ್ಲಿ ಓಣಂ ಹಬ್ಬ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ನಿನ್ನೆಯಷ್ಟೆ (ಆ. 29) ತಿರುಓಣಂ ಹಬ್ಬ ಆಚರಿಸಲಾಗಿದ್ದು, ಶಾಸ್ತಾಂಕೋಟ್ಟ ದೇವಸ್ಥಾನದಲ್ಲಿ ವಾನರ ಸದ್ಯ (ಮಂಗಗಳ ಭೋಜನ ಕೂಟ) ನಡೆಯಿತು. ಮಂಗಗಳು ಈ ಊಟಕ್ಕಾಗಿ ಕಾಯುತ್ತಿರುತ್ತವೆ. ಮನುಷ್ಯರಿಗೆ ಊಟ ಬಡಿಸುವಂತೆಯೇ ಬಾಳೆ ಎಲೆ ಹರಡಿ ಊಟ ಬಡಿಸುವುದು ಸಂಪ್ರದಾಯ. 
icon

(1 / 5)

ಕೇರಳದಲ್ಲಿ ಓಣಂ ಹಬ್ಬ ನಾಡಹಬ್ಬವಾಗಿ ಆಚರಿಸಲ್ಪಡುತ್ತದೆ. ನಿನ್ನೆಯಷ್ಟೆ (ಆ. 29) ತಿರುಓಣಂ ಹಬ್ಬ ಆಚರಿಸಲಾಗಿದ್ದು, ಶಾಸ್ತಾಂಕೋಟ್ಟ ದೇವಸ್ಥಾನದಲ್ಲಿ ವಾನರ ಸದ್ಯ (ಮಂಗಗಳ ಭೋಜನ ಕೂಟ) ನಡೆಯಿತು. ಮಂಗಗಳು ಈ ಊಟಕ್ಕಾಗಿ ಕಾಯುತ್ತಿರುತ್ತವೆ. ಮನುಷ್ಯರಿಗೆ ಊಟ ಬಡಿಸುವಂತೆಯೇ ಬಾಳೆ ಎಲೆ ಹರಡಿ ಊಟ ಬಡಿಸುವುದು ಸಂಪ್ರದಾಯ. (Sasthamcottashridharmasasthatemple)

ಈ ಜೀವ ಜಗತ್ತಿನಲ್ಲಿ ಎಲ್ಲ ಜೀವಿಗಳೂ ಸಮಾನ ಎಂಬ ಸಂದೇಶವನ್ನು ಸಾರುವ ಓಣಂ ಹಬ್ಬದಲ್ಲಿ ಈ ಆಚರಣೆ ಗಮನಸೆಳೆಯುತ್ತದೆ. ಈ ಭೋಜನದಲ್ಲಿ ಉಪ್ಪಿನಕಾಯಿಯಿಂದ ಹಿಡಿದು ಹಪ್ಪಳ, ಪಾಯಸ, ಹಣ್ಣು ಹಂಪಲು ತನಕ ಎಲ್ಲ ರೀತಿಯ ಭಕ್ಷ್ಯಗಳೂ ಇರುವುದು ವಿಶೇಷ. 
icon

(2 / 5)

ಈ ಜೀವ ಜಗತ್ತಿನಲ್ಲಿ ಎಲ್ಲ ಜೀವಿಗಳೂ ಸಮಾನ ಎಂಬ ಸಂದೇಶವನ್ನು ಸಾರುವ ಓಣಂ ಹಬ್ಬದಲ್ಲಿ ಈ ಆಚರಣೆ ಗಮನಸೆಳೆಯುತ್ತದೆ. ಈ ಭೋಜನದಲ್ಲಿ ಉಪ್ಪಿನಕಾಯಿಯಿಂದ ಹಿಡಿದು ಹಪ್ಪಳ, ಪಾಯಸ, ಹಣ್ಣು ಹಂಪಲು ತನಕ ಎಲ್ಲ ರೀತಿಯ ಭಕ್ಷ್ಯಗಳೂ ಇರುವುದು ವಿಶೇಷ. (Sasthamcottashridharmasasthatemple)

ಶ್ರೀ ಶಾಸ್ತಾಂಕೋಟ್ಟ ಧರ್ಮಶಾಸ್ತಾ ದೇವಸ್ಥಾನದಲ್ಲಿ ವಾನರ ಭೋಜನಶಾಲೆ ಎಂದೆ ಪ್ರತ್ಯೇಕ ಇದೆ. ಅಲ್ಲೇ ಮಂಗಗಳಿಗೆ ಊಟ ಬಡಿಸಲಾಗುತ್ತದೆ. ದೇವಾಲಯದ ಸಿಬ್ಬಂದಿ ಬಾಳೆ ಎಲೆ ಹರಡಿ ಊಟ ಬಡಿಸುವುದು ವಾಡಿಕೆ. ತಿರು ಓಣಂ ದಿನದ ಈ ಆಚರಣೆ ದಶಕಗಳಿಂದ ನಡೆದು ಬಂದಿರುವಂಥದ್ದು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. 
icon

(3 / 5)

