India vs West Indies: ಸತತ 2 ಸೋಲುಗಳ ಬಳಿಕ ಮುಂದುವರಿದ ಟೀಂ ಇಂಡಿಯಾ ಗೆಲುವು; 4ನೇ ಟಿ20ಯಲ್ಲಿ ವಿಂಡೀಸ್ ಮಣಿಸಿದ ರೋಚಕ ಕ್ಷಣಗಳು
ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ ಅವರ ದಾಖಲೆಯ ಕ್ವಾಲಿಟಿ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್‌ಗಳ ಗೆಲುವು ಸಾಧಿಸಿದೆ. ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿದೆ. ನಿನ್ನೆಯ ಪಂದ್ಯ ಹೇಗಿತ್ತು ಅನ್ನೋದರ ಫೋಟೋಸ್ ನೋಡಿ.
(1 / 6)
4ನೇ ಟಿ20 ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಟಿ20 ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ನಿನ್ನೆಯ (ಆಗಸ್ಟ್ 12, ಶನಿವಾರ) ಪಂದ್ಯದಲ್ಲಿ ದಾಖಲೆಯ ಕ್ವಾಲಿಟಿ ಬ್ಯಾಟಿಂಗ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. (AFP)
(2 / 6)
ಟೀಂ ಇಂಡಿಯಾಗೆ ಸ್ಪರ್ಧಾತ್ಮಕ ರನ್ ಪೇರಿಸಲು ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ ಪ್ರಮುಖ ಕಾಣಿಕೆ ನೀಡಿದರು. 31 ಎಸೆತಗಳಲ್ಲಿ 61 ರನ್ ಗಳಿಸಿದರು. ಶಾಯ್ ಹೋಪ್ 29 ಎಸೆತಗಳಿಂದ 45 ರನ್ ಪೇರಿಸಿದ್ರು. ಅಂತಿಮವಾಗಿ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತ್ತು. (ICC Twitter)
(3 / 6)
4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಪರ 4 ಓವರ್ ಎಸೆದ ವೇಗಿ ಅರ್ಷದೀಪ್ ಸಿಂಗ್ 38 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಎರಡು ವಿಕೆಟ್‌ಗಳನ್ನು ಪವರ್ ಪ್ಲೇನಲ್ಲೇ ಎಗರಿಸಿದ್ರು. (AFP)
(4 / 6)
ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ನಿಕೋಲಸ್ ಪೂರನ್ ಅವರನ್ನು ಬೇಗ ಔಟ್ ಮಾಡಿದರು. ಜೊತೆಗೆ ನಾಯಕ ರೋವ್‌ಮನ್ ಪೊವೆಲ್ ಅವರನ್ನ ಬಂದಷ್ಟೇ ವೇಗವಾಗಿ ಪೆವಿಲಿಯನ್‌ಗೆ ಕಳಿಸಿದರು. ವಿಂಡೀಸ್‌ನ ಇಬ್ಬರೂ ಆಟಗಾರರು ತಲಾ 1 ರನ್‌ಗೆ ವಿಕೆಟ್ ಒಪ್ಪಿಸಿದರು.(BCCI Twitter)
(5 / 6)
ವಿಂಡೀಸ್‌ನ ಇನ್ನಿಂಗ್ಸ್ ಮುಗಿದ ಬಳಿಕ ಟೀಂ ಇಂಡಿಯಾದ ಶುಭ್ಮನ್ ಗಿಲ್ ಮತ್ತು ಜೈಸ್ವಾಲ್ ಆಟ ಮಾತ್ರ ನಡೆಯಿತು. ಗಿಲ್ 47 ಎಸೆತಗಳಿಂದ 77 ರನ್ ಗಳಿಸಿ 16ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. (AP)
ಇತರ ಗ್ಯಾಲರಿಗಳು