India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20ಯಲ್ಲಿ ಎಡವಿದ ಟೀಂ ಇಂಡಿಯಾ; ಸರಣಿ ಸೋತ ಹಾರ್ದಿಕ್ ಪಡೆ; ಫೋಟೋಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  India Vs West Indies: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20ಯಲ್ಲಿ ಎಡವಿದ ಟೀಂ ಇಂಡಿಯಾ; ಸರಣಿ ಸೋತ ಹಾರ್ದಿಕ್ ಪಡೆ; ಫೋಟೋಸ್

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20ಯಲ್ಲಿ ಎಡವಿದ ಟೀಂ ಇಂಡಿಯಾ; ಸರಣಿ ಸೋತ ಹಾರ್ದಿಕ್ ಪಡೆ; ಫೋಟೋಸ್

ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ವಿಂಡೀಸ್ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿತು.

ವೆಸ್ಟ್ ಇಂಡೀಸ್ ಪರ ಬ್ರೆಂಡನ್ ಕಿಂಗ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಮ್ಮ ತಂಡವನ್ನು ಗೆಲ್ಲಿಸಿದರು. 55 ಎಸೆತಗಳಿಂದ 5 ಬೌಂಡರಿ 6 ಸಿಕ್ಸರ್ ಸೇರಿ 85 ರನ್ ಗಳಿಸಿದರು.
icon

(1 / 5)

ವೆಸ್ಟ್ ಇಂಡೀಸ್ ಪರ ಬ್ರೆಂಡನ್ ಕಿಂಗ್ ಸ್ಫೋಟಕ ಬ್ಯಾಟಿಂಗ್ ಮಾಡಿ ತಮ್ಮ ತಂಡವನ್ನು ಗೆಲ್ಲಿಸಿದರು. 55 ಎಸೆತಗಳಿಂದ 5 ಬೌಂಡರಿ 6 ಸಿಕ್ಸರ್ ಸೇರಿ 85 ರನ್ ಗಳಿಸಿದರು.(AP)

ಫ್ಲೋರಿಡಾದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ನ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕೂಡ ಉತ್ತಮ ಆಟವಾಡಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಪೂರನ್ 35 ಎಸೆತಗಳಿಂದ 1 ಬೌಂಡರಿ 4 ಸಿಕ್ಸರ್‌ ಸೇರಿ 47 ರನ್ ಗಳಿಸಿದರು.
icon

(2 / 5)

ಫ್ಲೋರಿಡಾದಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ವಿಂಡೀಸ್‌ನ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಕೂಡ ಉತ್ತಮ ಆಟವಾಡಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಪೂರನ್ 35 ಎಸೆತಗಳಿಂದ 1 ಬೌಂಡರಿ 4 ಸಿಕ್ಸರ್‌ ಸೇರಿ 47 ರನ್ ಗಳಿಸಿದರು.(AFP)

ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆದ ವಿಂಡೀಸ್ ವಿರುದ್ಧ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಕೇವಲ 9 ರನ್ ಗಳಿಸಿ ನಿರಾಸೆ ಮೂಡಿಸಿದರು.
icon

(3 / 5)

ಆಗಸ್ಟ್ 13 ರಂದು ಫ್ಲೋರಿಡಾದಲ್ಲಿ ನಡೆದ ವಿಂಡೀಸ್ ವಿರುದ್ಧ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಕೇವಲ 9 ರನ್ ಗಳಿಸಿ ನಿರಾಸೆ ಮೂಡಿಸಿದರು.(AP)

ಲಾಡರ್‌ಹಿಲ್‌ನಲ್ಲಿರುವ ಸೆಂಟ್ರೆಲ್ ಬ್ರೋವರ್ಡ್ ರೀಜನಲ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದಾಗ ವಿಂಡೀಸ್‌ನ ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ಸಂಭ್ರಮಿಸಿದ್ದು ಹೀಗೆ.
icon

(4 / 5)

ಲಾಡರ್‌ಹಿಲ್‌ನಲ್ಲಿರುವ ಸೆಂಟ್ರೆಲ್ ಬ್ರೋವರ್ಡ್ ರೀಜನಲ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡಿದಾಗ ವಿಂಡೀಸ್‌ನ ರೋಸ್ಟನ್ ಚೇಸ್ ಮತ್ತು ಜೇಸನ್ ಹೋಲ್ಡರ್ ಸಂಭ್ರಮಿಸಿದ್ದು ಹೀಗೆ.(AP)

ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಪರ ನಿನ್ನೆ (ಆಗಸ್ಟ್ 13, ಭಾನುವಾರ) ಅಗ್ರ ಸ್ಕೋರರ್ ಎನಿಸಿದರು. 45 ಎಸೆತಗಳಿಂದ 4 ಬೌಂಡರಿ 3 ಸಿಕ್ಸರ್ ಸೇರಿ 61 ರನ್‌ ಗಳಿಸಿದರು. 
icon

(5 / 5)

ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಪರ ನಿನ್ನೆ (ಆಗಸ್ಟ್ 13, ಭಾನುವಾರ) ಅಗ್ರ ಸ್ಕೋರರ್ ಎನಿಸಿದರು. 45 ಎಸೆತಗಳಿಂದ 4 ಬೌಂಡರಿ 3 ಸಿಕ್ಸರ್ ಸೇರಿ 61 ರನ್‌ ಗಳಿಸಿದರು. (AP)


ಇತರ ಗ್ಯಾಲರಿಗಳು