ಶ್ರೀ ಶಾಸ್ತಾಂಕೋಟ್ಟ ಧರ್ಮಶಾಸ್ತಾ ದೇವಸ್ಥಾನದಲ್ಲಿ ವಾನರ ಭೋಜನಶಾಲೆ ಎಂದೆ ಪ್ರತ್ಯೇಕ ಇದೆ. ಅಲ್ಲೇ ಮಂಗಗಳಿಗೆ ಊಟ ಬಡಿಸಲಾಗುತ್ತದೆ. ದೇವಾಲಯದ ಸಿಬ್ಬಂದಿ ಬಾಳೆ ಎಲೆ ಹರಡಿ ಊಟ ಬಡಿಸುವುದು ವಾಡಿಕೆ. ತಿರು ಓಣಂ ದಿನದ ಈ ಆಚರಣೆ ದಶಕಗಳಿಂದ ನಡೆದು ಬಂದಿರುವಂಥದ್ದು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ. (Sasthamcottashridharmasasthatemple)

ಇದಕ್ಕೊಂದು ಪುರಾಣ ಕಥೆಯೂ ಇದೆ. ರಾವಣ ಅಪಹರಿಸಿಕೊಂಡು ಹೋದ ಸೀತಾದೇವಿಯನ್ನು ಹುಡುಕುತ್ತ ಶ್ರೀರಾಮನು ತನ್ನ ವಾನರ ಸೇನೆಯೊಂದಿಗೆ ಈ ದೇವಸ್ಥಾನದ ಬಳಿ ತಲುಪಿದಾಗ, ಎಲ್ಲರಿಗೂ ಹಸಿವಾಗಿತ್ತು. ದೇವಸ್ಥಾನದಲ್ಲೇ ಅಡುಗೆ ಮಾಡಿ ಅವರಿಗೆ ಉಣಬಡಿಸಲಾಗಿತ್ತು ಎಂಬುದು ಐತಿಹ್ಯ. ಅದರ ನೆನಪಿಗಾಗಿ ಈಗ ವಾನರ ಭೋಜನ ಏರ್ಪಡಿಸಲಾಗುತ್ತದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. 
icon

(4 / 5)

ಇದಕ್ಕೊಂದು ಪುರಾಣ ಕಥೆಯೂ ಇದೆ. ರಾವಣ ಅಪಹರಿಸಿಕೊಂಡು ಹೋದ ಸೀತಾದೇವಿಯನ್ನು ಹುಡುಕುತ್ತ ಶ್ರೀರಾಮನು ತನ್ನ ವಾನರ ಸೇನೆಯೊಂದಿಗೆ ಈ ದೇವಸ್ಥಾನದ ಬಳಿ ತಲುಪಿದಾಗ, ಎಲ್ಲರಿಗೂ ಹಸಿವಾಗಿತ್ತು. ದೇವಸ್ಥಾನದಲ್ಲೇ ಅಡುಗೆ ಮಾಡಿ ಅವರಿಗೆ ಉಣಬಡಿಸಲಾಗಿತ್ತು ಎಂಬುದು ಐತಿಹ್ಯ. ಅದರ ನೆನಪಿಗಾಗಿ ಈಗ ವಾನರ ಭೋಜನ ಏರ್ಪಡಿಸಲಾಗುತ್ತದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. (Sasthamcottashridharmasasthatemple)

ಶಾಸ್ತಾಂಕೋಟ್ಟ ದೇವಸ್ಥಾನ ಇರುವುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಇಲ್ಲಿನ ಮಂಗಗಳಿಗೆ ಅವಲಕ್ಕಿ ಪಾಯಸ ಬಲು ಇಷ್ಟ. ಇದಲ್ಲದೆ, ಹಪ್ಪಳ, ಶರ್ಕರವರಟ್ಟಿ, ಬಾಳೆಕಾಯಿ ಚಿಪ್ಸ್‌ ಕೂಡ ಕೊಡುತ್ತಾರೆ. ಇದೇ ರೀತಿ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿಯಲ್ಲಿರುವ ಶ್ರೀ ಕಲ್ಲೇಲಿ ಊರಲಿ ಅಪ್ಪೂಪ್ಪನ್‌ ಕಾವು ಎಂಬಲ್ಲಿ, ಕಾಸರಗೋಡು ಜಿಲ್ಲೆ ಎಡೆಯಿಲಕ್ಕಾಡು ಎಂಬಲ್ಲಿ ಕೂಡ ವಾನರ ಭೋಜನ ಸೇವೆ ಇದೆ. 
icon

(5 / 5)

ಶಾಸ್ತಾಂಕೋಟ್ಟ ದೇವಸ್ಥಾನ ಇರುವುದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ. ಇಲ್ಲಿನ ಮಂಗಗಳಿಗೆ ಅವಲಕ್ಕಿ ಪಾಯಸ ಬಲು ಇಷ್ಟ. ಇದಲ್ಲದೆ, ಹಪ್ಪಳ, ಶರ್ಕರವರಟ್ಟಿ, ಬಾಳೆಕಾಯಿ ಚಿಪ್ಸ್‌ ಕೂಡ ಕೊಡುತ್ತಾರೆ. ಇದೇ ರೀತಿ ಪತ್ತನಂತಿಟ್ಟ ಜಿಲ್ಲೆಯ ಕೊನ್ನಿಯಲ್ಲಿರುವ ಶ್ರೀ ಕಲ್ಲೇಲಿ ಊರಲಿ ಅಪ್ಪೂಪ್ಪನ್‌ ಕಾವು ಎಂಬಲ್ಲಿ, ಕಾಸರಗೋಡು ಜಿಲ್ಲೆ ಎಡೆಯಿಲಕ್ಕಾಡು ಎಂಬಲ್ಲಿ ಕೂಡ ವಾನರ ಭೋಜನ ಸೇವೆ ಇದೆ. (Sasthamcottashridharmasasthatemple)


ಇತರ ಗ್ಯಾಲರಿಗಳು